ಗ್ರಾಮೀಣ ರಸ್ತೆ ಕಾಮಗಾರಿ ಪೂರ್ಣಗೊಳಿಸಲು ಒತ್ತಾಯ

ಗ್ರಾಮೀಣ ರಸ್ತೆ ಕಾಮಗಾರಿ ಪೂರ್ಣಗೊಳಿಸಲು ಒತ್ತಾಯ Urge to complete rural road works

ಲೋಕದರ್ಶನ ವರದಿ 

ಹೂವಿನಹಡಗಲಿ  28: ತಾಲ್ಲೂಕಿನ ಹಿರೇಹಡಗಲಿ,  ಉತ್ತಂಗಿ, ಇಟ್ಟಿಗಿ ಮಾರ್ಗದ ರಸ್ತೆ ದುರಸ್ತಿ ಕಾಮಗಾರಿಗಳನ್ನು ಪೂರ್ಣಗೊಳಿಸಬೇಕು ಎಂದು ಆಗ್ರಹಿಸಿದ ಭಗತ್‌ಸಿಂಗ್ ಯುವಜನ ಸಾಂಸ್ಕೃತಿಕ ವೇದಿಕೆಯ ಸದಸ್ಯರು ಪಟ್ಟಣದ ಶಾಸ್ತ್ರಿ ವೃತ್ತದಲ್ಲಿ ಶನಿವಾರ ಪ್ರತಿಭಟನೆ ನಡೆಸಿದರು.ವೇದಿಕೆಯ ಸಂಚಾಲಕ ರಹಮತ್ ಬೀರಬ್ಬಿ ಮಾತನಾಡಿಅರಭಾವಿ-ಚಳ್ಳಕೆರೆ ರಾಜ್ಯ ಹೆದ್ದಾರಿಯನ್ನು ಉತ್ತಂಗಿ, ಇಟ್ಟಿಗಿ ಬಳಿ ಅಗೆದು ಜಲ್ಲಿಕಲ್ಲು ಸುರಿಯಲಾಗಿದೆ ಹಾಗೂ  ಮೈಲಾರ-ತೋರಣಗಲ್ಲು ರಾಜ್ಯ ಹೆದ್ದಾರಿಯ ರಸ್ತೆ ದುರಸ್ತಿ ಮಾಡಿ ಎಂದು ಆಗ್ರಹಿಸಿದರು.ರೈತ ಸಂಘದ ಕಾರ್ಯದರ್ಶಿ ಎಂ.ಶಿವರಾಜ, ಭಗತ್ ಸಿಂಗ್ ವೇದಿಕೆಯ ಬಿ.ಮಲ್ಲಿಕಾರ್ಜುನ, ಶಬೀರ್ ಬಾಷಾ, ಮುಜುಬು ರಹಿಮಾನ್, ಎಐಕೆಎಂಎಸ್ ಅಧ್ಯಕ್ಷ ಪಕ್ಕೀರ​‍್ಪ ಬೀರಬ್ಬಿ ಇದ್ದರು.