ಪೆಟ್ರೋಲ್ ಡೀಸೆಲ್ ಅಭಾವ ಮುಗಿಬಿದ್ದ ಜನತೆ ಪೊಲೀಸರ ನಿಯಂತ್ರಣ
Police control people who are suffering from petrol and diesel shortage
ಲಕ್ಷ್ಮೇಶ್ವರ 24: "ತಾಲೂಕಿನಲ್ಲಿ ಉತ್ತಮ ಮಳೆ ಆಗುತ್ತಿರುವುದರಿಂದ ರೈತರಲ್ಲಿ ಹರ್ಷವನ್ನು ತಂದಿದೆ ಇದರಿಂದ ಮುಂಗಾರು ಬಿತ್ತನೆಯ ಚಟುವಟಿಕೆಯ ಕಾರ್ಯ ಚುರುಕುಗೊಂಡಿವೆ. ಇಂಥ ಸಮಯದಲ್ಲಿ ರೈತರಿಗೆ ಪೆಟ್ರೋಲ್ ಡೀಸೆಲ್ ಅವಶ್ಯ ಆದರೆ ಇಂಥ ಸಮಯದಲ್ಲಿ ಡೀಸೆಲ್ ಅಬಾವ ತಲೆದುರಿದ್ದು ರೈತರು ಡೀಸೆಲ್ ಪೆಟ್ರೋಲಿಗೆ ಪರದಾಡುವಂತಾಗಿದೆ. ಪಟ್ಟಣದ ಮಂಜರಾಪುರ ರಸ್ತೆಯ ಬಂಕಲ್ಲಿ ಶನಿವಾರ ರಾತ್ರಿ 10:30 ರ ಸುಮಾರು ಪಟ್ಟಣದ ಉಳಿದ ಎಲ್ಲಾ ಬಂಕಗಳಲ್ಲಿ ಡೀಸೆಲ್ ಇಲ್ಲಾ ಎಂದು ಕೇಳಿ ಬಂದ ಹಿನ್ನೆಲೆ ರಾತ್ರಿ ಉಳುಮೆ ಮಾಡಲು ಜಮೀನಿಗೆ ತೆರಳುವ ಅನ್ನದಾತರು ಡೀಸೆಲ್ ಪಡೆದುಕೊಳ್ಳಲು ಬಂಕನ ಮುಂದೆ ಸಾಲುಗಟ್ಟಿ ನಿಂತು ಡೀಸೆಲ್ ಪಡೆಯಲು ಪರದಾಡುತ್ತಿರುವುದು.
ಅದರಂತೆ ಇಂದು ಭಾನುವಾರ ಬೆಳಿಗ್ಗೆ ಮಾನ್ವಿಯರ ಪೆಟ್ರೋಲ್ ಬಂಕಗೆ ಡೀಸೆಲ್ ಬಂದ ಕಾರಣ ಗ್ರಾಹಕರು ಪೆಟ್ರೋಲ್ ಮತ್ತು ಡೀಸೆಲ್ ಪಡೆಯಲು ಮುಗಿಬಿದ್ದರು. ಇದರಿಂದ ಪೊಲೀಸರು ಮಧ್ಯ ಪ್ರವೇಶಿಸಿ ಜನರನ್ನು ನಿಯಂತ್ರಿಸಿದರು ಹಾಗೂ ಎಲ್ಲರೂ ಸರಣಿ ಸಾಲಿನಲ್ಲಿ ನಿಂತು ಪೆಟ್ರೋಲ್ ಡೀಸೆಲ್ ಖರೀದಿಸಿ ಎಲ್ಲರಿಗೂ ಸಿಗುತ್ತದೆ ಎಂದು ಹೇಳಿ ಸಮಾಧಾನಪಡಿಸುತ್ತಿದ್ದರು ಕೃಷಿ ಚಟುವಟಿಕೆಗಳು ಚುರುಕುಗೊಂಡ ಇಂಥ ಸಮಯದಲ್ಲಿ ಸಮರ್ಕವಾಗಿ ಪೆಟ್ರೋಲ್ ಡೀಸೆಲ್ ಪೂರೈಸಲು ಸರ್ಕಾರ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ರೈತರು ಒತ್ತಾಯಿಸುತ್ತಿದ್ದಾರೆ.
ಮುಂಬೈನ ಚೆಂಬೂರಿನಲ್ಲಿ ಶಾಲಾ ಬಸ್ ಮೇಲೆ ಮರ ಉರುಳಿ ಬಿದ್ದು ವಿದ್ಯಾರ್ಥಿ ಸಾವು; ನಾಲ್ವರಿಗೆ ಗಾಯ
ಹುಡುಗಿಯ ಮನೆ ದರೋಡೆ, ಅಂತರಜಾತಿ ಪ್ರೇಮಿಗಳು ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆ, ಮರ್ಯಾದಾ ಹತ್ಯೆಗಳ ಅನುಮಾನ
ಡಿಸಿಸಿ ಬ್ಯಾಂಕಿನ 10 ವರ್ಷ ಮೇಲ್ಪಟ್ಟ ನಿರ್ದೇಶಕರ ಅನರ್ಹತೆ: ಆರ್ಬಿಐ ನಿಯಮ ಜಾರಿಗೆ ನಬಾರ್ಡ್ ಒತ್ತಾಯ, ಸರ್ಕಾರಕ್ಕೆ ಎಚ್ಚರಿಕೆ
ಮಹಾ ಸಿಎಂ ಜೊತೆ ಎಮ್ ಇಎಸ್ ಉನ್ನತಾಧಿಕಾರ ಸಭೆ ರದ್ದು: ಝಾಪಾ ಮುಖಂಡರು ಬರಿಗೈಯಿಂದ ವಾಪಸ್
ವಿವಾಹಿತೆಯ ಜೊತೆ ಪಲಾಯನ ಮಾಡಿದ ಯುವಕನ ಮನೆ ಧ್ವಂಸ : ಮಾರಕಾಸ್ತ್ರ ಹಿಡಿದು 50ಕ್ಕು ಹೆಚ್ಚು ಜನರಿಂದ ಕೃತ್ಯ
ಬೆಳಗಾವಿಯ ನಡುರಸ್ತೆಯಲ್ಲಿ ಹೊತ್ತಿ ಉರಿದ ಕಾರು : ತಡರಾತ್ರಿ ಘಟನೆಯಿಂದ ಬೆಚ್ವಿಬಿದ್ದ ಜನ 