ಗುಡಗೇರಿ ಪೊಲೀಸ್ ಠಾಣೆ ಅಧಿಕಾರಿ ಸಿಬ್ಬಂದಿ ಕಾರ್ಯ ಶ್ಲಾಘನೀಯ: ಮಾನಸಿಕ ಅಸ್ವಸ್ಥ ಮಹಿಳೆ, ಮಗು ಪತ್ತೆ


ಧಾರವಾಡ 13: ಸಣ್ಣಹನಮಂತಪ್ಪ ತಂದೆ ಭೀಮಪ್ಪ ಕಂಬಳಿ 28 ವರ್ಷ ಕೆಲಸ ಕೂಲಿ ಸಾ: ರಟ್ಟಿಗೇರಿ ತಾ: ಕುಂದಗೋಳ ಇವರ ದೂರಿನ ಮೇರೆಗೆ ಗುಡಗೇರಿ ಪೊಲೀಸ್ ಠಾಣೆಯ ಗುನ್ನಾ ನಂ. 90/2018 ಕಲಂ ಮಹಿಳೆ ಮತ್ತು ಮಗು ಕಾಣೆ ಪ್ರಕರಣ ದಾಖಲಾಗಿದೆ.

ಮಹಿಳೆ ಹಾಗೂ ಮಗು ಕಾಣೆ ಪ್ರಕರಣವಾಗಿದ್ದರಿಂದ ಗಂಭಿರವಾಗಿ ಪರಿಗಣಿಸಿ ಅವರ ಪತ್ತೆ ಕಾರ್ಯವನ್ನು ಸವಾಲಾಗಿ ಸ್ವೀಕರಿಸಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ. ಸಂಗೀತಾರವರ ಮಾರ್ಗದರ್ಶನದಲ್ಲಿ ಅವರ ಸಲಹೆ ಹಾಗೂ ಸೂಚನೆ ಮೇರೆಗೆ ಕಾಣೆಯಾದವರ ಪತ್ತೆಗಾಗಿ ಧಾರವಾಡ ಗ್ರಾಮೀಣ ಉಪ ವಿಭಾಗದ ಪೊಲೀಸ್ ಉಪಾಧೀಕ್ಷಕ ರಾಮನಗೌಡ ಹಟ್ಟಿ ಹಾಗೂ ಟಿ. ವೆಂಕಟಸ್ವಾಮಿ ಪಿ.ಐ ಕುಂದಗೋಳರವರು ಒಂದು ತನಿಖಾ ತಂಡವನ್ನು ರಚಿಸಿ ತನಿಖಾ ತಂಡದಲ್ಲಿ ನವೀನ ಈರಪ್ಪ ಜಕ್ಕಲಿ ಪಿ.ಎಸ್.ಐ, ಎಮ್.ಆರ್.ಕಾಳೆ ಎ.ಎಸ್.ಐ, ಎಮ್.ಬಿ ಕೆಲಗೇರಿ ಹೆಚ್.ಸಿ 660., ಎಸ್.ಆರ್ ಹೊಸಳ್ಳಿ ಸಿ,ಪಿ.ಸಿ 763., ಎಸ್.ಎಮ್ ಹಳ್ಳದ ಸಿ.ಪಿ.ಸಿ 783., ಎನ್.ಎಪ್ ಕಾದಾಪೂರ ಮ.ಪಿ.ಸಿ 816., ಕು: ಎಸ್.ಎಫ್ ಜಿಲ್ಲೇಣವರ ಮ.ಪಿ.ಸಿ 833 ಇವರನ್ನೊಳಗೊಂಡ ಒಂದು ತಂಡವನ್ನು ರಚಿಸಿ ದಿನಾಂಕ 10-11-2018 ರಂದು ಕಾಣೆಯಾದ ಮಹಿಳೆ ಯಲ್ಲಮ್ಮ ಸಣ್ಣಹನಮಂತಪ್ಪ ಕಂಬಳಿ 26 ವರ್ಷ ಇವಳ ಇರುವಿಕೆಯನ್ನು ಕನರ್ಾಟಕದಲ್ಲಿ ಪತ್ತೆ ಆಗದೇ ಇದ್ದಾಗ ಹೊರರಾಜ್ಯವಾದ ಆಂಧ್ರ ಪ್ರದೇಶದ ತಿರುಪತಿಯಲ್ಲಿ ಇರುವುದಾಗಿ ಸಾಮಾಜಿಕ ಜಾಲತಾಣಗಳ ಮುಖಾಂತರ ಪತ್ತೆ ಹಚ್ಚಿ, ಇರುವಿಕೆಯ ಬಗ್ಗೆ ಮಾಹಿತಿಯನ್ನು ಸಂಗ್ರಹಿಸಿ ನಂತರ ತನಿಖಾ ತಂಡ ಅಲ್ಲಿಗೆ ಹೋಗಿ ಕಾಣೆಯಾದ ಮಹಿಳೆಯನ್ನು ಪತ್ತೆ ಹಚ್ಚಿದೆ.

ಮಹಿಳೆ ಮಾನಸಿಕ ಅಸ್ವಸ್ಥಳಿದ್ದು, ಅವಳೊಂದಿಗೆ ಅವಳ ಮಗು ಫಕಿರೇಶ ಸಣ್ಣಹನುಮಂತಪ್ಪ ಕಂಬಳಿ ಇರಲಿಲ್ಲ.  ನಂತರ ಮಗುವಿನ ಇರುವಿಕೆ ಬಗ್ಗೆ ಮಾಹಿತಿ ಸಂಗ್ರಹಿಸಿ ಅದು ಚಿತ್ತೂರು ಜಿಲ್ಲೆಯ ಶಿಶು ವಿಹಾರದಲ್ಲಿರುವದಾಗಿ ಮಾಹಿತಿ ಬಂದ ಮೇರೆಗೆ ಅಲ್ಲಿಗೆ ಹೋಗಿ ಸದರಿ ಮಗುವನ್ನು ಸಹ ಕರೆದುಕೊಂಡು ಬಂದು ಅವರ ಪೋಷಕರಿಗೆ ಒಪ್ಪಿಸುವಲ್ಲಿ ಗುಡಗೇರಿ ಪೊಲೀಸ್ ಠಾಣೆಯ ಅಧಿಕಾರಿ ಹಾಗೂ ಸಿಬ್ಬಂದಿ ಜನರು ಯಶಸ್ವಿಯಾಗಿದ್ದಾರೆ. ಅವರ ಕಾರ್ಯ ಶ್ಲಾಘನೀಯವಾಗಿರುತ್ತದೆ. 

ಪತ್ತೆ ಕಾರ್ಯದಲ್ಲಿ ಭಾಗವಹಿಸಿದ ನವೀನ ಐ ಜಕ್ಕಲಿ ಪಿಎಸ್.ಐ ಹಾಗೂ ಅವರ ವಿಷೇಶ ತನಿಖಾ ತಂಡಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಬಹುಮಾನ ಘೋಷಿಸಿ, ಅಭಿನಂದಿಸಿದ್ದಾರೆ.