ಉಳವಿ ಚೆನ್ನ ಬಸವಣ್ಣ ರಥೋತ್ಸವಕ್ಕಾಗಿ ಪೋಲಿಸ್ ಇಲಾಖೆಯಿಂದ ಸುರಕ್ಷತಾ ಕ್ರಮ

ಉಳವಿ ಚೆನ್ನ ಬಸವಣ್ಣ ರಥೋತ್ಸವಕ್ಕಾಗಿ ಪೋಲಿಸ್ ಇಲಾಖೆಯಿಂದ ಸುರಕ್ಷತಾ ಕ್ರಮ  Police Department takes security measures for Ulavi Chenna Basavanna Rathotsava

      ದಾಂಡೇಲಿ ಜ 31 : ಉಳವಿ ಚೆನ್ನಬಸವೇಶ್ವರ ಜಾತ್ರೆ ಜನವರಿ 25 ರಿಂದ ಪ್ರಾರಂಭವಾಗಿದ್ದು ಪೆಭ್ರುವರಿ 5 ರವರೆಗೆ ನಡೆಯಲಿದೆ. ಫೆಬ್ರುವರಿ 3 ರವರೆಗೆ ಮಹಾರಥೋತ್ಸವ ನಡೆಯಲಿದೆ. ಜಾತ್ರೆಗೆ ಸುಮಾರು 80 ರಿಂದ 90 ಸಾವಿರ ಜನ ಸೇರಲಿರುವದರಿಂದ ಉತ್ತರ ಕನ್ನಡ ಜಿಲ್ಲಾ ಪೋಲಿಸ್ ಇಲಾಖೆಯಿಂದ ಜಾತ್ರೆಯ ಪ್ರಯುಕ್ತ ವಿಶೇಷ ಬಂದೋಬಸ್ತ ಎರಿ​‍್ಡಸಲಾಗಿದೆ ಎಂದು ಪ್ರಕಟಣೆ ನೀಡಿ ತಿಳಿಸಲಾಗಿದೆ.  

      ಜಾತ್ರೆಗೆ ಭಕ್ತಾದಿಗಳು ಚಕ್ಕಡಿ ಗಾಡಿಗಳಲ್ಲಿ , ಪಾದ ಯಾತ್ರೆಯಲ್ಲಿ ಬರುವದು ವಿಶೇಷವಾಗಿದೆ. ಸುಮಾರು 1200 ಚಕ್ಕಡಿಗಳು, 800 ಟ್ರ್ಯಾಕ್ಟರ್‌ಗಳಲ್ಲಿ ಭಕ್ತರು ಬಂದು ವಾಸ್ತವ್ಯ ಮಾಡಲಿದ್ದಾರೆ. ಈ ಹಿನ್ನೆಲೆಯಲ್ಲಿ ಭಕ್ತಾದಿಗಳ ಸುರಕ್ಷತೆಗೆ ಮತ್ತು ಯಾತ್ರಾ ಮಹೋತ್ಸವಕ್ಕೆ ಸಂಭಂದಿಸಿ ಎಲ್ಲ ಇಲಾಖೆಗಳ ಸಹಯೋಗದೊಂದಿಗೆ ಎಲ್ಲ ರೀತಿಯ ಮೂಲಭೂತ ವ್ಯವಸ್ಥೆ ಮಾಡಲಾಗಿದೆ.  ಒರ್ವ ಹೆಚ್ಚುವರಿ ಪೋಲಿಸ್ ಅಧೀಕ್ಷಕರು, ಡಿ.ಎಸ್‌.ಪಿ 1, ಸಿ.ಪಿ.ಐ 6, ಪಿ, ಎಸ್,ಐ 26, ಪೋಲಿಸ್ ಸಿಬ್ಬಂದಿ 300, ಹೋಂ ಗಾರ್ಡ 200, ಡಿ.ಎ. ಆರ್ 2 , ಕೆ.ಎಸ್‌.ಆರ್‌.ಪಿ ಒಂದು ತುಕಡಿಗಳನು ಒಳಗೊಂಡ ವಿಸೃತ ಬಂದೋಬಸ್ತ ಮಾಡಲಾಗಿದೆ.  

        ಸರ್ಕಾರದ ಮಾರ್ಗಸೂಚಿಯ ಪ್ರಕಾರ 100 ಸಿ.ಸಿ ಟಿ.ವಿಗಳನ್ನು ಅಳವಡಿಸಲಾಗಿದೆ. ಮತ್ತು ಕಮಾಂಡ ಸೆಂಟರ್ ಸ್ಥಾಪಿಸಲಾಗಿದೆ. 10 ಎಲ್‌.ಇ.ಡಿ ಸ್ಕ್ರೀನ್ ಅಳವಡಿಸಲಾಗಿದೆ. 5 ಮಿನಿ ವಾಚ್ ಟವರ್ ನಿರ್ಮಿಸಲಾಗಿದೆ. 8 ಪಾರ್ಕಿಂಗ್ ತಾಣಗಳನ್ನು ನಿರ್ಮಾಣಮಾಡಲಾಗಿದೆ. ಡ್ರೋಣ್ ಬಳಸಿ ವಿಶೇಷ ನಿಗಾ ಇಡಲಾಗುವದು ತಾತ್ಕಾಲಿಕ ಪೋಲಿಸ್ ಹೊರಠಾಣೆ ಸ್ಥಾಪಿಸಲಾಗಿದೆ. 4 ಅಂಬ್ಯುಲೆನ್ಸ್‌ ಸೇವೆಯನ್ನು ಪಡೆದು 4 ಕಡೆಗಳಲ್ಲಿ ವೈದ್ಯಕೀಯ ಚಿಕಿತ್ಸಾ ಸೌಲಭ್ಯ ಒದಲಗಿಸಲಾಗಿದೆ. 1 ಬೆಂಕಿ ನಂದಿಸುವ ವಾಹನ, ಪೈಯರ್ ಬೈಕ್ ವೆಹಿಕಲ್‌ಗಳ ನಿಯೋಜನೆ ಮಾಡಲಾಗಿದೆ. 150 ಸ್ವಯಂ ಸೇವಕರು ಸಮವಸ್ತ್ರದಲ್ಲಿ ಸೇವೆ ನೀಡಲಿದ್ದಾರೆ.

      5 ಚೆಕ್ ಪೋಸ್ಟಗಳ ಸ್ಥಾಪನೆ ಮಾಡಿ ನಿಗಾ ಇಡಲಾಗಿದೆ.. ಚಕ್ಕಡಿಗಳ ಸುರಕ್ಷತಾ ಚಾಲನೆಗಾಗಿ ದಾಂಡೇಲಿ ಉಪವಿಭಾಗದ ವ್ಯಾಪ್ತಿಯ 70 ಕಿ.ಮಿ ರಸ್ತೆಯಲ್ಲಿ ನಿರಂತರ 24 ತಾಸುಗಳ ಬೈಕ್ ಪೆಟ್ರೋಲಿಂಗ್ ತಂಡವನ್ನು ನಿಯೋಜಿಸಲಾಗಿದೆ. ಚೆಕ್ ಪೋಸ್ಟಗಳಲ್ಲಿ ಚಕ್ಕಡಿಗಳ ಗುರುತಿಸುವಿಕೆಗಾಗಿ ರೆಡಿಯಂ ಸ್ಟಿಕರ್ಸ್‌ಗಳನ್ನು ಅಂಟಿಸುವ ವಿಶೇಷ ಉಪಕ್ರಮಗಳನ್ನು ಕೈಗೊಳ್ಳಲಾಗಿದೆ. ದಾಂಡೇಲಿ ಉಪವಿಭಾಗದ 3 ತಾಲೂಕುಗಳಲ್ಲಿ ಫೆಬ್ರುವರಿ 2 ಮತ್ತು  3 ರಂದು ಮದ್ಯ ಮಾರಾಟ ನೀಷೆಧಿಸಲಾಗಿದೆ. ಕಿಸೆಗಳ್ಳರು ಮತ್ತು ಸರಗಳ್ಳರ ತಡೆಗಾಗಿ ನೆರೆ ಜಿಲ್ಲೆಗಳಾದ ಧಾರವಾಡ, ಬೆಳಗಾವಿ, ಹಾವೇರಿ, ಹುಬ್ಬಳಿಗಳಿಂದ ನುರಿತ ಪೋಲಿಸ್ ಸಿಬ್ಬಂದಿಗಳನ್ನು ಕರೆಯಿಸಿ ಜಾತ್ರಾ ಸಮಯದಲ್ಲಿ ವಿಶೇಷ ಪಡೆ ರಚಿಸಲಾಗಿದೆ. ಭಕ್ತಾದಿಗಳು ಜಾತ್ರೆಗೆ ಬರುವ ಸಮಯದಲ್ಲಿ ಸುರಕ್ಷಿತ ಮತ್ತು ಮದ್ಯಪಾನ ಮುಕ್ತ ಚಾಲನೆ ಮಾಡಿಕೊಂಡು ಬರಬೇಕು.

      ಮತ್ತು ಜಾನುವಾರುಗಳ ಬಗ್ಗೆ ವಿಶೇಷ ಮುತುವರ್ಜಿವಹಿಸಬೇಕು. ಚಕ್ಕಡಿಗಳನ್ನು ವೇಗವಾಗಿ ಓಡಿಸಬಾರದು ಸುರಕ್ಷಿತ  ಚಾಲನೆಗೆ ಆದ್ಯತೆ ಕೊಡಬೇಕು. ರಥೋತ್ಸವ ಮುಗಿದ ಮೇಲೆ ಚಕ್ಕಡಿ ಮತ್ತು ಟ್ರ್ಯಾಕ್ಟರ್‌ಗಳನ್ನು ರಾತ್ರಿ  11 ಘಂಟೆಯ ನಂತರ ವಾಪಸ್ ತೆರಳಲು ಅನುಮತಿ ನೀಡಲಾಗುವದು ಎಂದು ತಿಳಿಸಲಾಗಿದೆ. ಪೋಲಿಸ್ ತುರ್ತು ಸಹಾಯಕ್ಕಾಗಿ 112ಇ,ಆರ್,ಎಸ್, ಎಸ್, 100 ಕಂಟ್ರೋಲ್ ರೂಮ್ ಕಾರವಾರ, ಪಿಎಸ್‌.ಐ ಜೋಯಿಡಾ 9480805266, ಸಿಪಿ.ಐ ಜೋಯಿಡಾ 9480805237, ಡಿ.ಎಸ್‌.ಪಿ ದಾಂಡೇಲಿ  9480805223, ಗಳಿಗೆ ಸಂಪರ್ಕಿಸಲು ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ದೀಪನ್ ಎಮ್, ಎನ್ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.