ಇಂದು ಕೊಪ್ಪಳದಲ್ಲಿ ಕವಿಗೋಷ್ಠಿ ಹಾಗೂ ಮುಷಾಯೆರಾ: ಯಶಸ್ವಿಗೊಳಿಸಲು ಮಾನ್ವಿ ಪಾಷಾ ಕರೆ
Poets' Meet and Mushaira in Koppal Today: Manvi Pasha Calls for Success
ಕೊಪ್ಪಳ, ಆ. 7: ಆಲ್ ಇಂಡಿಯಾ ಮುಷಾಯಿರಾ ಕಮಿಟಿ, ಕೊಪ್ಪಳ ವತಿಯಿಂದ ಆಗಸ್ಟ್ 8, 2026 (ಶನಿವಾರ) ಸಂಜೆ 7 ಗಂಟೆಗೆ ನಗರದ ಹಸನ್ ರಸ್ತೆಯ ಫಿಶ್ ಮಾರ್ಕೆಟ್ ಸಮೀಪದಲ್ಲಿರುವ ಉರ್ದು ಸಾಹಿತಿ ಎಂ. ವಿಜಾರತ್ ಅಲಿ ತಾಯೆರ ಅವರ ಮಾಹಿರಾ ಫ್ರೂಟ್ಸ್ ಆವರಣದಲ್ಲಿ ಸ್ಥಳೀಯ ಉರ್ದು, ಹಿಂದಿ, ಕನ್ನಡ ಹಾಗೂ ಆಂಗ್ಲ ಭಾಷೆಯ ಕವಿಗಳಿಂದ ಕವಿಗೋಷ್ಠಿ ಹಾಗೂ ಮುಷಾಯೆರಾ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.
ಕಾರ್ಯಕ್ರಮದಲ್ಲಿ ಕವನ ವಾಚನ ಮಾಡಲು ಆಸಕ್ತಿ ಹೊಂದಿರುವ ಕವಿಗಳು ಕಾರ್ಯಕ್ರಮ ನಡೆಯುವ ದಿನವೇ ಸ್ಥಳದಲ್ಲೇ ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳಬಹುದಾಗಿದೆ. ಹೊಸಬರು ಹಾಗೂ ಯುವ ಕವಿಗಳಿಗೆ ವಿಶೇಷ ಆದ್ಯತೆ ನೀಡಲಾಗಿದ್ದು, ಹಾಸ್ಯ ಕವಿಗಳಿಗೂ ವೇದಿಕೆ ಕಲ್ಪಿಸಲಾಗುತ್ತದೆ.
ಸಾಹಿತ್ಯಾಸಕ್ತರು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕು ಎಂದು ಕಾರ್ಯಕ್ರಮದ ಸಭಾ ಸಂಚಾಲಕ ಹಾಗೂ ಸಮಾಜಸೇವಕ ಮಾನ್ವಿ ಪಾಷಾ ಪ್ರಕಟಣೆಯಲ್ಲಿ ಮನವಿ ಮಾಡಿದ್ದಾರೆ.
ಬಹುಕೋಟಿ ವಂಚನೆ : ನೀಲಣ್ಣವರ, ಪತ್ನಿ ಸೇರಿ ಆಪ್ತರ ಕಚೇರಿ, ನಿವಾಸಗಳ ಮೇಲೆ ಇಡಿ ದಾಳಿ
ಬಡೆಕೊಳ್ಳಮಠದ ಬಳಿ ಅಪಘಾತ ತಡೆಗೆ ತಾತ್ಕಾಲಿಕ ಕ್ರಮ: ಮಳೆಗಾಲ ಬಳಿಕ ಶಾಶ್ವತ ಕಾಮಗಾರಿ
ಅಂಬೋಲಿ ಬಳಿ ಕಣಿವೆಗೆ ಬಿದ್ದು ಯುವಕ ದುರ್ಮರಣ : 5 ಗಂಟೆ ಕಾರ್ಯಾಚರಣೆ ಬಳಿಕ ಶವ ಪತ್ತೆ
ಸುತಗಟ್ಟಿ ಗ್ರಾಮದಲ್ಲಿ ಪ್ರತ್ಯಕ್ಷವಾಗಿದ್ದ ಚಿರತೆ ಸೆರೆ : ನಿಟ್ಟೂಸಿರು ಬಿಟ್ಟ ಗ್ರಾಮಸ್ಥರು
ಮೈದುಂಬಿ ಹರಿಯುತ್ತಿರುವ ಘಟಪ್ರಭಾ ನದಿ: ಭರ್ತಿ ಹಂತದಲ್ಲಿ ಹಿಡಕಲ್ ಜಲಾಶಯ
ಎಚ್ಚರ ಅನಾಹುತಕ್ಕೆ ಕೈ ಮಾಡಿ ಕರೆಯುತ್ತಿದೆ: ರಸ್ತೆಯ ಭೂಗತ ವಿದ್ಯುತ್ ತಂತಿಯಿಂದ ಹೊರಬರುತ್ತಿದೆ ಬೆಂಕಿ ಕಿಡಿ-ಹೊಗೆ 