ಧಾರವಾಡದ ಸಾಹಿತ್ಯಿಕ ಪರಿಸರ ತಿಳಿಗೊಳಿಸಿದ ಕವಿ ಕಣವಿ: ಅರವಿಂದ ಕುಲಕರ್ಣಿ
Poet Kanavi sheds light on the literary environment of Dharwad: Aravind Kulkarni
ಧಾರವಾಡದ ಸಾಹಿತ್ಯಿಕ ಪರಿಸರ ತಿಳಿಗೊಳಿಸಿದ ಕವಿ ಕಣವಿ: ಅರವಿಂದ ಕುಲಕರ್ಣಿ
ಧಾರವಾಡ 18: ಬೇಂದ್ರೆ ಕಾವ್ಯದ ಮೂಲಕ ಧಾರವಾಡವನ್ನು ಕಾಣಬಹುದು. ಧಾರವಾಡವೇ ಒಂದು ಅದ್ಭತ ಜಗತ್ತು. ಈ ಜಗತ್ತು ಬೇಂದ್ರೆ ಕಾವ್ಯದಲ್ಲಿ ಅಷ್ಟೇ ಅದ್ಭುತವಾಗಿ ಮೂಡಿ ಬಂದಿದೆ ಎಂದು ಲೇಖಕ ಡಾ. ಚನ್ನಪ್ಪ ಅಂಗಡಿ ಹೇಳಿದರು.
ಧಾರವಾಡ ರಾಣಿಚೆನ್ನಮ್ಮ ನಗರದ ಧಾರವಾಡ ಕಟ್ಟೆಯ ಸಭಾಂಗಣದಲ್ಲಿ "ದ.ರಾ. ಬೇಂದ್ರೆ, ಚೆನ್ನವೀರ ಕಣವಿ ಮತ್ತು ಧಾರವಾಡ" ಎಂಬ ವಿಷಯದ ಕುರಿತು ಆಯೋಜಿದ್ದ ವಿಶೇಷ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಚೆನ್ನಪ್ಪ ಅಂಗಡಿ ಮಾತನಾಡಿದರು.
ಕಾವ್ಯವ ಬರವಣಿಗೆಯನ್ನು ಕಾವ್ಯೋದ್ಯೋಗ ಎಂದು ಬೇಂದ್ರೆಯವರು ಬಣ್ಣಿಸಿದ್ದರು. ಬೇಂದ್ರೆಯವರನ್ನು ಅನುಭಾವಿ ಕವಿ, ದಾರ್ಶನಿಕ ಕವಿ, ಶಬ್ದ ಗಾರುಡಿಗ ಎಂದು ವಿಮರ್ಶಕರು ಬಣ್ಣಿಸಿದ್ದರೂ ಬೇಂದ್ರೆಯವರು ಮೂಲಭೂತವಾಗಿ ಧಾರವಾಡದ ಕವಿಗಳಾಗಿದ್ದರು.ವೈದಿಕ ಕುಟುಂಬದಲ್ಲಿ ಜನಿಸಿ, ಅವೈದಿಕ ಪರಿಸರದಲ್ಲಿ ಬೆಳೆದ ಕವಿ ಬೇಂದ್ರೆ. ಹೀಗಾಗಿ ಅವರಿಗೆ ಗೆಳೆಯರ ಗುಂಪು ಕಟ್ಟಲು ಮತ್ತು ಮಧುರಚೆನ್ನ, ಕುವೆಂಪು ಅವರಂಥ ಕವಿಗಳ ಜೊತೆ ಆತ್ಮೀಯ ಒಡನಾಟ ಇಟ್ಟುಕೊಳ್ಳಲು ಸಾಧ್ಯವಾಯಿತು. ಹೀಗಾಗಿಯೇ ಬೇಂದ್ರೆ ಇಂದು ಒಂದು ರೂಪಕವಾಗಿ ಬೆಳೆದು ನಿಂತಿದ್ದಾರೆ ಎಂದು ಚೆನ್ನಪ್ಪ ಅಂಗಡಿ ಹೇಳಿದರು.ಬೇಂದ್ರೆಯವರಿಗೆ ಸಾಧನಕೇರಿ ಎಷ್ಟು ಮುಖ್ಯವಾಗಿತ್ತೋ ಅಷ್ಟೇ ಕಲ್ಯಾಣ ನಗರ ಚೆನ್ನವೀರ ಕಣವಿಯವರಿಗೆ ಮುಖ್ಯವಾಗಿತ್ತು. ಕಣವಿಯವರು ಚಂಬೆಳಕಿನ ಕವಿಯಾಗಿ ಬೆಳಕಿನ ಕವಿ ಬೇಂದ್ರೆಯವರ ಕಾವ್ಯ ಪರಂಪರೆಯನ್ನು ಮುಂದುವರೆಸಿದರು. ಕಣವಿಯವರು ತಮ್ಮ ಬದುಕು ಮತ್ತು ಕಾವ್ಯದಲ್ಲಿ ಸಮನ್ವಯತೆ ಸಾಧಿಸಿದರು. ಧಾರವಾಡದ ಸಾಹಿತ್ಯಕ, ಸಾಂಸ್ಕೃತಿಕ ಪರಿಸರವನ್ನು ತಿಳಿಗೊಳಿಸಿದರು ಎಂದು ರಂಗಕರ್ಮಿ ಅರವಿಂದ ಕುಲಕರ್ಣಿ ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಬಸವರಾಜ ಡೋಣೂರ ಮಾತನಾಡಿ, ಬೇಂದ್ರೆಯವರ ಕಾವ್ಯದಲ್ಲಿ ಧಾರವಾಡ ಒಂದು ಪ್ರತಿಮೆಯಾಗಿ, ರೂಪಕವಾಗಿ ಕಾಣಿಸಿಕೊಂಡಿದೆ. ಧಾರವಾಡ ಬೇಂದ್ರೆಯವರ ಕಾವ್ಯಪ್ರಜ್ಞೆಯನ್ನು ರೂಪಿಸಿದ ಶಕ್ತಿ ಕೇಂದ್ರ. ಧಾರವಾಡ ತನ್ನ ಎಲ್ಲಾ ಬೌತಿಕ, ಬೌದ್ಧಿಕ, ಆಧ್ಯಾತ್ಮಿಕ ಶಕ್ತಿ- ವೈಭವದೊಂದಿಗೆ ಬೇಂದ್ರೆ ಕಾವ್ಯದಲ್ಲಿ ಕಾಣಿಸಿಕೊಂಡಿದೆ. ಬೇಂದ್ರೆಯವರ ಉಸಿರು ಮತ್ತು ಬೇಂದ್ರೆಯವರ ಕಾವ್ಯದ ಉಸಿರು ಧಾರವಾಡದ ಪ್ರಜ್ಞೆ- ಪರಿಸರದೊಂದಿಗೆ ಬೆರೆತುಹೋಗಿತ್ತು. ಬೇಂದ್ರೆ ಧಾರವಾಡವನ್ನು ತೀವ್ರವಾಗಿ ಪ್ರೀತಿಸಿದ್ದರು ಮತ್ತು ಅಷ್ಟೇ ತೀವ್ರವಾಗಿ ಧಾರವಾಡಕ್ಕಾಗಿ ಹಂಬಲಿಸುತ್ತಿದ್ದರು. ಚೆನ್ನವೀರ ಕಣವಿ ಧಾರವಾಡಕ್ಕೆ ಘನತೆ ತಂದು ಕೊಟ್ಟ ಮತ್ತೊಬ್ಬ ಕವಿ. ಕಲ್ಯಾಣ ನಗರವನ್ನು ಕಲ್ಯಾಣವನ್ನಾಗಿ ಮಾಡಲು ಪ್ರಯತ್ನಿಸಿದರು. ಧಾರವಾಡದ ಮೂಲಕ ಕನ್ನಡ- ಕರ್ನಾಟಕ ಪ್ರಜ್ಞೆಯನ್ನು ಬೆಳೆಸಿದರು, ಬೆಳಗಿದರು ಎಂದು ಬಸವರಾಜ ಡೋಣೂರ ಹೇಳಿದರು. ಮುತ್ತು ಮಠಪತಿ ನಿರೂಪಿಸಿದರು. ಮಣಿಕಂಠ ವಂದಿಸಿದರು. ಕಾರ್ಯಕ್ರಮದಲ್ಲಿ ಡಾ.ಡಿ.ಎಂ.ಹಿರೇಮಠ, ಪ್ರೊ.ಪಿ.ಎ.ಪೊಲೀಸಪಾಟೀಲ, ಡಾ. ಮುಕುಂದ ಲಮಾಣಿ, ಶ್ರೀನಿವಾಸ ಸೊರಟೂರ, ರೇವತಿ, ಶ್ರೇಯಾ, ಡಾಕಾ ಇತರರು ಉಪಸ್ಥಿತರಿದ್ದರು
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 