ಪಂ. ರವಿ ಕೂಡ್ಲಿಗಿ ಪ್ರಶಸ್ತಿ ಪ್ರದಾನ ಹಾಗೂ ಸಂಗೀತೋತ್ಸವ

ಪಂ. ರವಿ ಕೂಡ್ಲಿಗಿ ಪ್ರಶಸ್ತಿ ಪ್ರದಾನ ಹಾಗೂ ಸಂಗೀತೋತ್ಸವ  Pm. Ravi Kudligi Award Presentation and Music Festival


ಧಾರವಾಡ 20: ಚಿಲಿಪಿಲಿ ಸಂಗೀತ ಸಾಂಸ್ಕೃತಿಕ ಕಲಾ ಅಕಾಡೆಮಿ, ಧಾರವಾಡ ದಿನಾಂಕ: 21.12.2025 ರಂದು ಸಂಜೆ 5.00 ಗಂಟೆಗೆ ನಗರದ ಬೇಂದ್ರೆ ಭವನದಲ್ಲಿ ಪಂ. ರವಿ ಕೂಡ್ಲಿಗಿಯವರ 11ನೇ ಪುಣ್ಯಸ್ಮರಣೋತ್ಸವದ ಅಂಗವಾಗಿ ಪಂ. ರವಿ ಕೂಡ್ಲಿಗಿ ಪ್ರಶಸ್ತಿ ಪ್ರದಾನ ಹಾಗೂ ಸಂಗೀತೋತ್ಸವವನ್ನು ಏರಿ​‍್ಡಸಿದೆ.   

ಕಾರ್ಯಕ್ರಮವನ್ನು ನಗರದ ಖ್ಯಾತ ಮಕ್ಕಳ ತಜ್ಞ ಡಾ. ರಾಜನ್ ದೇಶಪಾಂಡೆ ಉದ್ಘಾಟಿಸುವರು.  ಹಿರಿಯ ತಬಲಾ ವಾದಕ ಡಾ.ರಾಚಯ್ಯ ಎಸ್‌. ಹಿರೇಮಠ ಅವರಿಗೆ ಹಿರಿಯ ವಯೋಲಿನ್ ವಾದಕ       ಪಂ. ಬಿ.ಎಸ್‌.ಮಠ ಅವರು ಪಂ. ರವಿ ಕೂಡ್ಲಿಗಿ ಪ್ರಶಸ್ತಿ ಪ್ರದಾನ ಮಾಡುವರು. ಕುಮಾರೇಶ್ವರ ಕಲ್ಚರ್ ಸೊಸೈಟಿ ಅಧ್ಯಕ್ಷ ಮಲ್ಲಿಕಾರ್ಜುನ ಚಿಕ್ಕಮಠ ಹಾಗೂ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ರಾಜ್ಯ ಕಾರ್ಯಾಧ್ಯಕ್ಷರಾದ ಮಹೇಶಗೌಡ ಸುಬೇದಾರ ಮುಖ್ಯ ಅತಿಥಿಗಳಾಗಿ ಆಗಮಿಸುವರು.  ಎಸ್‌.ಜೆ.ಎಂ.ವಿ.ಎಸ್‌. ಕಲಾ ಹಾಗೂ ವಾಣಿಜ್ಯ ಮಹಿಳಾ ಮಹಾವಿದ್ಯಾಲಯದ ಸಹಾಯಕ ಪ್ರಾಧ್ಯಾಪಕರಿ ಡಾ. ಜ್ಯೋತಿಲಕ್ಷ್ಮೀ ಕೂಡ್ಲಿಗಿ ಉಪಸ್ಥಿತರಿರುವರು.  ಇದೇ ಸಂದರ್ಭದಲ್ಲಿ ಸಂಗೀತ ವಿಷಯದಲ್ಲಿ ಪಿಎಚ್‌.ಡಿ. ಪದವಿ ಪೂರೈಸಿದ ಡಾ. ಕೃಷ್ಣ ಸುತಾರ, ಡಾ.ಕವಿತಾ ಜಂಗಮಶೆಟ್ಟಿ ಹಾಗೂ ಡಾ. ಅರ್ಚನಾ ಪತ್ತಾರ ಇವರನ್ನು ಸಂಸ್ಥೆವತಿಯಿಂದ ಸನ್ಮಾನಿಸಲಾಗುವುದು.   

ನಂತರದಲ್ಲಿ ಜರುಗುವ ಸಂಗೀತೋತ್ಸವದಲ್ಲಿ ದಾವಣಗೆರೆಯ ಯುವ ಗಾಯಕ ರವಿಕುಮಾರ ಆಳಂದ ಇವರ ಹಿಂದೂಸ್ತಾನಿ ಗಾಯನ, ಪ್ರಶಸ್ತಿ ಪುರಸ್ಕೃ ಡಾ. ರಾಚಯ್ಯ ಹಿರೇಮಠ ಅವರಿಂದ ತಬಲಾ ಸೋಲೋ, ವಾದ್ಯಸಹಕಾರದಲ್ಲಿ ವಯೋಲಿನದಲ್ಲಿ ಡಾ. ಗುರುಬಸವ ಮಹಾಮನೆ, ಹಾರ್ಮೊನಿಯಂದಲ್ಲಿ ಡಾ. ಪರಶುರಾಮ ಕಟ್ಟಿಸಂಗಾವಿ ಮತ್ತು ತಬಲಾದಲ್ಲಿ ಪಂ. ಭೀಮಾಶಂಕರ ಬಿದನೂರ ಸಾಥ್ ಸಂಗತ ನೀಡಲಿದ್ದಾರೆ ಎಂದು ಸಂಸ್ಥೆಯ ಅಧ್ಯಕ್ಷರಾದ ಡಾ. ಎ. ಎಲ್‌. ದೇಸಾಯಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.