ಪಂ. ಜವಾಹರ್‌ಲಾಲ್ ನೆಹರು ಜನ್ಮದಿನ ಆಚರಣೆ

 ಪಂ. ಜವಾಹರ್‌ಲಾಲ್ ನೆಹರು ಜನ್ಮದಿನ ಆಚರಣೆ  Pm. Jawaharlal Nehru's birthday celebration

ಲೋಕದರ್ಶನ ವರದಿ 

ಪಂ. ಜವಾಹರ್‌ಲಾಲ್ ನೆಹರು ಜನ್ಮದಿನ ಆಚರಣೆ  

ಆಲಮೇಲ 15: ತಾಲೂಕಿನ ವಿವಿಧ ಸರ್ಕಾರಿ ಇಲಾಖೆಗಳಲ್ಲಿ ಹಾಗೂ ಶಾಲೆಗಳಲ್ಲಿ ನ. 14ರಂದು ನೆಹರೂರವರ ಜಯಂತಿಯನ್ನು ಆಚರಿಸಲಾಯಿತು. 

ತಾಲೂಕಿನ ಕುರಬತಹಳ್ಳಿ ಗ್ರಾಮದ ಕನ್ನಡ ಕಿರಿಯ ಪ್ರಾಥಮಿಕ ಶಾಲೆ, ಆವರಣದಲ್ಲಿ ಪಂಡಿತ್ ಜವಾಹರ್ ಲಾಲ್ ನೆಹರುರವರ ಭಾವಚಿತ್ರಕ್ಕೆ ಹಿರಿಯರಾದ ಶಿವಪುತ್ರಗೌಡ ಪಾಟೀಲ್ ಪುಷ್ಪನಮನ ಸಲ್ಲಿಸಿದರು.  

ಸಂವಿಧಾನ ಪೀಠೀಕೆಯನ್ನು ಪ್ರಕಾಶ ಝಿಂಗಾಡೆ ಗುರುಗಳು ಶಾಲಾ ಮಕ್ಕಳಿಗೆ ಬೋಧಿಸಿ ಪ್ರತಿಜ್ಞೆ ಮಾಡಿಸಿ ಮಾತನಾಡಿ ಪೋಷಕರ - ಶಿಕ್ಷಕರ ಸಭೆಯಲ್ಲಿ ಶಿಕ್ಷಣದ ಕಲಿಕೆಯ ಬಗ್ಗೆ ಪೋಷಕರು, ಮಕ್ಕಳ ಪ್ರಗತಿಯ ಬಗ್ಗೆ ಗಮನಹರಿಸಲು ಚಿಂತನೆ ಮಾಡಬೇಕು. ಮಕ್ಕಳಿಗೆ ಉತ್ತಮ ಸಂಸ್ಕಾರ ನೀಡಿ, ಉತ್ತಮ ಪ್ರಜೆ ಮಾಡಲು ಶಿಕ್ಷಕರ ಪಾತ್ರ ತುಂಬಾ ಮಹತ್ವದ್ದು ಎಂದು ಹೇಳಿದರು. ಭಾರತದ ಪ್ರಥಮ ಪ್ರಧಾನಮಂತ್ರಿ ನೆಹರೂಜಿಯವರು ಮಕ್ಕಳ ಮೇಲೆ ಬಹಳ ಪ್ರೀತಿ, ಮಕ್ಕಳು ಯಾವಾಗಲೂ ಚಾಚಾ ನೆಹರು ಎಂದು ಸಂಬೋಧಿಸುತ್ತಿದ್ದರು, ಅವರ ಜನ್ಮ ದಿನಾಚರಣೆಯನ್ನು ಮಕ್ಕಳ ದಿನಾಚರಣೆ ಎಂದು ಆಚರಿಸುತ್ತಿರುತ್ತಾರೆ. ಎಂದು ಹೇಳಿದರು. 

ಎಸ್‌ಡಿಎಂಸಿ ಅಧ್ಯಕ್ಷ ಸೋಮನಾಥ ಸಾಲೋಟಗಿ, ಗ್ರಾ.ಪಂ ಸದಸ್ಯ ಚಿದಾನಂದ ಪೂಜಾರಿ, ಪತ್ರಕರ್ತ ಗಾಂಧೀಗೌಡ ಪಾಟೀಲ್, ಗನಿ ವಸ್ತಾದ್, ದಯಾನಂದ ನಾಗಠಾಣ, ಸುಮಿತ್ರ ದೊಡಮನಿ, ಪ್ರೋ. ಬೋಗೇಶ ತೇಲಿ, ಎಸ್‌.ಎಲ್‌.ನಾರಾಯಣಕರ್, ಗುರು ಮಾತೆಯರಾದ ಶೈಲ ಹಳೇಮನಿ, ಅಶ್ವಿನಿ ನಾಯ್ಕೊಡಿ. ಪೋಷಕರು, ವಿದ್ಯಾರ್ಥಿ ವಿದ್ಯಾರ್ಥಿನಿಯರು ಮತ್ತಿತರರು ಇದ್ದರು.