ಗಿಡ ನೆಟ್ಟು ಪರಿಸರ ಸಂರಕ್ಷಣೆ ಮಾಡುವದು ಎಲ್ಲರ ಕರ್ತವ್ಯ :ಈರ್ಪ ಸೋಮಣ್ಣವರ
Planting trees and protecting the environment is everyone's duty: Irpa Somannavara
ಗಿಡ ನೆಟ್ಟು ಪರಿಸರ ಸಂರಕ್ಷಣೆ ಮಾಡುವದು ಎಲ್ಲರ ಕರ್ತವ್ಯ :ಈರ್ಪ ಸೋಮಣ್ಣವರ
ನೇಸರಗಿ, 05 : ದೇಶದ ಪ್ರತಿಯೊಬ್ಬ ಪ್ರಜೆಯು ಪ್ರತಿ ವರ್ಷಕ್ಕೆ ಒಂದು ಗಿಡ ನೆಟ್ಟು ಅದನ್ನು ಬೆಳೆಸಿ ನಾಡಿಗೆ ಸಮರ್ಿಸಿದರೆ ನಮ್ಮ ಜೀವನ ಪಾವನ ಆಗುತ್ತದೆ ಮತ್ತು ನಾವೆಲ್ಲರೂ ಕೂಡಿ ಪರಿಸರ ಸಂರಕ್ಷಣೆ ಮಾಡಿ ಅತೀ ಹೆಚ್ಚು ಗಿಡಗಳನ್ನು ನೆಟ್ಟು ಮುಂದಿನ ಭವಿಷ್ಯಕ್ಕೆ ಕೊಡುಗೆ ನೀಡೋಣ ಎಂದು ಮಾಜಿ ಸೈನಿಕರ ಸಂಘದ ಅಧ್ಯಕ್ಷ ಈರ್ಪ ಸೋಮಣ್ಣವರ ಹೇಳಿದರು.
ಅವರು ಗುರುವಾರದಂದು ಮಾಜಿ ಸೈನಿಕರ ಸಂಘ ನೇಸರಗಿ, ಗ್ರಾಮ ಪಂಚಾಯತ ನೇಸರಗಿ, ಅರಣ್ಯ ಇಲಾಖೆ ನೇಸರಗಿ ಇವರುಗಳ ಸಂಯುಕ್ತ ಸಹಯೋಗದಲ್ಲಿ ಗ್ರಾಮದ ಎ ಪಿ ಎಮ್ ಸಿ ಅವರಣ, ವಿದ್ಯಾ ಮಂದಿರ ಪ್ರೌಢ ಶಾಲೆ ಆವರಣ, ಹೊಸಟ್ಟಿ ಬಸವೇಶ್ವರ ದೇವಸ್ಥಾನದಲ್ಲಿ ವಿಶ್ವ ಪರಿಸರ ದಿನಾಚರಣೆಯ ನಿಮಿತ್ಯವಾಗಿ 100 ಗಿಡ್ಡಗಳನ್ನು ನೆಡುವ ಮುಖಾಂತರ ವಿಶ್ವ ಪರಿಸರ ದಿನಾಚರಣೆಯನ್ನು ಆಚರಿಸಲಾಯಿತು.
ಈ ಕಾರ್ಯಕ್ರಮದಲ್ಲಿ ವಲಯ ಅರಣ್ಯ ಅಧಿಕಾರಿ ಪ್ರಸನ್ನ ಬೆಲ್ಲದ, ಉಪ ಅರಣ್ಯ ಅಧಿಕಾರಿ ಎಚ್ ಎ ಶೇಕ್, ಸಿಬ್ಬಂದಿಗಳಾದ ಶಿವಾನಂದ ಕಂಬಾರ, ಅರ್ಜುನ ಹುಲಗಾಣಿ, ಅಶೋಕ ಬಿಚ್ಚಗತ್ತಿ, ನಾಗರಾಜ ತುಬಾಕಿ, ಮಾಜಿ ಸೈನಿಕರ ಸಂಘದ ಉಪಾಧ್ಯಕ್ಷ ಕಾಡಪ್ಪ ಗಡದವರ, ಕಾರ್ಯದರ್ಶಿ ಮಹೇಶ ಹಂಚಿನಮನಿ, ಸದಸ್ಯರಾದ ಲಗಮಪ್ಪ ರಾಮಣ್ಣವರ, ಚನ್ನಪ್ಪ ದಿನ್ನಿಮನಿ, ಕೆಂಚಪ್ಪ ತರಗಾರ, ಫಕ್ರುಸಾಬ್ ನದಾಫ್, ಯಲ್ಲಪ್ಪ ತಳವಾರ, ಮುರಘೆಪ್ಪ ಮದನಬಾವಿ, ಯಲ್ಲಪ್ಪ ಪರಸನ್ನವರ, ಮಲ್ಲಿಕಾರ್ಜುನ ಕುರಗುಂದ, ಮಹೇಶ ಮಲ್ಲಾಪುರ, ಶಿವಪ್ಪ ಅಕ್ಕಿ, ಚನ್ನಪ್ಪ ಗೂಳನ್ನವರ ಸೇರಿದಂತೆ ನಿವೃತ್ತ, ಹಾಲಿ ಸೈನಿಕರು, ಗ್ರಾಮಸ್ಥರು ಉಪಸ್ಥಿತರಿದ್ದರು.
ಅನೆಕಲ್ಲು, ಮಳೆ ಅಬ್ಬರಕ್ಕೆ 39 ಕುರಿಗಳ ಸಾವು : ಬೀದಿಗೆ ಬಂತು ಬಡವನ ಬದುಕು
ಮಳೆಯ ಅವಾಂತರ : ನದಿಯಂತಾದ ರಾಷ್ಟ್ರೀಯ ಹೆದ್ದಾರಿ, ವಾಹನಗಳು ಸಿಲುಕಿ ಪರದಾಡಿದ ಪ್ರಯಾಣಿಕರು
ಬೆಳಗಾವಿಯಲ್ಲಿ ಆನೆಕಲ್ಲು ಮಿಶ್ರಿತ ಗಾಳಿ ಮಳೆಯ ಅರ್ಭಟಕ್ಕೆ ಜನಜೀವನ ಅಸ್ತವ್ಯಸ್ತ
ಹಣ ದ್ವಿಗುಣ ಹೆಸರಲ್ಲಿ ಜನರಿಗೆ ವಂಚಿಸುತ್ತಿದ್ದ ಅಂತರಾಜ್ಯ ಖದೀಮರ ಬಂಧನ : ಗೋಕಾಕ ಪೊಲೀಸರ ಕಾರ್ಯಕ್ಕೆ ಎಸ್ ಪಿ ಶ್ಲಾಘನೆ
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ 