43 ಮಿಲಿಯನ್ ಜನತೆಯಿಂದ ಪಿಂಕ್ ಬಾಲ್ ಟೆಸ್ಟ್ ವೀಕ್ಷಣೆ

ಮುಂಬೈ, ಮಾ 24, ಕಳೆದ ನವೆಂಬರ್ ನಲ್ಲಿ ನಡೆದ ಭಾರತ ಮತ್ತು ಬಾಂಗ್ಲಾದೇಶ ನಡುವಿನ ದೇಶದ ಮೊದಲ ಗುಲಾಬಿ ಚೆಂಡಿನ ಟೆಸ್ಟ್ (ಪಿಂಕ್ ಚೆಂಡು) ಅನ್ನು 43 ಮಿಲಿಯನ್ ಜನ ಹಾಗೂ 2 ಬಿಲಿಯನ್  ನಿಮಿಷಗಳು ವೀಕ್ಷಿಸಲಾಗಿದೆ ಎಂದು ಬಾರ್ಕ್ ಹೇಳಿದೆ. ಇದಲ್ಲದೆ 2018-19ನೇ ಸಾಲಿನಲ್ಲಿ ನಡೆದ ಯಾವುದೇ ಟೆಸ್ಟ್ ಪಂದ್ಯವೊಂದರ ಮೊದಲ ದಿನದ ಅತ್ಯಧಿಕ ವೀಕ್ಷಣೆ ಇದಾಗಿದೆ ಎಂದು ವೀಕ್ಷಣೆ ರೇಟಿಂಗ್ ನೀಡುವ ಬಾರ್ಕ್ ತಿಳಿಸಿದೆ.ಸೌರವ್ ಗಂಗೂಲಿ ಬಿಸಿಸಿಐ ಅಧ್ಯಕ್ಷರಾದ ನಂತರ ಆಸ್ಟ್ರೇಲಿಯಾದಲ್ಲಿ ಹೊನಲು ಬೆಳಕಿನ ಟೆಸ್ಟ್ ಆಡಲು ತಂಡ ನಿರಾಕರಿಸಿದ ಬಳಿಕ ಪ್ರಾಯೋಗಿಕವಾಗಿ ಭಾರತವು ಗುಲಾಬಿ ಚೆಂಡಿನ ಸವಾಲನ್ನು ತೆಗೆದುಕೊಳ್ಳುವುದನ್ನು ಖಚಿತಪಡಿಸಿತ್ತು.ಹಲವು ನಿರೀಕ್ಷೆ ಹಾಗೂ ಅಪಾರ ಪ್ರೇಕ್ಷಕರೆದುರು ವಿರಾಟ್ ಕೊಹ್ಲಿ ಸಾರಥ್ಯದ ಭಾರತ ಮತ್ತು ಬಾಂಗ್ಲಾದೇಶ ನಡುವೆ ಈಡನ್ ಗಾರ್ಡನ್ಸ್ ಕ್ರೀಡಾಂಗಣದಲ್ಲಿ ನಡೆದ ಹೊನಲು ಬೆಳಕಿನ ದ್ವಿತೀಯ ಟೆಸ್ಟ್ ನಲ್ಲಿ ಪಿಂಕ್ ಚೆಂಡನ್ನು ಬಳಸಲಾಗಿತ್ತು. ಐಸಿಸಿ ಟೆಸ್ಟ್ ಚಾಂಪಿಯನ್ ಷಿಪ್ ಭಾಗವಾಗಿದ್ದ ಈ ಟೆಸ್ಟ್, ಮೂರನೇ ದಿನಕ್ಕೆ ಮುಕ್ತಾಯಗೊಂಡಿತ್ತು. ಆತಿಥೇಯ ಭಾರತ ಇನಿಂಗ್ಸ್ ಹಾಗೂ 46 ರನ್ ಗಳಿಂದ ಗೆದ್ದು 2-0 ಅಂತರದಲ್ಲಿ ಸರಣಿ ವಶಪಡಿಸಿಕೊಂಡಿತ್ತು.