ಆಂಗ್ಲ ಮಾಧ್ಯಮ ಶಾಲೆಯಲ್ಲಿ ಗಮನ ಸೆಳೆದ ಪೈ ದಿನಾಚರಣೆ

ಆಂಗ್ಲ ಮಾಧ್ಯಮ ಶಾಲೆಯಲ್ಲಿ ಗಮನ ಸೆಳೆದ ಪೈ ದಿನಾಚರಣೆ Pi Day celebration draws attention at English medium school

ಮಹಾಲಿಂಗಪುರ   24: ಸ್ಥಳೀಯ ಜೇಸಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಗಣಿತ ಶಿಕ್ಷಕ ಎಸ್‌.ಬಿ.ಮಟಗಾರ ನೇತೃತ್ವದಲ್ಲಿ ವಿಶಿಷ್ಠವಾಗಿ ಪೈ ದಿನಾಚರಣೆ ಮಾಡಲಾಯಿತು. 

285 ದಶಮಾಂಶ ಸ್ಥಾನಗಳವರೆಗೆ ಪೈಬೆಲೆಯ 200 ಮೀ ಉದ್ದದ ಕಾಗದದ ಸುರುಳಿ ಮೂಲಕ ಪ್ರಾಯೋಗಿಕ ಅರಿವು ಮೂಡಿಸಲಾಯಿತು. ಮಕ್ಕಳೇ ವಿವಿಧ ಆಕೃತಿಗಳ ಸುತ್ತಳತೆ ಮತ್ತು ವ್ಯಾಸಗಳ ಸಹಾಯದಿಂದ ಪೈಬೆಲೆ ಕಂಡುಹಿಡಿದರು. ಮಕ್ಕಳೇ ತಯಾರಿಸಿದ ವಿವಿಧ ಘನಾಕೃತಿಗಳ ಪ್ರದರ್ಶನ ಜರುಗಿತು. ಹಾಜರಿದ್ದ ಗಣ್ಯರು ಮತ್ತು ಶಿಕ್ಷಕರಿಗೆ ಪೈ ಆಕೃತಿ ನೀಡಿಲಾಯಿತು. ದಿನಾಚರಣೆ ಪ್ರಯುಕ್ತ ಜರುಗಿದ ಗಣಿತ ರಸಪ್ರಶ್ನೆ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನಗಳಿಸಿದ ಕೃಪಾ ಕುರಹಟ್ಟಿ ಮತ್ತು ದ್ವಿತೀಯ ಸ್ಥಾನ ಗಳಿಸಿದ ಮುನಸ್ಸಬಾ ತೇರದಾಳ ತಂಡಗಳಿಗೆ ಬಹುಮಾನ ವಿತರಿಸಲಾಯಿತು. 

ಇದೇ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ಕ್ರಿಕೆಟ್ ಅಸೋಷಿಯೇಷನ್‌ಗೆ ಬಾಗಲಕೋಟೆ ಜಿಲ್ಲೆಯಿಂದ ಆಯ್ಕೆಯಾದ ಏಕೈಕ ಬಾಲಕಿ ದಿಶಾ ಮನೋಹರ ಶಿರೋಳ ಇವರನ್ನು ಸನ್ಮಾನಿಸಿ ಗೌರವಿಸಲಾಯಿತು. 

ರಿಷಿಕಾ ಚಮಕೇರಿ ಮತ್ತು ಸಂಗಡಿಗರಿಂದ ಕಿರುನಾಟಕ ಪ್ರದರ್ಶನ ಗಮನಸೆಳೆಯಿತು. 

ಸಂಸ್ಥೆಯ ಉಪಾಧ್ಯಕ್ಷ ಶಿವಾನಂದ ತಿಪ್ಪಾ, ಶಿಕ್ಷಕರಾದ ಎಸ.ಬಿ.ಮಟಗಾರ, ಎನ್‌.ಎಂ.ನಾಡಗೌಡ ಮಾತನಾಡಿದರು. 

ಸಂಸ್ಥೆಯ ಅಧ್ಯಕ್ಷ ಶಾಂತಿಲಾಲ ಪಟೇಲ ಅಧ್ಯಕ್ಷತೆ ವಹಿಸಿ, ಕಾರ್ಯದರ್ಶಿ ಗುರುರಾಜ ಅಂಬಿ, ನಿರ್ದೇಶಕರಾದ ಈಶ್ವರ ಮುರಗೋಡ, ರಮೇಶ ಮುಳವಾಡ, ರಾಜು ಘಟ್ಟೆಪ್ಪನವರ, ಮುಖ್ಯಶಿಕ್ಷಕ ಎಸ್‌.ಜಿ.ಕೌಜಲಗಿ ಸೇರಿದಂತೆ ಇತರರಿದ್ದರು. ಮಹಾಲಕ್ಷ್ಮೀ ಗುಳದಳ್ಳಿ, ವರ್ಷಿಣಿ ಸಗರಿ ಪ್ರಾರ್ಥಿಸಿ, ಕೃಪಾ ಕುರಹಟ್ಟಿ, ಮುನಸ್ಸಬಾ ತೇರದಾಳ, ಜಾರಾ ಪೀರಜಾದೆ, ಸಮೀಕ್ಷಾ ಮುಳ್ಳೂರ ನಿರೂಪಿಸಿ, ಪ್ರತಿಕ್ಷಾ ಮ್ಯಾಗಾಡಿ ವಂದಿಸಿದರು. 

ಪೈ ಒಂದು ಭಾಗಲಬ್ದ ಸಂಖ್ಯೆ ಎಂಬ ತಪ್ಪು ಕಲ್ಪನೆಯನ್ನು ಹಲವಾರು ಪ್ರಾತ್ಯಕ್ಷಿಕ ಪ್ರಯೋಗಗಳ ಸಾಬೀತು ಮಾಡಿ, ಪೈ ಒಂದು ಅಭಾಗಲಬ್ಧ ಸಂಖ್ಯೆ ಎಂಬುದನ್ನು ಮನಮುಟ್ಟುವಂತೆ ನಿರೂಪಿಸುವಲ್ಲಿ ಶಿಕ್ಷಕ ಎಸ್‌.ಬಿ.ಮಟಗಾರ ಅವರ ಶ್ರಮ ಯಶಸ್ವಿಯಾಯಿತು 

ಶಿವಾನಂದ ತಿಪ್ಪಾ, ಜೇಸಿ ಉಪಾಧ್ಯಕ್ಷ