೨೦೨೨ರವರೆಗೂ ದೈಹಿಕ ಅಂತರ ಕಾಪಾಡಿಕೊಳ್ಳಬೇಕು; ಹಾವರ್ಡ್ ವಿಜ್ಞಾನಿಗಳು

ವಾಷಿಂಗ್ಟನ್, ಏ ೧೫,  ಕೇವಲ ಒಮ್ಮೆ  ಲಾಕ್ ಡೌನ್  ಜಾರಿಗೊಳಿಸುವ ಮೂಲಕ ಕೊರೊನಾ ವೈರಾಣು  ಸೋಂಕು  ಹರಡುವುದನ್ನು  ತಡೆಗಟ್ಟಲು   ಸಾಧ್ಯವಾಗದು ಎಂದು ಹಾವರ್ಡ್  ವಿಜ್ಞಾನಿಗಳು  ಹೇಳಿದ್ದಾರೆ. ೨೦೨೨ರವರೆಗೂ  ಸಾಮಾಜಿಕ ಅಂತರ( ದೈಹಿಕ ಅಂತರ) ಪಾಲಿಸುವಂತಹ   ಕಠಿಣ  ಕ್ರಮ  ಜಾರಿಗೊಳಿಸಿದರೆ ಮಾತ್ರ  ಮಾರಾಣಂತಿಕ  ವೈರಸ್ ನಿಂದ  ಜಗತ್ತು  ವಿಮುಕ್ತಿಯಾಗುವ   ಸಾಧ್ಯತೆಯಿದೆ ಎಂದು ಅಭಿಪ್ರಾಯಪಟ್ಟಿದೆ.ಅಮೆರಿಕಾದಲ್ಲಿ  ಕೊರೊನಾ ಸೋಂಕಿನಿಂದ  ಮರಣಗಳ ಸಂಖ್ಯೆ ತಾರಕಕ್ಕೇರಿ(೨೫ಸಾವಿರ)  ಲಕ್ಷಾಂತರ ಮಂದಿ  ಸೋಂಕಿಗೆ ಒಳಗಾಗಿರುವ  ಹಿನ್ನೆಲೆಯಲ್ಲಿ   ಕೊರೊನಾ ಸಾಂಕ್ರಾಮಿಕ  ರೋಗದ ಪರಿಣಾಮಗಳ ಬಗ್ಗೆ  ವಿಜ್ಞಾನಿಗಳು ಅಧ್ಯಯನ  ನಡೆಸುತ್ತಿದ್ದಾರೆ.  ಕೊರೊನಾ  ಸಿಜನಲ್  ರೋಗವಾಗಿ  ಪರಿವರ್ತನೆಗೊಳ್ಳುವ ಸಾಧ್ಯತೆಯಿದೆ ಎಂದು ಎಚ್ಚರಿಕೆ ನೀಡಿದ್ದಾರೆ.  ವಿಶೇಷವಾಗಿ ತಾಪಮಾನ  ಕನಿಷ್ಟಮಟ್ಟಕ್ಕೆ  ಇಳಿಕೆಯಾಗುವ   ಅವಧಿಯಲ್ಲಿ  ಸೋಂಕಿನ ಪರಿಣಾಮ ಉಲ್ಬಣಗೊಳ್ಳುವ ಸಾಧ್ಯತೆಯಿದೆ ಹೇಳಿದ್ದಾರೆ.  ಇನ್ನೂ ಸಾಮಾಜಿಕ ಅಂತರ ಕಾಪಾಡಿಕೊಳ್ಳುವುದನ್ನು  ಕಡ್ಡಾಯ ಗೊಳಿಸುವುದು     ಸರಿಯಾದ ಕ್ರಮವಾದರೂ,  ತ್ವರಿತವಾಗಿ  ಕೊರೊನಾ ನಿರ್ಧರಣ ಪರೀಕ್ಷೆ  ನಡೆಸಿದರೆ   ಉತ್ತಮ ಫಲಿತಾಂಶ  ಬರಲಿದೆ ಎಂದು   ವಿಜ್ಞಾನಿಗಳು ಹೇಳಿದ್ದಾರೆ. ದೈಹಿಕ  ಅಂತರ  ಕಾಪಾಡಿಕೊಳ್ಳುವುದರ ಜತೆಗೆ    ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಸಿಕೊಂಡು   ವೈರಸ್  ಹರಡುವುದನ್ನು ನಿಯಂತ್ರಿಸಬಹುದು ಎಂದು ತಿಳಿಸಿದ್ದಾರೆ.. ಅದೇ ರೀತಿ   ಕೊರೊನಾ  ಕೊನೆಗೊಳಿಸುವ  ಅಂತಿಮ ಆಯುಧ  ಲಸಿಕೆಯಾಗಿದೆ. ಆದರೆ  ಅದನ್ನು ತಯಾರಿಸಲು ಇನ್ನೂ ಹೆಚ್ಚು ಸಮಯ  ಬೇಕಾಗಬಹುದು ಎಂದು ಅಂದಾಜಿಸಿದ್ದಾರೆ.