ಮಹೇಶ ಅಂಗಡಿ ಅವರಿಗೆ ಪಿಎಚ್‌.ಡಿ. ಪದವಿ

Ph.D. degree for Mahesh Angadi

ಧಾರವಾಡ 29: ಇಲ್ಲಿಯ ಜೆ.ಎಸ್‌.ಎಸ್‌. ಡಾ. ಡಿ.ವೀರೇಂದ್ರ ಹೆಗ್ಗಡೆ ಸಂಶೋಧನ ಕೇಂದ್ರದ ಮೂಲಕ ಕನ್ನಡ ವಿಷಯದಲ್ಲಿ “ಶಿಶುನಾಳ ಶರೀಫರ ತತ್ವಪದ ಪರಂಪರೆ : ಪಠ್ಯ ಮತ್ತು ಆಚರಣೆಗಳ ಅಂತರ್ ಸಂಬಂಧ” ಎಂಬ ವಿಷಯ ಕುರಿತು ಹಂಪಿ ಕನ್ನಡ ವಿಶ್ವವಿದ್ಯಾಲಯಕ್ಕೆ ಸಲ್ಲಿಸಿದ್ದ ಮಹೇಶ ಅಂಗಡಿ ಇವರ ಸಂಶೋಧನ ಮಹಾಪ್ರಬಂಧಕ್ಕೆ ಹಂಪಿ ಕನ್ನಡ ವಿಶ್ವವಿದ್ಯಾಲಯ ಪಿಎಚ್‌.ಡಿ. ಪದವಿಯನ್ನು ಪ್ರಧಾನ ಮಾಡಿದೆ. ಇವರನ್ನು ಜನತಾ ಶಿಕ್ಷಣ ಸಮಿತಿಯ ಕಾರ‌್ಯದರ್ಶಿಗಳಾದ ಡಾ. ಅಜಿತಪ್ರಸಾದ ಅವರು ಅಭಿನಂದಿಸಿದ್ದಾರೆ. ಇವರಿಗೆ ಧಾರವಾಡದ ಜೆ.ಎಸ್‌.ಎಸ್‌. ಡಾ. ಡಿ.ವೀರೇಂದ್ರ ಹೆಗ್ಗಡೆ ಸಂಶೋಧನ ಕೇಂದ್ರದ ಸಂಯೋಜನಾಧಿಕಾರಿಗಳಾದ ಡಾ. ಜಿನದತ್ತ ಅ. ಹಡಗಲಿ ಅವರು ಮಾರ್ಗದರ್ಶಕರಾಗಿದ್ದರು.