ಕೊಪ್ಪಳ 25: ಕೊಪ್ಪಳ ನಗರದ ಅಮೀನಪುರ ಓಣಿಯ ನಿವಾಸಿ ನಿಂಗಪ್ಪ ತಂದೆ ಬಸಪ್ಪ ಕುಂಬಾರ (37), ಎಂಬ ವ್ಯಕ್ತಿ ಜು. 12 ರಂದು ಕಾಣೆಯಾಗಿದ್ದು ಪತ್ತೆಗೆ ಸಹಕರಿಸುವಂತೆ ಕೊಪ್ಪಳ ನಗರ ಪೊಲೀಸ್ ಠಾಣೆಯ ಅಧಿಕಾರಿಗಳು ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.
ನಿಂಗಪ್ಪ ತಂದೆ ಬಸಪ್ಪ ಕುಂಬಾರ (37), ಎಂಬುವವರು ಕಿರಾಣಿ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದು, ಇತ್ತೀಚೆಗೆ ಕೆಲಸ ಮಾಡುವುದು ಬಿಟ್ಟು ಮನೆಯಲ್ಲಿ ಇರುತ್ತಿದ್ದರು. ಮನೆಯಲ್ಲಿ ಸಂಸಾರದ ವಿಷಯವಾಗಿ ಬೇಸರ ಮಾಡಿಕೊಂಡು ಜು. 12 ರಂದು ಯಾರಿಗೂ ಹೇಳದೆ ಕೇಳದೇ ಕಾಣೆಯಾಗಿದ್ದಾರೆ ಎಂದು ಕಾಣೆಯಾದ ವ್ಯಕ್ತಿಯ ಹೆಂಡತಿ ಮಂಜುಳಾ ಗಂಡ ನಿಂಗಪ್ಪ ಕುಂಬಾರ ಅವರು ಕೊಪ್ಪಳ ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಕಾಣೆಯಾದ ವ್ಯಕ್ತಿಯ ಚಹರೆ ವಿವರ ಇಂತಿದೆ. ನಿಂಗಪ್ಪ ತಂದೆ ಬಸಪ್ಪ ಕುಂಬಾರ ವಯಸ್ಸು 37, ಎತ್ತರ 5.5 ಅಡಿ, ಸದೃಡ ಮೈಕಟ್ಟು, ಕೋಲು ಮುಖ, ಗೋಧಿ ಮೈಬಣ್ಣ, ಉದ್ದ ಮೂಗು, ಕಪ್ಪು ತಲೆ ಕೂದಲು ಹೊಂದಿದ್ದು, ಕಾಣೆಯಾದಾಗ ತಿಳಿ ನೀಲಿ ಶರ್ಟ ಮತ್ತು ಚಾಕಲೇಟ್ ಬಣ್ಣದ ಫ್ಯಾಂಟ್ ಧರಿಸಿದ್ದು, ಕನ್ನಡ ಭಾಷೆಯನ್ನು ಮಾತನಾಡುತ್ತಾನೆ. ಈ ವ್ಯಕ್ತಿಯ ಬಗ್ಗೆ ಯಾರಿಗಾದರೂ ಮಾಹಿತಿ ದೊರೆತಲ್ಲಿ ಕೊಪ್ಪಳ ಕಂಟ್ರೋಲ್ ರೂಂ.ನಂ. 08539-230100 & 230222, ನಗರ ಪೊಲೀಸ ಠಾಣೆ ಪೊಲೀಸ ಇನ್ಸಪೆಕ್ಟರ್ ಮೊ.ಸಂ. 9480803745, ಪೊಲೀಸ ಸಬ್ ಇನ್ಸಪೆಕ್ಟರ್ ಮೊ.ಸಂ. 9449995353, ನಗರ ಪೊಲೀಸ ಠಾಣೆ ದೂರವಾಣಿ ಸಂಖ್ಯೆ. 08539-220333 ಇಲ್ಲಿಗೆ ಮಾಹಿತಿ ನೀಡುವಂತೆ ಪ್ರಕಟಣೆ ತಿಳಿಸಿದೆ.