ಜನರು ಹಕ್ಕಿ ಜ್ವರದ ಕುರಿತು ಎಚ್ಚರಿಕೆ

People warned about bird flu

ಜನರು ಹಕ್ಕಿ ಜ್ವರದ ಕುರಿತು ಎಚ್ಚರಿಕೆ 

ಸಂಬರಗಿ 28: ಕರ್ನಾಟಕದ ಗಡಿಯಲ್ಲಿ ಇರುವ ಮಹಾರಾಷ್ಟ್ರದ ಸೊಲ್ಲಾಪೂರ, ಕೋಲ್ಹಾಪೂರ ಹಾಗೂ ಪುಣೆ ಜಿಲ್ಲೆಯಲ್ಲಿ ಹಕ್ಕಿಜ್ವರ (ಜಿ.ಎಸ್‌.ಬಿ) ರೋಗದಿಂದ ಹಲವಾರು ಜನ ಮೃತಪಟ್ಟಿದ್ದಾರೆ. ಗಡಿಭಾಗದಲ್ಲಿ ಜನರಿಗೆ ಭಯದ ವಾತಾವರಣ ನಿರ್ಮಾಣವಾಗಿದ್ದು, ಚಿಕನ್ ತಿನ್ನುವವರ ಸಂಖ್ಯೆ ಕಡಿಮೆ ಆಗಿದ್ದು, ಚಿಕನ್ ದರ ಕುಸಿದಿದ್ದು 1 ಕಿಲೋಕ್ಕೆ 140 ರೂ. ಕ್ಕೆ ಬಂದಿದೆ.  

ಅಥಣಿ ತಾಲೂಕಿನ ಗಡಿ ಭಾಗ ವಿಶೇಷವಾಗಿ ಸಾಂಗಲಿ, ಪುಣೆ, ಮುಂಬೈಗೆ ಈ ಭಾಗದ ಜನರು ವಿವಿಧ ಕೆಲಸಕ್ಕಾಗಿ ಪಟ್ಟಣಕ್ಕೆ ತೆರಳುತ್ತಾರೆ. ಮರಳಿ ಸಾಯಂಕಾಲ ಮನೆಗೆ ಬರಲು ತಡಾಗುತ್ತದೆ. ಹಕ್ಕಿ ಜ್ವರದ ಭಯದಿಂದ ಮಾಂಸಾಹಾರಿ ಊಟ ಮಾಡವ ವ್ಯಕ್ತಿ ಶಾಕಾಹಾರಿ ಊಟ ಮಾಡುತ್ತಿದ್ದಾರೆ. ಗಡಿ ಭಾಗದ ಶಿರೂರ, ಸಂಬರಗಿ, ಪಾಂಡೆಗಾಂವ, ಅನಂತಪೂರ, ಮದಬಾವಿ, ಕಾಗವಾಡ ಸೇರಿದಂತಹ ಈ ಭಾಗದ ಹಲವಾರು ಜನರು ತಮ್ಮ ವೈಯಕ್ತಿಕ ಕೆಲಸ ಹಾಗೂ ಆಸ್ಪತ್ರೆ ಕೆಲಸಕ್ಕೆ ಹೋಗುತ್ತಾರೆ. ಮಹಾರಾಷ್ಟ್ರದಲ್ಲಿ ಹಕ್ಕಿಜ್ವರ ಬಂದ ಕಾರಣ ಜನರಲ್ಲಿ ಭಯದ ವಾತಾವರಣ ನಿರ್ಮಾಣವಾಗಿದೆ.  

ಜನರು ಹಕ್ಕಿ ಜ್ವರದ ಕುರಿತು ಎಚ್ಚರಿಕೆಯಲ್ಲಿದ್ದು, ಚಿಕನ್ ಸೇವಿಸುವ ಸಂಖ್ಯೆ ಕಡಿಮೆ ಆಗಿದೆ. ಆ ಕಾರಣ ವ್ಯಾಪಾರ ಸ್ಥಗಿತಗೊಂಡಿದೆ. ಜನರಲ್ಲಿ ಭಯ ಮೂಡಿದೆ.  

ಈ ಕುರಿತು ಪಶು ಸಂಗೋಪಣೆ ಇಲಾಖೆ ಸಹಾಯಕ ನಿರ್ದೇಶಕರಾದ ಡಾ. ಜ್ಞಾನೇಶ್ವರ ಕಾಂಬಳೆ ಇವರನ್ನು ಸಂಪರ್ಕಿಸಿದಾಗ ನಮ್ಮ ತಾಲೂಕಿನಲ್ಲಿ ಇರುವ ಕೋಳಿ ಫಾರ್ಮಗಳು ಪ್ರತಿ ಕೋಳಿ (ಹಕ್ಕಿ) ರಕ್ತ ಪಡೆದುಕೊಂಡು ಪರೀಶೀಲಣೆ ಮಾಡಿದ್ದೆವೆ. ನಮ್ಮ ಭಾಗದಲ್ಲಿ ಯಾವುದೇ ವ್ಯಕ್ತಿಗೆ ಹಕ್ಕಿ ಜ್ವರ ಇಲ್ಲ. ಮುನ್ನೆಚ್ಚರಿಯಾಗಿ ಅಥಣಿ ತಾಲೂಕಿನ ಕೊಟ್ಟಲಗಿ ಹಾಗೂ ಕಾಗವಾಡದಲ್ಲಿ ಹೊರ ಜಿಲ್ಲೆಯಿಂದ ಬರುವ ಕೋಳಿ (ಹಕ್ಕಿ) ಪರೀಶೀಲನೆ ಮಾಡಿ ಬಿಡುತ್ತಿದ್ದಾರೆ. ಮುನ್ನೆಚ್ಚರಿಯಾಗಿ ಸಾಂಗಲಿಯ ಪಶುಸಂಗೋಪನೆ  ಇಲಾಖೆಯ ಉಪನಿರ್ದೇಶಕರು ಅವರ ಸಂಪರ್ಕದಲ್ಲಿ ಇದ್ದು, ಮಾಹಿತಿ ಪಡೆದುಕೊಳ್ಳುತ್ತಿದ್ದೆವೆ. ನಮ್ಮ ತಾಲೂಕಿನಲ್ಲಿ ಯಾವುದೇ ರೀತಿಯ ಹಕ್ಕಿ ಜ್ವರ ಇಲ್ಲ ಎಂದು ಸ್ಪಷ್ಟ ಪಡಿಸಿದರು.