ಕಂಪ್ಲಿಯಲ್ಲಿ ಅಡುಗೆ ಅನಿಲ ಸಿಲಿಂಡರುಗಳಿಗೆ ಮುಗಿಬಿದ್ದ ಜನತೆ

ಕಂಪ್ಲಿಯಲ್ಲಿ ಅಡುಗೆ ಅನಿಲ ಸಿಲಿಂಡರುಗಳಿಗೆ ಮುಗಿಬಿದ್ದ ಜನತೆ People in Kampli are overwhelmed with cooking gas cylinders

ಲೋಕದರ್ಶನ ವರದಿ

ಕಂಪ್ಲಿ 27:  ಮಧ್ಯಪ್ರಾಚ್ಯ ದೇಶಗಳಲ್ಲಿ ನಡೆಯುತ್ತಿರುವ ಯುದ್ದದ ಹಿನ್ನೆಲೆಯಲ್ಲಿ ದೇಶಾದ್ಯಂತ, ಹಾಗೂ ರಾಜ್ಯದಲ್ಲಿ ಅಡುಗೆ ಅನಿಲ ಸಿಲಿಂಡರುಗಳಿಗೆ ತೊಂದರೆಯಾಗಿದ್ದು, ಕಂಪ್ಲಿ ಪಟ್ಟಣದಲ್ಲಿಯೂ ಸಹಿತ ಸಿಲಿಂಡರುಗಳಿಗೆ ಅಡಚನೆಯಾಗಿದ್ದು, ಪಟ್ಟಣದ ಶರತ್ ಗ್ಯಾಸ್ ಏಜನ್ಸಿ ಕಚೇರಿ ಮುಂಭಾಗದಲ್ಲಿ ಸಿಲಿಂಡುರುಗಳಿಗಾಗಿ ಗ್ರಾಹಕರು ಮುಗಿಬಿದ್ದಿದ್ದರು. ಬೆಳಿಗ್ಗೆಯಿಂದಲೇಕಂಪ್ಲಿ ಪಟ್ಟಣವೂ ಸೇರಿದಂತೆ ಗ್ರಾಮೀಣ ಪ್ರದೇಶಗಳಿಂದ ಆಗಮಿಸಿದ್ದ ಗ್ರಾಹಕರು ಗ್ಯಾಸ್ ಅಂಗಡಿಯ ಮುಂದೆ ಸಾಲುಗಟ್ಟಿ ನಿಂತಿದ್ದರು. 

ಗ್ಯಾಸ್ ಅಂಗಡಿ ತರೆಯುತ್ತಿದ್ದಂತೆಯೇ ಗ್ರಾಹಕರು ನಾ ಮುಂದು ತಾಮುಂದು ಎನ್ನುವಂತೆ ಅಂಗಡಿಗೆ ನುಗ್ಗಲು ಪ್ರಯತ್ನಿಸಿದರು.ಗ್ಯಾಸ್ ಅಂಗಡಿ ಮಾಲೀಕರು ಎಲ್ಲರನ್ನೂ ಸಮಾಧಾನ ಪಡಿಸಿ ಈಗಾಗಲೇ ಗ್ಯಾಸ್ ಬುಕ್ ಮಾಡಿವರಿಗೆ ಸೀನಿಯಾರಿಟಿ ಪ್ರಕಾರ ಗ್ಯಾಸ್ ಸಿಲಿಂಡರ್ ನೀಡಲಾಗುವುದು,ಯಾರೂಗೊಂದಲ ಮಾಡಿಕೊಳ್ಳಬೇಡಿ. ಅನಿಲ ಜೋಡಣೆಗೆ ನೋಂದಣಿಯಾಗಿರುವ ಮೊಬೈಲ್ ಮೂಲಕ ಯಾರು ಈಗಾಗಲೇ ನೋಂದಣಿ ಮಾಡಿದ್ದಾರೋ ಅವರಿಗೆ ಒನ್ ಟೈಮ್ ಪಾಸವರ್ಡ್‌ ಸಂದೇಶ ಅವರ ಮೊಬೈಲಿಗೆ ಬರುತ್ತದೆ.

ಅವರು ಬಂದು ಸಿಲಿಂಡರು ಪಡೆಯಬಹುದು, ಈಗಾಗಲೇ ಸರ್ಕಾರವು ಸಿಲಿಂಡರುಗಳ ಬುಕ್ಕಿಂಗ್ ನಿರಂತರವಾಗಿ ಮಾಹಿತಿ ನೀಡುತ್ತಿದ್ದಾರೆ. ಯಾರಿಗಾದರೂ ಬುಕ್ಕಿಂಗ್ ಮಾಡಲು ಗೊತ್ತಾಗದಿದ್ದರೆ ಗ್ರಾಹಕರ ಮೊಬೈಲ್ ಮೂಲಕ ಗ್ಯಾಸ್ ಬುಕ್ ಮಾಡಿಕೊಡುತ್ತೇವೆ ಎಂದು ಗ್ರಾಹಕರನ್ನು ಸಮಾಧಾನ ಪಡಿಸಿದರು. ನಂತರ ಗ್ರಾಹಕರು ತಮಗೆ ಬಂದಿರುವ ಸಿಲಿಂಡರುಗಳನ್ನು ಪಡೆದರು.