ಚಾಂದಕವಟೆ ಗ್ರಾಮದಲ್ಲಿ ಪಿಂಚಣಿ ಅದಾಲತ್
Pension Adalat in Chandakavate village
ಸಿಂದಗಿ 08: ಬಡವರಿಗೆ ಸರಕಾರಿ ಯೋಜನೆಗಳನ್ನು ಮನೆ ಮನೆಗೆ ತಲುಪಿಸಲು ಕ್ರಮ ತೆಗೆದುಕೊಳ್ಳುತ್ತದೆ. ಕಾರಣ ಗ್ರಾಮಸ್ಥರು ಸರಕಾರ ಸೌಲಭ್ಯಗಳನ್ನು ಅಗತ್ಯ ದಾಖಲೆಗಳನ್ನು ನೀಡಿ ನೊಂದಣಿಗೆ ಸಹಕಾರ ನೀಡಿ ಸದುಪಯೋಗ ಪಡೆದುಕೊಳ್ಳಬೇಕು ಎಂದು ಇಂಡಿ ಉಪವಿಭಾಗಾಧಿಕಾರಿ ಅನುರಾಧಾ ವಸ್ತ್ರದ ಕರೆ ನೀಡಿದರು.
ತಾಲೂಕಿನ ಚಾಂದಕವಟೆ ಗ್ರಾಮದಲ್ಲಿ ಸರ್ಕಾರದ ವತಿಯಿಂದ ಗ್ರಾಮದ ಬಸವೇಶ್ವರ ದೇವಸ್ಥಾನದಲ್ಲಿ ಪಿಂಚಣಿ ಅದಾಲತ್ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಸಿಂದಗಿ ಉಪ ತಹಶಿಲ್ದಾರ ಇಂದಿರಾಬಾಯಿ ಬಳಗಾನೂರ, ಕಂದಾಯ ನೀರೀಕ್ಷಕ ಐ.ಎಂ. ಮಕಾಂದರ್, ಗ್ರಾಮ ಲೆಕ್ಕಾಧಿಕಾರಿ ಪಿ.ಕೆ.ಹುಡೆದ್ ಗ್ರಾಮದ . ಪರಮಾನಂದ ಕಂಟಿಗೊಂಡ . ಸದಾನಂದ. ಹಿರೇಮಠ. ದೀನೆಶ ಸಿಂದಗಿ. ಸಿದ್ದನಗೌಡ ಪಾಟಿಲ್, ಸುಭಾಸ್ ಶಿರಕನಳ್ಳಿ, ಮಡ್ಡಪ್ಪ ಸೊನ್ನದ್, ಚಾಂದಸಾಬ್ ಮುಲ್ಲಾ, ಶೇಖರ ಕಲ್ಲೂರ. ಪತ್ರಕರ್ತ ನಿಂಗರಾಜ ಅತನೂರ ಇದ್ದರು.
ಗ್ರಾಮದ ಸ್ಮಶಾನದ ಜಾಗ 9 ಎಕರೆ 9 ಗುಂಟೆ ಗ್ರಾಮದ ಪ್ರಭಾವಿಗಳು ಕಬಳಿಸಿದ್ದು ಈ ಜಾಗ ಖಾಲಿ ಮಾಡಿಸಿ ಶವ ಸಂಸ್ಕಾರಕ್ಕೆ ಅನುಕೂಲ ಮಾಡಿ ಕೊಡಬೇಕು. ಇಲ್ಲದಿದ್ದರೆ ಮುಂದಿನ ದಿನದಲ್ಲಿ ಹೋರಾಟ ಮಾಡಬೇಕಾಗುತ್ತದೆ ಎಂದು ಇಂಡಿ ಉಪ ವಿಬಾಗಾಧಿಕಾರಿಗಳಿಗೆ ಗ್ರಾಮಸ್ಥರು ಮನವಿ ಮಾಡಿಕೊಂಡರು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 