ಕಾಗವಾಡ: ಹೌದೋ ಹುಲಿಯಾ ಡೈಲಾಗ್ ಮೂಲಕ ಎಲ್ಲೆಡೆ ಸಖತ ಸುದ್ದಿಯಾಗಿರುವ ಕಾಗವಾಡ ತಾಲೂಕಿನ ಐನಾಪೂರ ಗ್ರಾಮದ ಪೀರಪ್ಪ ಕಟ್ಟಿಮನಿ ತಮ್ಮ ನೆಚ್ಚಿನ ನಾಯಕ ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರನ್ನು ಭೇಟಿಯಾಗಿ ಆರೋಗ್ಯ ವಿಚಾರಿಸಿದ್ದಾನೆ.
ವಿಧಾನಸಭಾ ಉಪಚುನಾವಣೆ ನಿಮಿತ್ಯ ಕಾಗವಾಡ ತಾಲೂಕಿನ ಉಗಾರ ಖುರ್ದ ಪಟ್ಟಣದಲ್ಲಿ ಜರುಗಿದ ಸಿದ್ಧರಾಮಯ್ಯ ಇವರ ಪ್ರಚಾರ ಸಭೆಯಲ್ಲಿ ಐನಾಪೂರದ ಪೀರಪ್ಪ ಕಟ್ಟಿಮನಿ ಇವರು ಸಿದ್ಧರಾಮಯ್ಯ ಅವರು ಭಾಷಣ ಮಾಡುವಾಗ "ಹೌದೋ ಹುಲಿಯಾ" ಎಂದು ಕೂಗಿದ್ದನು.
ಹೌದೋ ಹುಲಿಯಾ ಡೈಲಾಗ್ ಎಲ್ಲೆಡೆ ಪಸರಿಸಿದೆ. ಈಗ ಇತನು ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಇವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಆಸ್ಪತ್ರೆಯಿಂದ ಬಿಡುಗಡೆಯಾಗಿ ಮನೆಯಲ್ಲಿ ವಿಶ್ರಾಂತಿ ಪಡೆಯುತ್ತಿರುವ ಸಿದ್ಧರಾಮಯ್ಯ ಅವರನ್ನು ಭೇಟಿಯಾದನು.
ಸಿದ್ಧರಾಮಯ್ಯ ಇವರಿಗೆ ನಮಸ್ಕರಿಸಿ, ಸರ್ ನಿಮ್ಮಿಂದಾಗಿ ನಾನು ರಾಜ್ಯಕ್ಕೆ ಪರಿಚಯವಾದೆ ಎಂದು ಹರ್ಷ ವ್ಯಕ್ತಪಡಿಸಿದನು. ಸಿದ್ಧರಾಮಯ್ಯ ಅವರೂಕೂಡ ಪೀರಪ್ಪ ಅವರನ್ನು ನೀನು ರಾಜ್ಯಕ್ಕೆ ಪರಿಚಆಗಿದ್ದಿಯಾ ಎಂದು ಶಹಭಾಷ್ಗಿರಿ ನೀಡಿದ್ದಾರೆ.
ಬೈಎಲೆಕ್ಷನ್ ಗೆಲುವಿನ ವಿಜಯೋತ್ಸವದಲ್ಲಿ ಭಾಗಿಯಾಗಿದ್ದ ಬಗ್ಗೆ ಇದೇ ವೇಳೆ ಸಿದ್ಧರಾಮಯ್ಯ ಅವರಿಗೆ ಸ್ಪಷ್ಠನೆ ನೀಡಿದ್ದ ಪೀರಪ್ಪ ನನ್ನನ್ನು ಕರೆದುಕೊಂಡು ಹೋದರು. ನಾನು ಯಾವಾಗಲೂ ಕಾಂಗ್ರೆಸ್ಗೆ ನೀವೆಲ್ಲಿರುತ್ತೀರೋ ಅಲ್ಲೆನಾನು ಇರುತ್ತೇನನೆ. ನೀವು ನಮ್ಮ ನಾಯಕರು ಎಂದು ಹೇಳಿಕೊಂಡಿದ್ದಾನೆ.
ನಿಮ್ಮನ್ನು ಭೇಟ ಮಾಡ್ಬೇಕೆಂಬ ಆಸೆ ಇತ್ತು. ಆದರೆ ನೀವು ಆಸ್ಪತ್ರೆಯಲ್ಲಿದ್ದೀರಿ. ಹಾಗಾಗಿ ಭೇಟಿಯಾಗಿರಲಿಲ್ಲ. ಇಂದು ನಿಮ್ಮನ್ನು ಭೇಟಿಮಾಡಿ ಖುಷಿಯಾಯಿತು ಎಂದು ಪೀರಪ್ಪ ಕಾಲಿಗೆ ನಮಸ್ಕಾರ ಮಾಡಿ ಸಿದ್ಧರಾಮಯ್ಯರ ಆಶೀವರ್ಾದ ಪಡೆದಕೊಂಡಿದ್ದಾನೆ.