ನವಿಲುಗರಿ, ಕೈಯಲ್ಲಿ ಕೊಳಲು: ಬಾಲಕೃಷ್ಣನಂತೆ ಮಿಂಚಿದ ಪುಟಾಣಿ ಇಂಚರಾ, ಚಾರುಣ್ಯ!"

ನವಿಲುಗರಿ, ಕೈಯಲ್ಲಿ ಕೊಳಲು: ಬಾಲಕೃಷ್ಣನಂತೆ ಮಿಂಚಿದ ಪುಟಾಣಿ ಇಂಚರಾ, ಚಾರುಣ್ಯ!" Peacock feather, flute in hand: Little ones Inchara and Charunya dazzled as Balakrishna!


ಲೋಕದರ್ಶನ ವರದಿ  

ಮುಂಡಗೋಡ 04 : ನವಿಲುಗರಿ, ಕೈಯಲ್ಲಿ ಕೊಳಲು ಹಿಡಿದು ಬಾಲಕೃಷ್ಣನಂತೆ ಕಂಗೊಳಿಸಿದ ಪುಟಾಣಿ ಇಂಚರಾ ಹಾಗೂ ಚಾರುಣ್ಯ ಅವರ ಮುದ್ದಾದ ವೇಷಭೂಷಣ ಶ್ರೀಕೃಷ್ಣ ಜನ್ಮಾಷ್ಟಮಿ ಹಬ್ಬದ ಆಚರಣೆಗೆ ವಿಶೇಷ ಮೆರುಗು ತಂದಿದೆ.3 ವರ್ಷದ ಮುದ್ದು ಬಾಲಕಿ ಇಂಚರಾ ಹಾಗೂ 1 ವರ್ಷದ ಚಾರುಣ್ಯ ಕೃಷ್ಣನ ವೇಷ ಧರಿಸಿ ಗಮನ ಸೆಳೆದಳು. ಕೃಷ್ಣನ ಅವತಾರದಲ್ಲಿ ಮಿಂಚಿದ ಕಂದಮ್ಮಗಳು: ಸುನೀತಾ ರವಿ ಚಲವಾದಿ ದಂಪತಿಯ 3 ವರ್ಷದ ಪುತ್ರಿ ಇಂಚರಾಗೆ ಪೋಷಕರು ಸಾಂಪ್ರದಾಯಿಕ ಕೃಷ್ಣನ ವೇಷಭೂಷಣ ತೊಡಿಸಿ, ನವಿಲುಗರಿ ಹಾಗೂ ಕೊಳಲಿನಿಂದ ಮುದ್ದಾಗಿ ಅಲಂಕರಿಸಿದ್ದರು. ಇದರ ಜೊತೆಗೆ ನಿಂಗಪ್ಪ ಯಲ್ಲಪ್ಪ ತಿರಕಣ್ಣನವರ ಪುತ್ರಿ ಚಾರುಣ್ಯ ಕೂಡ ಬಾಲಕೃಷ್ಣನ ಅವತಾರದಲ್ಲಿ ಮಿಂಚಿ, ಜನ್ಮಾಷ್ಟಮಿಯ ಸಂಭ್ರಮಕ್ಕೆ ಮತ್ತಷ್ಟು ಕಳೆ ತಂದಳು. ಫೋಟೋ ಕ್ಲಿಕ್ಕಿಸಿ ಖುಷಿ ಹಂಚಿಕೊಂಡ ಕುಟುಂಬಸ್ಥರು: ಪುಟ್ಟ ಕೃಷ್ಣನಂತೆ ಕಂಗೊಳಿಸಿದ ಇಂಚರಾ ಹಾಗೂ ಚಾರುಣ್ಯಾಳ ಮುದ್ದಾದ ಆಟ ಮತ್ತು ನೋಟವನ್ನು ಕಂಡ ಕುಟುಂಬಸ್ಥರು  ಫೋಟೋಗಳನ್ನು ತೆಗೆದುಕೊಂಡು ಸಂಭ್ರಮ ಹಂಚಿಕೊಂಡರು. ಜನ್ಮಾಷ್ಟಮಿ ಅಂಗವಾಗಿ ಮನೆಯಲ್ಲಿ ಹಬ್ಬದ ವಾತಾವರಣ ಕಳೆಗಟ್ಟಿತ್ತು.