ಕೊಪ್ಪಳದಲ್ಲಿ ಶಾಂತಿಯುತ ಬಕ್ರೀದ್ ಹಬ್ಬ ಆಚರಣೆ : ಸಂಸದ ಸೇರಿ ಗಣ್ಯರು ಭಾಗಿ
Peaceful Bakrid festival celebrated in Koppal: Dignitaries including MP participate
ಕೊಪ್ಪಳ 28: ಮುಸ್ಲಿಂ ಸಮುದಾಯದ ಪವಿತ್ರ ಹಾಗೂ ತ್ಯಾಗ ಬಲಿದಾನದ ಪ್ರತೀಕ ಈ ದುಲ್ ಹಾದಾ ಬಕ್ರೀದ್ ಹಬ್ಬ ಗುರುವಾರ ದಂದು ನಗರದ ಎರಡು ಪ್ರಮುಖ ಈದ್ಗಾ ಮೈದಾನ ಜಿಲ್ಲೆಯಾದಂತ ಶಾಂತಿಯುತವಾಗಿ ಆಚರಿಸಲಾಯಿತು,ನಗರದ ನಗರಸಭೆಯ ಪಕ್ಕದಲ್ಲಿರುವ ಹಳೆಯ ಈದ್ಗಾ ಮೈದಾನ ದಲ್ಲಿ ಸಹಸ್ರಾರು ಸಂಖ್ಯೆಯಲ್ಲಿ ಮುಸ್ಲಿಂ ಸಮುದಾಯ ಬಾಂಧವರು ಸಾಮೂಹಿಕ ಪ್ರಾರ್ಥನೆ ಆಚರಿಸಿ ಪರಸ್ಪರ ಹಬ್ಬದ ಶುಭಾಶಯಗಳು ವಿನಿಮಯ ಮಾಡಿಕೊಂಡರು, ಸದರಿ ಈದ್ಗಾ ಮೈದಾನಕ್ಕೆ ಸಂಸದ ಕೆ ರಾಜಶೇಖರ ಹಿಟ್ನಾಳ ಮಾಜಿ ಸಂಸದ ಸಂಗಣ್ಣ ಕರಡಿ ಜೆಡಿಎಸ್ ರಾಜ್ಯ ಕಮಿಟಿ ನಾಯಕ ಸಿ,ವಿ,ಚಂದ್ರಶೇಖರ ಸೇರಿದಂತೆ ಕೊಪ್ಪಳ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪ್ರಸನ್ನ ಗಡಾದ್ ಮತ್ತಿತರರು ಮುಖಂಡರು ರಾಜಕೀಯ ಗಣ್ಯರು ಜನಪ್ರತಿನಿಧಿಗಳು ಅಧಿಕಾರಿ ವರ್ಗದವರು ಪಾಲ್ಗೊಂಡಿದ್ದರು.
ಇದೇ ವೇಳೆ ಮುಸ್ಲಿಂ ಸಮುದಾಯದ ಪರವಾಗಿ ಈದ್ಗಾ ಕಮಿಟಿ ವತಿಯಿಂದ ಎಲ್ಲಾ ಗಣ್ಯರಿಗೆ ಸನ್ಮಾನಿಸಲಾಯಿತು, ಈ ಸಂದರ್ಭದಲ್ಲಿ ಮುಸ್ಲಿಂ ಸಮಾಜದ ಮುಖಂಡ ಹಾಗೂ ಕೊಪ್ಪಳ ನಗರಸಭೆಯ ಮಾಜಿ ಅಧ್ಯಕ್ಷ ಅಮ್ಜದ್ ಪಟೇಲ್, ಹಿರಿಯ ನ್ಯಾಯವಾದಿ ಹಾಗೂ ರಾಜ್ಯ ವಕ್ಫ್ ಮಂಡಳಿಯ ರಾಜ್ಯ ಸಮಿತಿಯ ನಿಕಟ ಪೂರ್ವ ಸದಸ್ಯರಾದ ಎಸ್ ಆಸಿಫ್ ಅಲಿ,ನಗರ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಎಂ ಪಾಷಾ ಕಾಟನ್, ಮುಸ್ಲಿಂ ಸಮಾಜದ ಮುಖಂಡ ಹಾಗೂ ಸೈಯದ್ ಫೌಂಡೇಶನ್ ನ ಅಧ್ಯಕ್ಷ ಕೆ,ಎಂ, ಸಯ್ಯದ್ ಅಲ್ಲದೆ ಅನೇಕ ಜನ ಮುಖಂಡರು ಸಹ ಪಾಲ್ಗೊಂಡು ಪರಸ್ಪರ ಹಬ್ಬದ ಶುಭಾಶಯಗಳು ವಿನಿಮಯ ಮಾಡಿಕೊಂಡರು ಮುಖ್ಯ ಖಾಜಿ ಅಬ್ಬಾಸ ಅಲಿ ಯವರು ಸಾಮೂಹಿಕ ಪ್ರಾರ್ಥನೆಯ ನೇತೃತ್ವ ವಹಿಸಿದ್ದು ಖಾಜಿ ಆಸಿಫ್ ರವರು ಸಾಮೂಹಿಕ ಪ್ರಾರ್ಥನೆ ನಡೆಸಿಕೊಟ್ಟರು,
ನಗರಸಭೆ ಮಾಜಿ ಸದಸ್ಯ ಮುತ್ತುರಾಜ್ ಕುಷ್ಟಗಿ ಜೆಡಿಎಸ್ ಮುಖಂಡ ಮಂಜುನಾಥ ಸರ್ಟೂರು ,ಸಮಾಜದ ಯುವ ನಾಯಕ ಸಯ್ಯದ್ ಮೆಹಬೂಬ್ ಹುಸೇನಿ ಬಲ್ಲೆ, ಸೈಯದ್ ಗೌಸ ಹುಸೇನಿ, ಖಾಜಾಹುಲಿ ಬನ್ನಿಕೊಪ್ಪ, ಮಾನ್ವಿ ಪಾಷಾ, ಸೈಯದ್ ಮೊಹಮ್ಮದ್ ಹುಸೇನಿ ಚೋಟು, ಎಂಡಿ ಜಹೀರ್ ಅಲಿ ,ಮಲ್ಲು ಪೂಜಾರ್, ನಾಗರಾಜ್ ಮೇಟಿ, ಹಾಜಿ ಹುಸೇನಿ ಶಿವಕುಮಾರ್ ಪೌಲಿ ಶೆಟ್ಟರ್, ಅನೇಕರು ಪಾಲ್ಗೊಂಡಿದ್ದರು, ನಗರಸಭೆಯಿಂದ ಸ್ವಚ್ಛತಾ ಕಾರ್ಯ ಮತ್ತು ಸುಗಮ ಸಂಚಾರದ ವ್ಯವಸ್ಥೆ ಸೇರಿದಂತೆ ನಗರ ಪೊಲೀಸರು ಸೂಕ್ತ ಬಂದೋಬಸ್ ಮಾಡಿದ್ದರು ನಂತರ ಸಾಮೂಹಿಕ ಪ್ರಾರ್ಥನೆಗೆ ಸಹಕರಿಸಿದ ಜಿಲ್ಲಾ ಆಡಳಿತದ ಮತ್ತು ಜಿಲ್ಲಾ ಪೊಲೀಸ್ ಇಲಾಖೆಯ ಹಾಗೂ ನಗರಸಭೆಯ ಅಧಿಕಾರಿ ವರ್ಗ ದವರೆಲ್ಲರಿಗೂ ಮುಸ್ಲಿಂ ಸಮಾಜದ ಮುಖಂಡರು ಹಾಗೂ ಕಮಿಟಿಯ ಆಡಳಿತ ಅಧಿಕಾರಿ ಗೌಸ್ ಸಾಬ್ ಸರ್ದಾರ್ ರವರು ಕೃತಜ್ಞತೆ ಸಲ್ಲಿಸಿದರು,
ಹಳೆ ವೈಷಮ್ಯ : ಬೆಳಗಾವಿಯಲ್ಲಿ ಯುವಕನ ಕೊಚ್ವಿ ಹತ್ಯೆ
ಕೆಪಿಸಿಸಿ ಮಾಜಿ ಸದಸ್ಯ, ವೈದ್ಯ ಡಾ. ಡಿ.ಎಚ್.ಮಾಲದಾರ ವಿಧಿವಶ
ಕನ್ನಡಪರ ನಿರ್ಣಯಕ್ಕೆ ಹಿಂದೇಟು: ಮಹಾಪೌರರ ನಡೆ ಈಗ ಸಂಶಯಕ್ಕೆ ಯಡೆ
ಬೆಳಗಾವಿಯಲ್ಲಿ ಬಿಗ್ ಹಾಕಿದ ಮನೆಗಳಿಗೆ ಪೊಲೀಸ ಭದ್ರತೆ ವ್ಯವಸ್ಥೆಗೆ ಜನರ ಮೆಚ್ಚುಗೆ
ಬೆಳಗಾವಿಗೆ ಬಂದ 20 ಜನ ಬಾಂಗ್ಲಾದವರಲ್ಲ : ಬಂಗಾಳ ಮೂಲದ ಚಿನ್ನದಂಗಡಿ ಕೂಲಿ ಕಾರ್ಮಿಕರು
ಭೀಕರ ಅಪಘಾತಕ್ಕೆ ಓರ್ವ ಸಾವು : ಮೂವರಿಗೆ ಗಂಭೀರ ಗಾಯ 