ಏಕತೆಯಿಂದ ನಡೆದುಕೊಂಡರೆ ವಿಶ್ವದಲ್ಲಿ ಶಾಂತಿ ನೆಲೆಸುತ್ತದೆ: ಶ್ರೀಗಳು

Peace will prevail in the world if we walk in unity: Shri

ರಾಯಬಾಗ 07: ಸರ್ವಧರ್ಮಗಳಲ್ಲಿ ಸೌಹಾರ್ದತೆ, ಏಕತೆಯಿಂದ ನಡೆದುಕೊಂಡರೆ ವಿಶ್ವದಲ್ಲಿ ಶಾಂತಿ ನೆಲೆಸುತ್ತದೆ ಎಂದು ಸುಕ್ಷೇತ್ರ ಹಿಪ್ಪರಗಿಯ ಪ್ರಭುಜಿ ಮಹಾರಾಜರು ಹೇಳಿದರು. 

ಶನಿವಾರ ತಾಲೂಕಿನ ಮೊರಬ ಗ್ರಾಮದ ಬಾನೆಸರಕಾರ ತೋಟದಲ್ಲಿ ಹಮ್ಮಿಕೊಂಡಿದ್ದ ಎಸ್‌.ಆರ್‌.ಬಾನೆಸರಕಾರ ಮತ್ತು ಗೋದಾವರಿ ಬಾನೆಸರಕಾರ ಅವರ ಪುಣ್ಯಸ್ಮರಣೆ ನಿಮಿತ್ಯ ಹಮ್ಮಿಕೊಂಡಿದ್ದ ಸತ್ಸಂಗ ಕಾರ್ಯಕ್ರಮದಲ್ಲಿ ಸಾನ್ನಿಧ್ಯ ವಹಿಸಿ ಮಾತನಾಡಿದ ಅವರು, ಮನಸ್ಸು ಗೆದ್ದರೆ ಜಗತ್ತು ಗೆಲ್ಲಲು ಸಾಧ್ಯ. ನಮ್ಮ ಮನಸ್ಸು ಪರಮಾತ್ಮನ ಧ್ಯಾನದಲ್ಲಿ ಲೀನಗೊಳಿಸಿದರೆ ಮುಕ್ತಿ ಪಡೆಯಲು ಸಾಧ್ಯ ಎಂದು ಹೇಳಿದರು.  

ಕೋಳಿಗುಡ್ಡ ಸುಜ್ಞಾನ ಕುಟೀರದ ಸ್ವರೂಪಾನಂದ ಸ್ವಾಮೀಜಿ, ಮುತ್ತೇಶ್ವರ ಸ್ವಾಮೀಜಿ, ಪರಸ್ಪ ಇಂಚಗೇರಿ,  ಹಿರಿಯ ಧುರೀಣ ಡಿ.ಎಸ್‌.ನಾಯಿಕ ಮಾತನಾಡಿದರು. 

ಕಾರ್ಯಕ್ರಮದಲ್ಲಿ ಬಿಡಿಸಿಸಿ ಅಧ್ಯಕ್ಷ ಅಪ್ಪಾಸಾಹೇಬ ಕುಲಗುಡೆ, ಯುವ ಧುರೀಣ ಸಂಜೀವಕುಮಾರ ಬಾನೆಸರಕಾರ, ಡಾ.ಎಸ್‌.ಎಸ್‌.ಬಾನೆ, ಡಾ.ಗಾಯತ್ರಿ ಬಾನೆ, ಧೂಳಗೌಡ ಪಾಟೀಲ, ಹಾಲಪ್ಪ ಘಾಳಿ, ಫಾರೂಕ ಮೋಮಿನ, ಶೀತಲ ಬೇಡಕಿಹಾಳೆ, ಬಿ.ಎನ್‌.ಬಂಡಗರ,  ರಾಜು ತಳವಾರ, ರೇವಣ್ಣ ಸರವ, ರಾಜು ಬಡೋರೆ, ಜಿನ್ನಪ್ಪ ಬಡೋರೆ ಸೇರಿ ಅನೇಕರು ಇದ್ದರು.