ವಿಶ್ವಶಾಂತಿಗಾಗಿ ಪೀಸ್ ಪೋಸ್ಟರ್ ಚಿತ್ರಕಲಾ ಸ್ಪರ್ಧೆ

ಮಹಾಲಿಂಗಪುರ 01: ಸ್ಥಳೀಯ ಗ್ರೀನ್ ಬೇಸಿನ್ ಲಯನ್ಸ್‌ ಕ್ಲಬ್ ಆಶ್ರಯದಲ್ಲಿ ಕೆಎಲ್‌ಇ ಸಂಸ್ಥೆಯ ಎಸ್‌ಸಿಪಿ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳಿಗೆ ವಿಶ್ವಶಾಂತಿಗಾಗಿ ಪೀಸ್ ಪೋಸ್ಟರ್ ಚಿತ್ರಕಲಾ ಸ್ಪರ್ಧೆಏರ್ಪಡಿಸಲಾಯಿತು. 4, 5, 6 ಮತ್ತು 7ನೇ ತರಗತಿ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಲಯನ್ಸ್‌ ಸಂಸ್ಥೆಯ ವತಿಯಿಂದ ಸಾಮಗ್ರಿ ಒದಗಿಸಲಾಗಿತ್ತು. ಚಿತ್ರಕಲಾ ಶಿಕ್ಷಕ ಶಿವಾನಂದ ನೀಲನ್ನವರ ನಿರ್ಣಾಯಕರಾಗಿದ್ದರು. 

ಈ ಸ್ಪರ್ಧೆ ವಿಶ್ವದಾದ್ಯಂತ ಲಯನ್ಸ್‌ ಸಂಸ್ಥೆ ಆಯೋಜಿಸಿದ್ದು, ಆಯ್ದ ಚಿತ್ರ ಕಲಾಕೃತಿಗಳನ್ನು ಗೋವಾ ಮೂಲಕ ಯುಎಸ್‌ಎ ಪ್ರಧಾನ ಕಚೇರಿಗೆ ತಲುಪಿಸಲಾಗುವುದು. ಪ್ರಥಮ ಬಹುಮಾನವಾಗಿ 5 ಸಾವಿರ ಡಾಲರ್ ನಗದು ಪುರಸ್ಕಾರವಿದೆ ಎಂದು ಸಂಸ್ಥೆ ತಿಳಿಸಿದೆ.  

ಲಯನ್ಸ್‌ ಸಂಸ್ಥೆಯ ಅಧ್ಯಕ್ಷ ರಾಜು ಶ್ರೀಶೈಲಪ್ಪ ತಾಳಿಕೋಟಿ, ಕಾರ್ಯದರ್ಶಿ ಡಾ. ಉಮಾ ಗುಂಡಾ, ಖಜಾಂಚಿ ಸಂಜು ಶಿರೋಳ, ಹಿರಿಯ ಸದಸದ್ಯರಾದ ಡಾ.ವಿಶ್ವನಾಥ ಗುಂಡಾ, ಅಶ್ವಿನಿ ಶ್ರೀಶೈಲ ಕೋಳಿಗುಡ್ಡ, ಮುಖ್ಯ ಶಿಕ್ಷಕಿ ಜಯಶ್ರೀ ಹಿರೇಮಠ, ವರ್ಗ ಶಿಕ್ಷಕಿಯರಾದ ರೇಷ್ಮಾ ರಾಠೋಡ, ಸಂಗೀತಾ ಕುಲಕರ್ಣಿ, ಕೆ.ಎಂ.ಹುನಗುಂದ, ಸೌಮ್ಯ ಅಂಬಿ, ಸಪನಾ ಅನಿಗೋಳ ಇದ್ದರು.