ಕಾರ್ಮಿಕರಿಗೆ ನಿರಂತರ ಕೂಲಿ ನೀಡಿ : ಇಒ ಯಶಂತಕುಮಾರ
Pay wages to workers regularly: EO Yashanthakumar
ಲೋಕದರ್ಶನ ವರದಿ
ಬೆಳಗಾವಿ, 07 : ಹೊಸ ಆರ್ಥಿಕ ವರ್ಷ ಪ್ರಾರಂಭವಾಗಿದು, ನರೇಗಾ ಗುರಿಗೆ ಅನುಗುಣವಾಗಿ ಪ್ರತಿ ಗ್ರಾಮ ಪಂಚಾಯತಿವಾರು ಕೂಲಿ ಕಾರ್ಮಿಕರಿಗೆ ನಿರಂತರವಾಗಿ ಕೆಲಸ ನೀಡಬೇಕು ಎಂದು ಕಾರ್ಯನಿರ್ವಾಹಕ ಅಧಿಕಾರಿಗಳಾದ ಯಶಂತಕುಮಾರ ಅವರು ಸೂಚಿಸಿದರು.
ಸ್ಥಳೀಯ ತಾಲ್ಲೂಕ ಪಂಚಾಯತ ಸಭಾಭವನದಲ್ಲಿ ಏಪ್ರಿಲ್ 7ರಂದು (ಮಂಗಳವಾರ) ವಿವಿಧ ವಿಷಯಗಳ ಪ್ರಗತಿ ಪರೀಶೀಲನಾ ಸಭೆ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿ, ಪಿಡಿಒ ಅವರು ತಮ್ಮ ಗ್ರಾಮ ಪಂಚಾಯತಿ ಕ್ರೀಯಾಶೀಲ ಕೂಲಿ ಕಾರ್ಮಿಕರಿಗೆ ಒಂದು ವರ್ಷದ ಆರ್ಥಿಕ ವರ್ಷಕ್ಕೆ ಬೇಕಾಗುವ ಕೂಲಿಗೆ ಅನುಗುಣವಾಗಿ ನರೇಗಾ ಕೂಲಿ ಕಾರ್ಮಿಕರಿಗೆ ನಿರಂತರ ಕೆಲಸ ನೀಡಬೇಕು ಮತ್ತು ಕಳೆದ ಆರ್ಥಿಕ ವರ್ಷದಲ್ಲಿ ಬಾಕಿ ಇರುವ ಕಾಮಗಾರಿಗಳನ್ನು ಮುಕ್ತಾಯಗೊಳಿಸಬೇಕು ಎಂದು ತಿಳಿಸಿದರು.
ತಮ್ಮ ಗ್ರಾಮ ಪಂಚಾಯತಿ ಕೆಲಸದ ಜೊತೆಗೆ ಶಾಲೆ ಹಾಗೂ ಅಂಗನವಾಡಿ ಸೇರಿದಂತೆ ಇತರ ಇಲಾಖೆಯ ಕಚೇರಿಗೆ ಸಂಬಂಧಿಸಿದಂತೆ ಪ್ರತಿ ದಿನ ಮಾಹಿತಿ ಇರಬೇಕು. ಇ-ಕೆವೈಸಿ ಪ್ರಗತಿಯಾಗಬೇಕು. ಕರ ವಸೂಲಾತಿಗೆ ಸಂಬಂಧಿಸಿದಂತೆ ತಮ್ಮ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಹೋಟಲ್ ಮತ್ತು ಇತರೆ ಕಟ್ಟಡಗಳಿಗೆ ಕರವಸುಲಾತಿಯಾಗಬೇಕು ಎಂದು ಸೂಚಿಸಿದರು.
ಇದೆ ವೇಳೆ, ಜಿಲ್ಲಾ ಪಂಚಾಯಿತಿಗೆ ಬಡ್ತಿಹೊಂದಿ ವರ್ಗಾವಣೆಗೊಂಡ ಸಹಾಯಕ ಲೆಕ್ಕಾಧಿಕಾರಿ ಬಸವರಾಜ ಪಾಟೀಲ ಅವರಿಗೆ ಸನ್ಮಾನಿಸಲಾಯಿತು. ಸಹಾಯಕ ಲೆಕ್ಕಧಿಕಾರಿಗಳಾಗಿ ಹೊಸದಾಗಿ ಆಗಮಿಸಿದ ಜಗದೀಶ ಚಿನಿವಾರ ಅವರಿಗೆ ಸ್ವಾಗತಿಸಿ ಸನ್ಮಾನಿಸಲಾಯಿತು.
ಸಭೆಯಲ್ಲಿ ಸಹಾಯಕ ನಿರ್ದೇಶಕರಾದ ಬಿ.ಡಿ ಕಡೇಮನಿ, ತಾಲ್ಲೂಕಾ ಯೋಜನಾಧಿಕಾರಿಗಳಾದ ಎನ್. ಎಸ್. ಹೂಗಾರ, ತಾಪಂ ವ್ಯವಸ್ಥಾಪಕರಾದ ಶ್ರೀಮತಿ ಮಾಹಾಂತಮ್ಮ ಎಂ. ದಂಡೋತಿ ಸೇರಿದಂತೆ ವಿವಿಧ ವಿಷಯಗಳ ವಿಷಯ ನಿರ್ವಾಹಕರು, ಗ್ರಾಪಂ ಪಿಡಿಒ, ತಾಪಂ ಸಿಬ್ಬಂದಿಗಳು ಹಾಗೂ ತಾಂತ್ರಿಕ ಸಿಬ್ಬಂದಿಗಳು ಇದ್ದರು.
11 ವರ್ಷಗಳಲ್ಲಿ ಡಿಜಿಟಲ್ ಇಂಡಿಯಾ ಆಡಳಿತವನ್ನು ಪರಿವರ್ತಿಸಿ, ನಾಗರಿಕರನ್ನು ಸಬಲಗೊಳಿಸಿದೆ: ಪ್ರಧಾನಿ ಮೋದಿ
ಮುಂಬೈನ ಚೆಂಬೂರಿನಲ್ಲಿ ಶಾಲಾ ಬಸ್ ಮೇಲೆ ಮರ ಉರುಳಿ ಬಿದ್ದು ವಿದ್ಯಾರ್ಥಿ ಸಾವು; ನಾಲ್ವರಿಗೆ ಗಾಯ
ಹುಡುಗಿಯ ಮನೆ ದರೋಡೆ, ಅಂತರಜಾತಿ ಪ್ರೇಮಿಗಳು ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆ, ಮರ್ಯಾದಾ ಹತ್ಯೆಗಳ ಅನುಮಾನ
ಡಿಸಿಸಿ ಬ್ಯಾಂಕಿನ 10 ವರ್ಷ ಮೇಲ್ಪಟ್ಟ ನಿರ್ದೇಶಕರ ಅನರ್ಹತೆ: ಆರ್ಬಿಐ ನಿಯಮ ಜಾರಿಗೆ ನಬಾರ್ಡ್ ಒತ್ತಾಯ, ಸರ್ಕಾರಕ್ಕೆ ಎಚ್ಚರಿಕೆ
ಮಹಾ ಸಿಎಂ ಜೊತೆ ಎಮ್ ಇಎಸ್ ಉನ್ನತಾಧಿಕಾರ ಸಭೆ ರದ್ದು: ಝಾಪಾ ಮುಖಂಡರು ಬರಿಗೈಯಿಂದ ವಾಪಸ್
ವಿವಾಹಿತೆಯ ಜೊತೆ ಪಲಾಯನ ಮಾಡಿದ ಯುವಕನ ಮನೆ ಧ್ವಂಸ : ಮಾರಕಾಸ್ತ್ರ ಹಿಡಿದು 50ಕ್ಕು ಹೆಚ್ಚು ಜನರಿಂದ ಕೃತ್ಯ 