ಸಕಾಲದಲ್ಲಿ ಸಾಲ ಪಾವತಿಸಿ ಬಂಗಾರ ಉಳಿಸಿಕೊಳ್ಳಿ ನ್ಯಾಯವಾದಿ ದಾನೇಶ ಅವಟಿ

ಸಕಾಲದಲ್ಲಿ ಸಾಲ ಪಾವತಿಸಿ ಬಂಗಾರ ಉಳಿಸಿಕೊಳ್ಳಿ ನ್ಯಾಯವಾದಿ ದಾನೇಶ ಅವಟಿ Pay off your loan on time and save your gold, says lawyer Danesh Avati

    ವಿಜಯಪುರ 14 : ಬಂಗಾರದ ಬೆಲೆ ಗಗನಕ್ಕೇರುತ್ತಿದೆ. ಬಂಗಾರ ಗಿರವಿದಾರರಲ್ಲಿ ಒತ್ತಿ ಇಟ್ಟ ಚಿನ್ನಕ್ಕೆ ಪಡೆದ ಸಾಲವನ್ನು ಸಕಾಲದಲ್ಲಿ ಮರುಪಾವತಿ ತಮ್ಮ ಬಂಗಾರದ ಬಹಿರಂಗ ಲಿಲಾವನ್ನು ತಡೆಗಟ್ಟಿ ಬಂಗಾರ ಉಳಿಸಿಕೊಳ್ಳಬೇಕೆಂದು ನ್ಯಾಯವಾದಿ ದಾನೇಶ ಅವಟಿ ಕಿವಿಮಾತು ಹೇಳಿದರು. 

        ನಗರದ ಸೋಲಾಪುರ ರಸ್ತೆಯ ಕೆಬಿಸಿ ಹೋಟೆಲ್ ಸಭಾಂಗಣದಲ್ಲಿ ದಿನಾಂಕ 14-11-2825 ರಂದು ಶುಕ್ರವಾರ ಬೆಳಿಗ್ಗೆ 10 ಗಂಟೆಗೆ ಪ್ರಶಾಂತ ಪಾಟೀಲ್ ಬಂಗಾರ ಲೇವಾದೇವಿ ಮತ್ತು ಗಿರವಿ ಒಪ್ಪಂದ ಕಂಪನಿ ಹಾಗೂ ಪಾಟೀಲ್ ಮತ್ತು ಪಾಟೀಲ್ ಕಂಪನಿಯವರು ಏರಿ​‍್ಡಸಿದ್ದ ಬಂಗಾರ ಬಹಿರಂಗ ಹರಾಜು ಕಾರ್ಯಕ್ರಮವನ್ನು ಜ್ಯೋತಿ ಪ್ರಜ್ವಲಿಸಿ ಉದ್ಘಾಟಿಸಿ ಮಾತನಾಡಿದ, ಅಗತ್ಯವಿರುವ ಹಣವನ್ನು ಪಡೆಯಲು ಅಥವಾ ಹೂಡಿಕೆ ಅವಕಾಶಗಳಿಗಾಗಿ ವ್ಯಕ್ತಿಗಳಿಗೆ ಚಿನ್ನದ ಸಾಲ ಹರಾಜು ಅತ್ಯುತ್ತಮ ಮಾರ್ಗವಾಗಿದೆ. ಚಿನ್ನದ ಸಾಲ ಹರಾಜಿನ ಎಲ್ಲಾ ಅಂಶಗಳೊಂದಿಗೆ ತಮ್ಮನ್ನು ತಾವು ಪರಿಚಿತರಾಗುವ ಮೂಲಕ ಅಂತಹ ವಹಿವಾಟುಗಳಲ್ಲಿ ಭಾಗವಹಿಸುವ ಮೂಲಕ ಯೋಗ್ಯ ಬೆಲೆಗೆ ಬೇಡಿಕೆಯ ಮೂಲಕ ಚಿನ್ನವನ್ನು ಬಿಡ್ಡದಾರರು ಪಡೆದುಕೊಳ್ಳಬಹುದು. ಇದೊಂದು ಜನಪಯೋಗಿ ಪ್ರಕ್ರಿಯೇಯಾಗಿದೆ ಎಂದು ತಿಳಿಸಿದರು. 

         ಈ ಸಂದರ್ಭ ಪ್ರಶಾಂತ ಪಾಟೀಲ್ ಬಂಗಾರ ಲೇವಾದೇವಿ ಮತ್ತು ಗಿರವಿ ಒಪ್ಪಂದ ಕಂಪನಿ ಹಾಗೂ ಪಾಟೀಲ್ ಮತ್ತು ಪಾಟೀಲ್ ಕಂಪನಿಯ  ಮಾಲೀಕರಾದ ಪ್ರಶಾಂತ ಪಾಟೀಲ ಮಾತನಾಡಿ,  ಬಂಗಾರ ಸಾಲಕ್ಕೆ ಒಪ್ಪಂದಕ್ಕೆ ಸಹಿ ಹಾಕುವ ಮೊದಲು ಸಾಲಗಾರರು ಸಂಪೂರ್ಣವಾಗಿ ಓದಿ ಉಲ್ಲೇಖಿಸಲಾದ ಎಲ್ಲ ಷರತ್ತುಗಳನ್ನು ತಿಳಿದುಕೊಳ್ಳಬೇಕು. ವಾಗ್ದಾನ ಮಾಡಿದ ಮೊತ್ತವು ಸಾಲದ ಮೊತ್ತ ಮತ್ತು ಬಡ್ಡಿಯನ್ನು ಸರಿದೂಗಿಸಲು ಸಾಕಾಗುತ್ತದೆಯೇ ಎಂದು ಖಚಿತ ಪಡಿಸಿಕೊಳ್ಳಬೇಕು. ಇತರ ರೀತಿಯ ಹಣಕಾಸು ವ್ಯವಸ್ಥೆಗಳಿಗೆ ಹೋಲಿಸಿದರೆ ಬಂಗಾರ ಸಾಲ ಹರಾಜಿನಲ್ಲಿ ಧೀರ್ಘ ಅರ್ಜಿ ಪ್ರಕ್ರಿಯೆಯ ಅಗತ್ಯವಿರುವುದಿಲ್ಲ. ತ್ವರಿತ ಮರುಪಾವತಿಗೆ ಸಮಯಾವಕಾಶ ನೀಡುತ್ತದೆ. ಇದು ತುರ್ತು ಹಣದ ಅವಶ್ಯಕತೆ ಇರುವ ಸಾಲಗಾರರಿಗೆ ಸೂಕ್ತ ಮಾರ್ಗವಾಗಿದೆ ಎಂದರು. 

    ಇಂಡಿ  ಶಾಂತೇಶ್ವರ ಸಹಕಾರಿ ಬ್ಯಾಂಕಿನ ನಿರ್ದೇಶಕರು ಜಿಗಜೇವಣಿಗಿ ಗ್ರಾಮ ಪಂಚಾಯತಿ ಮಾಜಿ ಅಧ್ಯಕ್ಷರಾದ ಹಣಮಂತರಾಯಗೌಡ ಪಾಟೀಲ, ಮುಖ್ಯ ಅತಿಥಿಗಳಾಗಿ ಮಾತನಾಡಿ, ವೀರರಾಣಿ ಕಿತ್ತೂರ ಚೆನ್ನಮ್ಮ ಹಾಗೂ ಸಂತಶ್ರೇಷ್ಠ ನಾಡಿಗೆ ಬಹುದೊಡ್ಡ ಕೊಡುಗೆಯನ್ನು ನೀಡಿದ್ದಾರೆ. ಅವರ ಜನ್ಮ ಜಯಂತಿಯಾದ ಇಂದು ತ್ಯಾಗ ಬಲಿದಾನ ತತ್ವ ಆದರ್ಶಗಳನ್ನು ಮೈಗೂಡಿಕೊಳ್ಳಬೇಕೆಂದು ಕರೆ ನೀಡಿದರು. 

   ವೇದಿಕೆಯಲ್ಲಿ ವಿಜಯಪುರ ಜಿಲ್ಲಾ ಉಪ ವಿಭಾಗ ಸಹಕಾರ ಸಂಘಗಳ ಸಹಾಯಕ ನಿಬಂಧಕರಾದ ಚೇತನ ಭಾವಿಕಟ್ಟಿ, ಸಹಕಾರ ಸಂಘಗಳ ನೀರೀಕ್ಷಕರಾದ ವಿರೇಶ ಬಳಿಗಾರ ಉಪಸ್ಥಿತರಿದ್ದು, ಹರಾಜಿನ ಪ್ರಕ್ರಿಯೇಯ ನೀತಿ ನಿಯಮಗಳನ್ನು ವಿವರಿಸಿದರು. ಇದೇ ಸಂದರ್ಭದಲ್ಲಿ ವೀರರಾಣಿ ಕಿತ್ತೂರ ಚನ್ನಮ್ಮ , ಸಂತಶ್ರೇಷ್ಠ ಕನಕದಾಸರ ಜಯಂತಿಯನ್ನು ಆಚರಿಸಿ ಕನ್ನಡ ರಾಜ್ಯೋತ್ಸವ ಶುಭಾಶಯಗಳನ್ನು ತಿಳಿಸಿ ಪ್ರಸಾದ ವಿತರಿಸಲಾಯಿತು. 

      ಈ ಸಂದರ್ಭದಲ್ಲಿ ಅಣ್ಣಾಸಾಹೇಬ ಪಾಟೀಲ, ಸಂಗಮೇಶ ಬಿರಾಜದಾರ, ಸಾಗರ ಪಾಟೀಲ, ಕಿರಣ ಘಂಟಿದರ್ಗಾ, ಶರಣು ಹಾದಿಮನಿ, ಪರಶುರಾಮ ಬಿರಾದಾರ, ಶ್ರೀದೇವಿ ಗದ್ಯಾಳ, ಸರಸ್ವತಿ ಬಾಗೇವಾಡಿ, ಅಕ್ಕಮಹಾದೇವಿ ಅವರಾದಿ ಮುಂತಾದವರು ಉಪಸ್ಥಿತರಿದ್ದರು.