ಲೋಕದರ್ಶನ ವರದಿ
ಮಾಂಜರಿ 29: ಕರ್ನಾಟಕ ಮತ್ತು ಮಹಾರಾಷ್ಟ್ರ ರಾಜ್ಯದ ಗಡಿ ಪ್ರದೇಶದ ಕಬ್ಬು ಬೆಳೆಗಾರರಿಗೆ ಅನುಕೂಲವಾಗಿರುವ ನೆರೆಯ ಮಹಾರಾಷ್ಟ್ರ ರಾಜ್ಯದ ಶಿರೊಳ ತಾಲ್ಲೂಕಿನ ಸೈನಿಕ್ ಟಾಕಳಿ ಗ್ರಾಮದ ಗುರುದತ್ತ ಶುಗರ್ಸ ಸಕ್ಕರೆ ಕಾರ್ಖಾನೆಯ ನಿರ್ಧೆಶಕರಾಗಿ ಚಿಕ್ಕೋಡಿ ತಾಲ್ಲೂಕಿನ ಇಂಗಳಿ ಗ್ರಾಮದ ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯರಾದ ಅಣ್ಣಾ ಸಾಹೇಬ್ ಅಪ್ಪಾಸಾಬ್ ಪವಾರ್ ಇವರನ್ನು ಆಯ್ಕೆ ಮಾಡಲಾಗಿದೆ ಎಂದು ಸಕ್ಕರೆ ಕಾರ್ಖಾನೆಯ ಅಧ್ಯಕ್ಷರಾದ ಮಾಧವರಾವ್ ಘಾಟಗೆ ತಿಳಿಸಿದರು
ಕರ್ನಾಟಕ ಮತ್ತು ಮಹಾರಾಷ್ಟ್ರ ರಾಜ್ಯದ ಗಡಿ ಭಾಗದಲ್ಲಿರುವ ಗುರುದತ್ತ ಶುಗರ್ಸ ಸಕ್ಕರೆ ಕಾರ್ಖಾನೆ ಖಾಸಗಿ ಒಡೆತನದ ಸಕ್ಕರೆ ಕಾರ್ಖಾನೆಯ ಹಲವಾರು ಸಮಾಜ ಕಾರ್ಯ ಮತ್ತು ಕಬ್ಬು ಬೆಳೆಗಾರರಿಗೆ ಅನುಕೂಲವಾಗುವ ಎಲ್ಲಾ ಮಾದರಿ ಯೋಜನೆಗಳನ್ನು ರೂಪಿಸಿಕೊಂಡು ದೇಶದಲ್ಲಿ ಒಂದು ಮಾದರಿ ಸಕ್ಕರೆ ಕಾರ್ಖಾನೆ ಆಗಿದ್ದು ಈ ಸಕ್ಕರೆ ಕಾರ್ಖಾನೆಯ ಕಳೆದ ಹದಿನೈದು ವರ್ಷಗಳಿಂದ ಕಬ್ಬಿಗೆ ಎಲ್ಲ ಸಕ್ಕರೆ ಕಾರ್ಖಾನೆ ಗಿಂತ ಹೆಚ್ಚಿನ ಬೆಲೆ ನೀಡಲಾಗಿದೆ ಈ ವರ್ಷ ಕೂಡ ಎಪಿ ದರಕ್ಕಿಂತ ಹೆಚ್ಚಿನ ದರ ನೀಡಲಾಗುವುದೆಂದು ಸಕ್ಕರೆ ಕಾರ್ಖಾನೆಯ ಅಧ್ಯಕ್ಷರಾದ ಮಾಧವರಾವ್ ಘಾಟಗೆ ತಿಳಿಸಿದರು.
ಈ ವೇಳೆ ನೂತನವಾಗಿ ನಿರ್ಧೆಶಕರಾಗಿ ಆಯ್ಕೆಯಾಗಿರುವ ಅಣ್ಣಾಸಾಬ ಪವಾರ್ ಇವರನ್ನು ಸಕ್ಕರೆ ಕಾರ್ಖಾನೆ ಅಧ್ಯಕ್ಷ ಮಾಧವರಾವ್ ಘಾಟಗೆ ಸನ್ಮಾನಿಸಿದರು ಈ ವೇಳೆ ಸಕ್ಕರೆ ಕಾರ್ಖಾನೆಯ ವ್ಯವಸ್ಥಾಪಕ ನಿರ್ಧೆಶಕ ರಾಹುಲ್ ಘಾಟಿಗೆ ನಿರ್ಧೆಶಕರಾದ ಸಂಜಯ್ ಗಾಯಕ್ವಾಡ್ ಧೋಂಡಿರಾಮ ನಾಗನೇ ಬಾಳಾಸಾಹೆಬ ಪಾಟೀಲ್ ಹಾಗೂ ಇನ್ನಿತರ ರೈತರು ಹಾಜರಿದ್ದರೂ.