ಹೆಚ್ಚುವರಿ ಮತ್ತು ವಿಶೇಷ ಅನುದಾನಕ್ಕೆ ಪಟೇಲ್ ಮನವಿ

ಹೆಚ್ಚುವರಿ ಮತ್ತು ವಿಶೇಷ ಅನುದಾನಕ್ಕೆ ಪಟೇಲ್ ಮನವಿ  Patel appeals for additional and special grants

ಕೊಪ್ಪಳ  19: ಐದನೇ ರಾಜ್ಯ ಹಣಕಾಸು ಆಯೋಗದ ಅಧ್ಯಕ್ಷರಾದ ಸಿ ನಾರಾಯಣಸ್ವಾಮಿ ಹಾಗೂ ಸಮಿತಿಯ ಎಲ್ಲಾ ಸದಸ್ಯರು ಇವರುಗಳು ಗ್ರಾಮೀಣ ಹಾಗೂ ನಗರ ಸ್ಥಳೀಯ ಸಂಸ್ಥೆಗಳ ಸಾಂಸ್ಥಿಕ ರಚನೆ ಕಾರ್ಯ ಚಟುವಟಿಕೆಗಳು ಆರ್ಥಿಕ ಸ್ಥಿತಿ ಸಂಪನ್ಮೂಲಗಳ ಕೃಡೀಕರಣಗಳ ಹಂಚಿಕೆ ಮತ್ತು ಮೂಲ ಸೌಕರ್ಯ ಹಾಗೂ ಸೇವೆಗಳ ಒದಗಿಸುವಿಕೆಯಲ್ಲಿ ತಾಂತ್ರಿಕ ಕೌಶಲ್ಯ ಸಾಮರ್ಥ್ಯ ಇತ್ಯಾದಿಗಳ ಅಧ್ಯಯನ ಮಾಡಲು ಕೊಪ್ಪಳ ನಗರಸಭೆಗೆ ಭೇಟಿ ನೀಡಿ ಚುನಾಯಿತ ಪ್ರತಿನಿಧಿಗಳ ಜೊತೆಗೆ ಸಭೆಯನ್ನು ನಡೆಸಿ ನಗರ ಅಭಿವೃದ್ಧಿ ಸಲುವಾಗಿ ಯಾವ ರೀತಿ ಸಂಪನ್ಮೂಲವನ್ನು ಕುರುಡಿಕರಿಸಬೇಕು ಎಂಬುವುದರ ಬಗ್ಗೆ ಚರ್ಚಿಸಿ, ಚುನಾಯಿತ ಪ್ರತಿನಿಧಿಗಳ ಜೊತೆಗೆ ಸಂವಾದವನ್ನು ನಡೆಸಿ ಚುನಾಯಿತ ಪ್ರತಿನಿಧಿಗಳ ಜೊತೆಗೆ ಮಾಹಿತಿಯನ್ನು ಪಡೆದು   ಸರ್ಕಾರಕ್ಕೆ ಹೆಚ್ಚಿನ ಅನುದಾನ ಕೊಡುವುದರ ಬಗ್ಗೆ ಪ್ರಸ್ತಾವನೆಯನ್ನು ಸಲ್ಲಿಸಲಾಗುವುದು ಎಂದು ಭರವಸೆಯನ್ನು ಐದನೇ ಹಣಕಾಸು ಆಯೋಗದ ಅಧ್ಯಕ್ಷ ನಾರಾಯಣಸ್ವಾಮಿ ಯವರು ಅಧ್ಯಯನ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ ಭರವಸೆ ನೀಡಿದರು.

ಇದೇ ಸಂದರ್ಭದಲ್ಲಿ ನಗರಸಭೆ ಅಧ್ಯಕ್ಷರಾದ ಅಮ್ಜದ್ ಪಟೇಲ್ ಅವರು ಅವರಿಗೆ ಮನವಿ ಪತ್ರವನ್ನು ನೀಡಿ ನಗರಸಭೆಗೆ ವಿಧದ ರಾಜ್ಯ ಹಣಕಾಸು ಯೋಜನೆಯಡಿಯಲ್ಲಿ ಕೇಂದ್ರ ಸರ್ಕಾರದ ಯೋಜನೆ ಅಡಿಯಲ್ಲಿ ಹೆಚ್ಚಿನ ಅನುದಾನವನ್ನು ನೀಡಬೇಕು ಎಂದು ಮನವಿಯನ್ನು ಆಯೋಗಕ್ಕೆ ನೀಡಿದರು ಸದಸ್ಯರುಗಳಾದ ಆರ್ ಎಸ್ ಪುಂಡೆ ಮೊಹಮ್ಮದ್ ಸನಾವುಲ್ಲಾ ನಗರಸಭೆಯ ಮಾಜಿ ಅಧ್ಯಕ್ಷರು ಹಾಲಿ ಸದಸ್ಯರಾದ ಮಹೇಂದ್ರ ಚೋಪ್ರಾ ನಗರ ಸಭೆ ಸದಸ್ಯರಾದ ಮುತ್ತುರಾಜ್ ಕುಷ್ಟಗಿ ಚನ್ನಪ್ಪ ಕೋಟ್ಯಾಳ ಅಕ್ಬರ್ ಪಾಷ ಪಲ್ಟನ್  ಮಹಿಳಾ ನಗರಸಭೆ ಸದಸ್ಯರಾದ ಸಬಿಯ ಸುಲ್ತಾನ ಹೆಬ್ಸೂರು ನಗರಸಭೆ ಸದಸ್ಯರಾದ ಇವರೆಲ್ಲರೂ ಮಾತನಾಡಿ ಸಲಹೆ ಸೂಚನೆಗಳನ್ನು ನೀಡಿದರು.

ಈ ಸಂದರ್ಭದಲ್ಲಿ  ಜಿಲ್ಲಾ ನಗರ ಅಭಿವೃದ್ಧಿ ಕೋಶದ ಜಿಲ್ಲಾ ಅಧಿಕಾರಿಗಳಾದ ರೇಷ್ಮಾ ಹಾನಗಲ್ ನಗರಸಭೆಯ ಪೌರಾಯ್ತರಾದ ಗಣಪತಿ ಪಟೇಲ್ ತಶಿಲ್ದಾರರಾದ ವಿಠ್ಠಲ ಚೌಗಲೆ ಭಾಗ್ಯನಗರ ಪಟ್ಟಣ ಪಂಚಾಯಿತಿಯ ಮುಖ್ಯ ಅಧಿಕಾರಿ ಸುರೇಶ್ ಬಬ್ಲಿ ನಗರಸಭೆಯ ಸಹಾಯಕ ಕಾರ್ಯನಿರ್ವಾಹಕ ಅಧಿಕಾರಿಗಳಾದ ಮಧುರಾ ಇನ್ನು ಅನೇಕರು ವಿವಿದ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು