ಪತಂಜಲಿ ಯೋಗ ಸಮಿತಿಯಿಂದ ಬಸಮ್ಮ ಡಗಲಿ ಇವರಿಗೆ ಅಭಿನಂದನೆ

ಪತಂಜಲಿ ಯೋಗ ಸಮಿತಿಯಿಂದ ಬಸಮ್ಮ ಡಗಲಿ ಇವರಿಗೆ ಅಭಿನಂದನೆ Patanjali Yoga Committee congratulates Basamma Dagali

  ಗದಗ 26: ನಗರದ ಮುನಸಿಪಲ್ ಮೈದಾನದಲ್ಲಿ ಪ್ರತಿನಿತ್ಯ ನಡೆಯುವ ಉಚಿತ ಯೋಗ ಕಕ್ಷೆಯಲ್ಲಿ ಇಂದು ಬೆಳಿಗ್ಗೆ ನಿವೃತ್ತ ಶಿಕ್ಷಕಿ ಹಾಗೂ ಹಿರಿಯ ಯೋಗ ಶಿಕ್ಷಕಿ ಬಸಮ್ಮ ಡಗಲಿ ಇವರಿಗೆ ಏರಿ​‍್ಡಸಿದ ಸನ್ಮಾನ ಸಮಾರಂಭದಲ್ಲಿ ಸಮಿತಿ ವತಿಯಿಂದ ಶಾಲುಹೊದಿಸಿ, ಹಾರಹಾಕಿ ಫಲಪುಷ್ಪಗಳನ್ನು ನೀಡಿ ಗೌರವಿಸಲಾಯಿತು.  ಭಾರತ  ಸ್ವಾಭಿಮಾನ ಟ್ರಸ್ಟನ ಜಿಲ್ಲಾ ಪ್ರಭಾರಿಗಳಾದ ರುದ್ರಣ್ಣ ಗುಳಗುಳೆಯವರು  ಮುಖ್ಯ ಅತಿಥಿಗಳ ಸ್ಥಾನವನ್ನು ವಹಿಸಿ ಮಾತನಾಡುತ್ತಾ ಮಕ್ಕಳೊಂದಿಗೆ ತಮ್ಮ ಸೇವೆಯನ್ನು ಸಲ್ಲಿಸುತ್ತಾ ಅಷ್ಟೆ ಸೇವೆಯನ್ನು ನಮ್ಮ ಯೋಗಕ್ಕೆ ಸಲ್ಲಿಸಿದ ಹಿರಿಮೆ ಬಸಮ್ಮ ಡಗಲಿ ಇವರದಾಗಿದೆ.

               2007 ರಿಂದ ಯೋಗಕ್ಕಾಗಿ ಸೇವೆ ಸಲ್ಲಿಸತ್ತಿರುವ ನಮ್ಮೆಲ್ಲರ ಪ್ರಯತ್ನದಿಂದ 2011 ರಲ್ಲಿ ಅಂತರಾಷ್ಟ್ರೀಯ ಯೋಗ ಗುರು ಬಾಬಾ ರಾಮದೇವ ಗುರುಗಳ ಆಗಮನದಿಂದ ಇದೇ ಮೈದಾನದಲ್ಲಿ ವಿಜೃಂಭಣೆಯಿಂದ ಯೋಗ ತರಬೇತಿ ಜರುಗಿತು.  ನಂತರದ ಅವಧಿಯಲ್ಲಿ ಕಮತರ ಗುರುಗಳು ಕೆಲದಿನ ಈ ಕಕ್ಷೆ ನಡೆಸಿಕೊಂದು ಬಂದರು. ತದನಂತರ ನಿರಂತರ ಯೋಗ ಕಕ್ಷೆಯ ಚುಕ್ಕಾಣಿ ಹಿಡಿದವರೆ ಬಸಮ್ಮ ಡಗಲಿ ಇವರು. ಅಲ್ಲಿಂದ ಇಲ್ಲಿಯವರೆಗೂ ತಮ್ಮೊಂದಿಗೆ ಕಕ್ಷೆಯ ಬೆಳವಣಿಗೆಗೆ ಬೇರೆ ಬೇರೆ ಯೋಗ ಶಿಕ್ಷಕರನ್ನು ತಯಾರುಗೊಳಿಸಿದ ಇವರು ತಮ್ಮ ಶಿಕ್ಷಕಿ ಸೇವೆಯಿಂದ ನಿವೃತ್ತಿಯಾಗಿದ್ದು ಅವರ ನಿವೃತ್ತಿ ಜೀವನ ಸುಖಕರವಾಗಿರಲೆಂದು ಹರಸಿ ಹಾರೈಸಿದರು. 

ಸನ್ಮಾನಕ್ಕೆ ಪ್ರತಿಯಾಗಿ ಮಾತನಾಡಿದ ಹಿರಿಯ ಯೋಗ ಶಿಕ್ಷಕಿ ಬಸಮ್ಮ ಡಗಲಿಯವರು 2011 ರಿಂದ ಎಷ್ಟೇ ತೊಂದರೆಯಾದರು, ಹವಾಗುಣಕ್ಕನುಸಾರವಾಗಿ ಆರೋಗ್ಯದಲ್ಲಿ ಸ್ವಲ್ಪ ಏರುಪೇರಾದರು ಅವುಗಳನ್ನು ಲೆಕ್ಕಿಸದೆ ಇದು ನನ್ನ ಕಕ್ಷೆ ಇದರಿಂದ ಮುಂದೆ ಸಾಕಷ್ಟು ಕಕ್ಷೆಗಳಾಗುತ್ತವೆ. ಇದನ್ನು ಬಿಡಬಾರದು ಮುಂದುವರೆಸಿಕೊಂಡು ಹೋಗಬೇಕು. ಇಲ್ಲಿ ಯೋಗ ಶಿಕ್ಷಕರ ಕೊರತೆ ಇದೆ ಎಂದು ಮನಗಂಡು ಪ್ರಾರಂಭದಲ್ಲಿ ಶಿಕ್ಷಕರನ್ನು ತಯಾರು ಮಾಡುವುದನ್ನು ನಮ್ಮೊಂದಿಗೆ ಹಂಚಿಕೊಂಡರು. ಮಕ್ಕಳೊಂದಿಗೆ ನಾನು ಮಕ್ಕಳಾಗಿನೆ ಬೆರೆಯುತ್ತಿದ್ದೆ. ಮಕ್ಕಳ ಹಾಗೂ ಪಾಲಕರ ಮನವೋಲಿಸಿ ಎಲ್ಲ ಮಕ್ಕಳಿಗೆ ಡಗಲಿ ಟೀಚರ್ ಎಂದೇ ಪ್ರಸಿದ್ದಿಯಾದೆ. ನಾನು ಎಲ್ಲೇ ಇದ್ದರೂ ಯೋಗಕ್ಕಾಗಿನೇ ನಾನು ಸೇವೆ ಕೊಡುತ್ತೇನೆಂದು ನುಡಿದರು.  

ಅಧ್ಯಕ್ಷತೆ ವಹಿಸಿದ ಗಿರಿಯಪ್ಪ ಮಡಿವಾಳರ ಇವರು ಮಾತನಾಡಿ ಬಸಮ್ಮ ಡಗಲಿ ಇವರು ಸೇವೆಯಿಂದ ನಿವೃತ್ತಿ ಆಗಿರಬಹುದು ಆದರೆ ಯೋಗ ಸೇವೆಯಿಂದ ನಿವೃತ್ತಿಯಾಗಿಲ್ಲ. ಅವರ ಸೇವೆ, ಮಾರ್ಗದರ್ಶನ ನಮಗೆಲ್ಲ ಅವಶ್ಯವಿದೆ ಎಂದು ನುಡಿದರು. ಇವರ ನಿವೃತ್ತಿ ಜೀವನ ಸುಖಕರವಾಗಿರಲೆಂದು ನುಡಿದರು. ಇನ್ನೋರ್ವ ಅತಿಥಿಗಳಾದ ರಾಷ್ಟ್ರ​‍್ರಶಸ್ತಿ ವಿಜೇತ ಶಿಕ್ಷಕರಾದ ಎಸ್‌.ಎನ್‌.ಬಳ್ಳಾರಿಯವರು ಮಾತನಾಡಿ ಆಸ್ತಿಕರಾಗಿದ್ದ ನಮ್ಮನ್ನು ನಾಸ್ತಿಕರನ್ನಾಗಿ ಮಾಡಿದ ಹಿರಿಮೆ ಬಸಮ್ಮ ಡಗಲಿಯವರಿಗೆ ಸಲ್ಲಬೇಕು. ಭೂಸ್ವರ್ಗವಾದ ಮೌಂಟಅಬೂ ಗೆ ಸಹ ನಮ್ಮೆಲ್ಲರನ್ನು ಪ್ರಚೋದಿಸಿ ಕರೆದುಕೊಂಡು ಹೋಗಿ ಅನುಭವ ಮಾಡಿಸಿದ ಇವರ ನಿವೃತ್ತಿ ಜೀವನ ಸುಖಕರವಾಗಿರಲೆಂದು ಹಾರೈಸುತ್ತೆನೆಂದು ನುಡಿದರು. ಜಿಲ್ಲಾ ಖಜಾಂಚಿಗಳಾದ ಕೆ.ಎಸ್‌.ಗುಗ್ಗರಿಯವರು ಮಾತನಾಡುತ್ತಾ ಬಸಮ್ಮ ಡಗಲಿ ಇವರ ಪರಿಚಯವನ್ನು ಮಾಡುತ್ತಾ ಅವರು ನಡೆದುಬಂದ ದಾರಿಯನ್ನು ಸ್ಮರಿಸಿದರು.  ಕಳೆದ 14 ವರ್ಷಗಳಿಂದ ಯೋಗಕ್ಕೆ ಸಲ್ಲಿಸಿದ ಸೇವೆಯನ್ನು ಮೆಲುಕು ಹಾಕಿದರು. ಇವರ ನಿವೃತ್ತಿ ಜೀವನ ಸುಖಕರವಾಗಿರಲೆಂದು ಆಶಿಸಿದರು.  

ಪತಂಜಲಿ ಯೋಗ ಕಕ್ಷೆಯ ಕಾರ್ಯದರ್ಶಿ ನಾಗರತ್ನಾ ಇವರು ಭಜನೆಯನ್ನು ಮಾಡಿಸುತ್ತಾ ನಮ್ಮಂತ ಎಷ್ಟೋ ಯೋಗ ಶಿಕ್ಷಕರನ್ನು ತಯಾರು ಮಾಡಿ ವಿವಿಧ ಕಡೆ ನಡೆಯುವ ಯೋಗ ಕಕ್ಷೆಗಳಿಗೆ ಕಾರಣಿಭೂತರಾಗಿದ್ದಾರೆ. ಗದಗದಲ್ಲಿ ಯೋಗ ಕಕ್ಷೆಗಳು ಬೆಳಕಿಗೆ ಬಂದರೆ ಅದರ ಶ್ರೇಯಸ್ಸು ಬಸಮ್ಮ ಡಗಲಿ ಇವರಿಗೆ ಸೇರುತ್ತದೆ. ಇವರು ಪ್ರಾರಂಭದಲ್ಲಿ ಯೋಗ ಶಿಕ್ಷಕರನ್ನು ತಯಾರು ಮಾಡುದಸಿವಯೋಗ ಮಂದಿರವೇ ಆಗಿದ್ದರು ಎಂದು ನುಡಿದರು. ಇವರ ನಿವೃತ್ತಿ ಜೀವನ ಸುಖಕರವಾಗಿರಲೆಂದು ಆಶಿಸಿದರು. 

ಈ ಸಮಯದಲ್ಲಿ ಬ್ರಹ್ಮಕುಮಾರಿ ಈಶ್ವರಿಯ ವಿಶ್ವವಿದ್ಯಾಲಯದ ಯೋಗ ಶಿಕ್ಷಕಿ ಶೋಭ ಬೆಂಗಳೂರು ತಮ್ಮ ಕಕ್ಷೆಯ ಸಾಧಕರೊಂದಿಗೆ  ರೇಶ್ಮೆ ಸೀರೆ ಹೊದಿಸಿ ಗೌರವಿಸಿದರು. ಪ್ರಾರಂಭದಲ್ಲಿ ಶಿವಲೀಲಾ ಬೆಂಗಳೂರ ಯೋಗ ಶಿಕ್ಷಕಿ ಇವರು ಶಿವನ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮ ಪ್ರಾರಂಭವಾಯಿತು. ಭಾರತ ಸ್ವಾಭಿಮಾನ ಟ್ರಸ್ಟನ ಸಹಪ್ರಭಾರಿಗಳಾದ ಬಸವರಾಜ ಹಿರೇಮಠ ಇವರು ಸರ್ವನ್ನು ಸ್ವಾಗತಿಸಿ ಪುಷ್ಪಾ ನಡೆಸಿಕೊಟ್ಟರು. ರತ್ನಾ ಬಡಿಗಣ್ಣವರ ನಿರೂಪಿಸಿದರು. ಕೊನೆಯಲ್ಲಿ ಲಕ್ಷ್ಮಿ ಗುರಿಕಾರ ಸರ್ವರನ್ನು ವಂದಿಸಿದರು.  ಈ ಸಂದರ್ಭದಲ್ಲಿ ಕಿಸಾನ ಪಂಚಾಯತನ ಜಿಲ್ಲಾ ಪ್ರಭಾರಿಗಳಾದ ಪ್ರಮೋದ ಬೆಲಿಯವರು, ಹಿರಿಯ ಯೋಗ ಶಿಕ್ಷಕರು, ವಿವಿಧ ಕಕ್ಷೆಯಿಂದ ಯೋಗ ಶಿಕ್ಷಕರು, ಯೋಗ ಸಾಧಕರು  ಉಪಸ್ಥಿತರಿದ್ದು ಕಾರ್ಯಕ್ರಮ ಯಶಸ್ವಿಗೊಳಿಸಿದರು.