ಪಾರ್ವತಿ ತಂಬಾಕೆಗೆ ಪಿಎಚ್‌ಡಿ ಪದವಿ ಪ್ರದಾನ

Parvati Tambake was conferred with a PhD degree

ವಿಜಯಪುರ 23: ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯವು ಪಾರ್ವತಿ ತಂಬಾಕೆ ಅವರು ಸಲ್ಲಿಸಿದ್ದ “ಆ್ಯನ್ ಅನಾಲಿಟಿಕಲ್ ಸ್ಟಡಿ ಆಫ್ ಸೆಲೆಕ್ಟೆಡ್ ಫಿಜಿಕಲ್, ಫಿಜಿಯೋಲಾಜಿಕಲ್, ಸೈಕಲಾಜಿಕಲ್ ಕಾಂಪೊನೆಂಟ್ಸ್‌ ಆ್ಯಂಡ್ ಡಿಫರೆಂಟ್ ಲೆವೆಲ್ ಆಫ್ ಪರ್ಫಾರ್ಮೆನ್ಸ್‌ ಆನ್ ನಾರ್ಥ ಕರ್ನಾಟಕ ಸೈಕ್ಲಿಸ್ಟ್‌” ಕುರಿತು ಸಲ್ಲಿಸಿದ್ದ ಮಹಾಪ್ರಬಂಧಕ್ಕೆ ಪಿಎಚ್‌ಡಿ ಪದವಿ ನೀಡಿದೆ.  

ಪಾರ್ವತಿ ತಂಬಾಕೆ ಅವರು ದೈಹಿಕ ಶಿಕ್ಷಣ ಅಧ್ಯಯನ ಮತ್ತು ಕ್ರೀಡಾ ವಿಜ್ಞಾನ ವಿಭಾಗದ ಪ್ರೊ. ಸಕ್ಪಾಲ ಹೂವಣ್ಣ ಅವರ ಮಾರ್ಗದರ್ಶನದಲ್ಲಿ ಸಂಶೋಧನೆ ಕೈಗೊಂಡಿದ್ದರು. ಡಾಕ್ಟರೇಟ್ ಪದವಿ ಪಡೆದಿರುವ ಪಾರ್ವತಿ ತಂಬಾಕೆ ಅವರನ್ನು ಕುಲಪತಿ ಪ್ರೊ.ಬಿ.ಕೆ.ತುಳಸಿಮಾಲ, ಕುಲಸಚಿವ ಶಂಕರಗೌಡ ಸೋಮನಾಳ, ಮೌಲ್ಯಮಾಪನ ಕುಲಸಚಿವ ಪ್ರೊ.ಎಚ್‌.ಎಂ. ಚಂದ್ರಶೇಖರ  ಅಭಿನಂದಿಸಿದ್ದಾರೆ.