ಶ್ರೇಷ್ಠ ಉದ್ಯಮಿ ವೀರಣ್ಣ ಪವಾಡದ ಅವರಿಗೆ ಕುರುಹಿನಶೆಟ್ಟಿ ಸಮಾಜದಿಂದ ಸನ್ಮಾನ

ಶ್ರೇಷ್ಠ ಉದ್ಯಮಿ ವೀರಣ್ಣ ಪವಾಡದ ಅವರಿಗೆ ಕುರುಹಿನಶೆಟ್ಟಿ ಸಮಾಜದಿಂದ ಸನ್ಮಾನ  Prominent entrepreneur Veeranna Pavadada felicitated by the Kuruhinashetty community


ಲಕ್ಷ್ಮೇಶ್ವರ, ಸೆ. 4: ತಾಲೂಕಿನ ಶಿಗ್ಲಿ ಗ್ರಾಮದ ಶ್ರೇಷ್ಠ ಉದ್ಯಮಿ ಪ್ರಶಸ್ತಿ ಪುರಸ್ಕೃತರು ಹಾಗೂ ಧಾರ್ಮಿಕ ಮುಖಂಡರಾದ ವೀರಣ್ಣ ಪವಾಡದ ಅವರನ್ನು ಕುರುಹಿನಶೆಟ್ಟಿ ಸಮಾಜದ ವತಿಯಿಂದ ಆತ್ಮೀಯವಾಗಿ ಸನ್ಮಾನಿಸಲಾಯಿತು.  

ಮುಳಗುಂದದ ಶ್ರೀ ನೀಲಕಂಠೇಶ್ವರ ದೇವಸ್ಥಾನದಲ್ಲಿ ಮುಳಗುಂದದವರ ವತಿಯದಿಂದ ನಡೆದ ಮಹಾರುದ್ರಾಭಿಷೇಕ ಹಾಗೂ ಶ್ರೀ 1008 ಶ್ರೀಮದ್ ಜಗದ್ಗುರು ಅ. ಪ. ಪ. ಶ್ರೀ ಶಂಕರ ಶಿವಾಚಾರ್ಯ ಮಹಾಸ್ವಾಮಿಗಳ ಪುಣ್ಯಾರಾಧನೆ ಕಾರ್ಯಕ್ರಮದ ಅಂಗವಾಗಿ ಈ ಸನ್ಮಾನ ಸಮಾರಂಭ ಆಯೋಜಿಸಲಾಗಿತ್ತು.  

ಮುಳಗುಂದದ ಗವಿಮಠದ ಶ್ರೀ ಬಾಲಲೀಲಾ ಮಹಾಂತ ಶಿವಯೋಗಿಗಳ ಸಭಾಭವನದಲ್ಲಿ ನಡೆದ ಸಮಾರಂಭದಲ್ಲಿ ವಿವಿಧ ಮಠಾಧೀಶರ ಸಮ್ಮುಖದಲ್ಲಿ ಕುರುಹಿನಶೆಟ್ಟಿ ಸಮಾಜದ ಗುರುಹಿರಿಯರು ಹಾಗೂ ಬಂಧುಗಳು ವೀರಣ್ಣ ಪವಾಡದ ಅವರನ್ನು ಗೌರವಿಸಿದರು.  

ಇದೇ ಸಂದರ್ಭದಲ್ಲಿ ಸಮಾಜದ ಎಸ್‌ಎಸ್‌ಎಲ್ಸಿ ಹಾಗೂ ಪಿಯುಸಿ ವಿದ್ಯಾರ್ಥಿಗಳಿಗೆ 2025-26ನೇ ಸಾಲಿನ ಪ್ರತಿಭಾ ಪುರಸ್ಕಾರ ಪ್ರದಾನ ಮಾಡಲಾಯಿತು. ಕಾರ್ಯಕ್ರಮದಲ್ಲಿ ಸಮಾಜದ ಮುಖಂಡರು, ಗುರುಹಿರಿಯರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.