ಭರದಿಂದ ಕಬ್ಬು ನುರಿಸುತ್ತಿರುವ ಪ್ಯಾರಿ ಸಮೂಹದ ಹಳಿಯಾಳ ಸಕ್ಕರೆ ಕಾಖರ್ಾನೆ

ವರದಿ: ನಾಗರಾಜ ಪ. ಶಹಾಪುರಕರ

ಹಳಿಯಾಳ,21: ರಾಜ್ಯಾದ್ಯಂತ ಕಬ್ಬಿನ ಫಸಲಿನ ದರ ನಿಗದಿ ಹಾಗೂ ಹಳೆ ಬಾಕಿ ಬಗ್ಗೆ ಸಾಕಷ್ಟು ವಿವಾದಗಳು ನಡೆಯುತ್ತಿರುವ ಸಂಗತಿಗಳು ಒಂದೆಡೆಯಾದರೆ ಈ ಭಾಗದ ಸಕ್ಕರೆ ಕಾಖರ್ಾನೆಯು ಕಬ್ಬು ನುರಿಸುವ ಕಾರ್ಯ ಆರಂಭಿಸಿದ್ದು ರೈತರ ಗದ್ದೆಗಳಲ್ಲಿ ಬೆಳೆದು ನಿಂತಿರುವ ಕಬ್ಬು ಕಟಾವು ಮಾಡಿ ಸಾಗಿಸುವ ಪ್ರಕ್ರಿಯೆ ಭರದಿಂದ ಸಾಗಿದೆ.

ಪ್ಯಾರಿ ಸಮೂಹದ ಸಕ್ಕರೆ ಕಾಖರ್ಾನೆಯು ಹಳಿಯಾಳ ತಾಲೂಕು ಮಾತ್ರವಲ್ಲದೇ ಪಕ್ಕದ ಕಲಘಟಗಿ, ಮುಂಡಗೋಡ, ಅಳ್ನಾವರ, ಬೀಡಿ ಮೊದಲಾದ ಭಾಗಗಳ ಕಬ್ಬು ಪಡೆಯುತ್ತಿದ್ದು ಪ್ರಸಕ್ತ ವರ್ಷ ಕಾಖರ್ಾನೆ ವ್ಯಾಪ್ತಿಯ ಒಟ್ಟು 42 ಸಾವಿರ ಎಕರೆ ಪ್ರದೇಶದಲ್ಲಿ ಬೆಳೆದಿರುವ ಕಬ್ಬು ನುರಿಸುವ ಗುರಿ ಹೊಂದಿದೆ. ಮಹಾರಾಷ್ಟ್ರದ ಭೀಡ ಭಾಗದಿಂದ ಹಾಗೂ ಬಳ್ಳಾರಿಯಿಂದ ಕಟಾವು ಮಾಡುವ ಕಾಮರ್ಿಕ ತಂಡಗಳು ತಮಗೆ ವಹಿಸಿರುವ ಜಮೀನಿನಲ್ಲಿ ಆದ್ಯತಾನುಸಾರವಾಗಿ ಕಬ್ಬು ಕಟಾವು ಮಾಡುತ್ತಿದ್ದು ಇಂತಹ 750 ತಂಡಗಳು ಕಾರ್ಯನಿರ್ವಹಿಸುತ್ತಿವೆ. ಸ್ಥಳೀಯ ಟ್ರ್ಯಾಕ್ಟರ್ ಹಾಗೂ ಲಾರಿಗಳು ಕಬ್ಬು ಸಾಗಿಸುವ ಕೆಲಸದಲ್ಲಿ ತೊಡಗಿವೆ. ಅಂದಾಜು 90 ಸಂಖ್ಯೆಯಲ್ಲಿರುವ ಹೊರಭಾಗದ ಚಕ್ಕಡಿ ಗಾಡಿಗಳಿಂದಲೂ ಸಹ ಕಾಖರ್ಾನೆ ಸಮೀಪವತರ್ಿಯ ಕಬ್ಬು ಸಾಗಾಣಿಕೆಯಾಗುತ್ತಿದೆ.

ಕಬ್ಬಿನ ಫಸಲಿನ ದರದ ಬಗ್ಗೆ ಇರುವ ಗೊಂದಲಗಳನ್ನು ನಿವಾರಿಸಲು ಅನುಕೂಲವಾಗುವಂತೆ ಕೇಂದ್ರ ಸಕರ್ಾರವು ಎಫ್ಆರ್ಪಿ (ಫೇರ್ ಆಂಡ್ ರೆಮ್ಯೂನಿಟಿ ಪ್ರೈಸ್) ಮಾನದಂಡ ನಿಗದಿಪಡಿಸಿದ್ದು ಈ ಆಧಾರದ ಮೇಲೆ ರೈತರು ಬೆಳೆಸಿ ನೀಡಿರುವ ಕಬ್ಬಿಗೆ ದರ ನಿಗದಿಯಾಗುತ್ತಿದೆ. ಈ ಎಫ್ಆರ್ಪಿ ಮಾನದಂಡದ ಮೇಲೆ ಪ್ರತಿ ಟನ್ ಕಬ್ಬಿಗೆ ಅಂದಾಜು 3094 ರೂ. ದೊರೆಯುತ್ತದೆ. ಆದರೆ ಈ ಮೊತ್ತವು ಕಟಾವು ಹಾಗೂ ಸಾಗಾಣಿಕೆ ಸೇರಿಸಿ ನೀಡುವ ಮೊತ್ತವಾಗಿದೆ. 3094 ರೂ. ಗಳಲ್ಲಿ ಕಟಾವು ಹಾಗೂ ಸಾಗಾಣಿಕೆಯ ಪ್ರತಿ ಟನ್ಗೆ ಸರಾಸರಿ ಮೊತ್ತ 599 ರೂ, ವಜಾಗೊಳಿಸಿದರೆ 2495 ರೂ. ಗಳಾಗುತ್ತದೆ. ಆದರೆ ಕಬ್ಬು ಉತ್ಪಾದನೆಗೆ ವರ್ಷಂಪ್ರತಿ ಹೆಚ್ಚು ಖಚರ್ು ತಗಲುತ್ತಿರುವ ಕಾರಣ ಹೆಚ್ಚಿನ ದರ ನೀಡಬೇಕೆಂಬುದು ಕಬ್ಬು ಬೆಳೆಗಾರರ ಸಂಘದ ಆಗ್ರಹವಾಗಿದೆ. ಪ್ರತಿ ಟನ್ ಕಬ್ಬಿಗೆ ಕನಿಷ್ಠ 3000 ರೂ. ಗಳಂತೆ ನಿಗದಿಪಡಿಸಬೇಕು. ಇಲ್ಲವೇ ಕನಿಷ್ಠ ಪಕ್ಷ ಎಫ್ಆರ್ಪಿ ದರದಲ್ಲಿ ಕಬ್ಬು ಕಟಾವು ಹಾಗೂ ಸಾಗಾಣಿಕೆಯ ಮೊತ್ತವನ್ನು ವಜಾಗೊಳಿಸದೇ ರೈತರ ಹೊಲದಲ್ಲಿ ಬೆಳೆದು ನಿಂತ ಕಬ್ಬಿಗೆ ಎಫ್ಆರ್ಪಿ ದರ ನೀಡಬೇಕು. ಕಟಾವು ಹಾಗೂ ಸಾಗಾಣಿಕೆಯ ವೆಚ್ಚವನ್ನು ಕಾಖರ್ಾನೆಯವರೇ ಭರಿಸಬೇಕು ಎಂದು ಕಬ್ಬು ಬೆಳೆಗಾರರ ಸಂಘದ ಹಳಿಯಾಳ ತಾಲೂಕಾಧ್ಯಕ್ಷ ಶಂಕರ ಕಾಜಗಾರ, ಪ್ರಧಾನ ಕಾರ್ಯದಶರ್ಿ ಅಶೋಕ ಮೇಟಿ ಪ್ರತಿಪಾದಿಸುತ್ತಾರೆ.

ಪ್ಯಾರಿ ಸಮೂಹದ ಹಳಿಯಾಳ ಸಕ್ಕರೆ ಕಾಖರ್ಾನೆಯು ರೈತರಿಗೆ ಕಬ್ಬು ಸಾಗಿಸಿದ 15 ದಿನಗಳಲ್ಲಿ ನಿಗದಿತ ಮೊತ್ತ ನೀಡುವ ತನ್ನ ಉತ್ತಮ ವ್ಯವಹಾರ ಪದ್ಧತಿಯನ್ನು ಅನುಸರಿಸುತ್ತಿದೆ. ಇದು ಇತರರಿಗೆ ಮಾದರಿಯಾಗಿದೆ. ಆದರೆ...

'ಪ್ರೋತ್ಸಾಹ ಧನ'ದ ವಿವಾದ:- 2016-17 ನೇ ಸಾಲಿನ ಕಬ್ಬು ನುರಿಸುವ ಹಂಗಾಮಿಗೆ ಅನ್ವಯಿಸುವಂತೆ ಪ್ರತಿ ಟನ್ಗೆ 305 ರೂ. ಗಳನ್ನು 2017-18 ನೇ ಸಾಲಿನ ಕಬ್ಬು ನುರಿಸುವ ಹಂಗಾಮಿನಲ್ಲಿ ನೀಡುವದಾಗಿ ಆಶ್ವಾಸನೆ ನೀಡಿದ್ದ 'ಪ್ರೋತ್ಸಾಹ ಧನ' ನೀಡದ ಕಾರಣ ವಿವಾದಕ್ಕೀಡಾಗಿದೆ. ಈ ಬಗ್ಗೆ ರೈತರು ಸಕ್ಕರೆ ಕಾಖರ್ಾನೆಯ ಎದುರು ಒಂದು ತಿಂಗಳ ಪರ್ಯಂತ ನಿರಂತರ ಧರಣಿಯನ್ನು ಸಹ ನಡೆಸಿದ್ದರೂ ಸಹ ಯಾವುದೇ ಪ್ರಯೋಜನವಾಗಲಿಲ್ಲ. ಕಳೆದ ವರ್ಷದ ಕಬ್ಬು ನುರಿಸುವ ಹಂಗಾಮಿನಲ್ಲಿ ಉತ್ಪಾದನೆಯಾದ ಸಕ್ಕರೆಗೆ ಯೋಗ್ಯ ಬೆಲೆ ದೊರೆಯದ ಹಿನ್ನೆಲೆಯಲ್ಲಿ ಹಾಗೂ ಸಧ್ಯದ ಕಾಖರ್ಾನೆಯು ಆಥರ್ಿಕವಾಗಿ ಸುಸ್ಥಿತಿಯಲ್ಲಿ ಇಲ್ಲದ ಕಾರಣ ಆಶ್ವಾಸನೆ ನೀಡಿದ ಆ 'ಪ್ರೋತ್ಸಾಹ ಧನ' ನೀಡಲು ಸಧ್ಯದಲ್ಲಿ ಸಾಧ್ಯತೆ ಇಲ್ಲ ಎಂದು ಕಾಖರ್ಾನೆಯು ಸ್ಪಷ್ಟವಾಗಿ ತಿಳಿಸಿದೆ.

ಹಳಿಯಾಳದಲ್ಲಿ ಸಕ್ಕರೆ ಕಾಖರ್ಾನೆ ಪ್ರಾರಂಭವಾದ ನಂತರ ಈ ಭಾಗದಲ್ಲಿ ಕಬ್ಬಿನ ಫಸಲಿನ ಕ್ಷೇತ್ರವು ವರ್ಷಂಪ್ರತಿ ವಿಸ್ತರಣೆಯಾಗುತ್ತಾ ಹೊರಟಿದೆ. ಈ ಕಾರಣ ಈ ಪ್ರದೇಶದಲ್ಲಿ ಆಥರ್ಿಕ ವಹಿವಾಟು ಹೆಚ್ಚಾಗುತ್ತಿದೆ. ಕಬ್ಬು ಬೆಳೆಗಾರರು, ಪ್ರತ್ಯಕ್ಷ ಹಾಗೂ ಪರೋಕ್ಷ ಅವಲಂಬಿತರು ಮೊದಲಾದವರ ಹಣಕಾಸಿನ ಸ್ಥಿತಿ ಉತ್ತಮಪಡುತ್ತಿದೆ. ಪ್ಯಾರಿ ಸಮೂಹದ ಸಕ್ಕರೆ ಕಾಖರ್ಾನೆಯು ಬೇರೆ ಕಾಖರ್ಾನೆಗಳಿಗೆ ಹೋಲಿಸಿದರೆ ಸ್ಪಧರ್ಾತ್ಮಕವಾಗಿ ನಿಗದಿತ ಸಮಯದಲ್ಲಿ ರೈತರಿಗೆ ಅವರ ಫಸಲಿನ ಬಾಬ್ತು ಪಾವತಿಸುತ್ತಿರುವುದು ಸಮಾಧಾನದ ಸಂಗತಿಯಾಗಿದೆ. ಆದರೆ ಇನ್ನೊಂದೆಡೆ ಕಬ್ಬಿನ ಫಸಲಿಗೆ ವರ್ಷಂಪ್ರತಿ ಹೆಚ್ಚಿನ ಖಚರ್ು ಬರುತ್ತಿದೆ. ಹೀಗಾಗಿ ಲಾಭಾಂಶವು ಸಹ ಕಡಿಮೆಯಾಗುತ್ತಿದೆ. ಈ ವಾಸ್ತವಿಕತೆಯನ್ನು ಅರಿತುಕೊಂಡು ಸಕ್ಕರೆ ಕಾಖರ್ಾನೆಯ ಆಧಾರಸ್ಥಂಭವಾದ ಕಬ್ಬು ಬೆಳೆಗಾರರಿಗೆ ಹೆಚ್ಚಿನ ದರ ನೀಡುವ ಅವಶ್ಯಕತೆ ಇದೆ. ಈ ನಿಟ್ಟಿನಲ್ಲಿ ಕೇಂದ್ರ ಹಾಗೂ ರಾಜ್ಯ ಸಕರ್ಾರಗಳು ಮತ್ತು ಸಕ್ಕರೆ ಕಾಖರ್ಾನೆಗಳು ಕಬ್ಬು ಬೆಳೆಗಾರರ ಹಿತರಕ್ಷಣೆಗಾಗಿ ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕಾಗಿದೆ