ಸರ್ಕಾರಿ ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ ಪಾಲಕರ ಸಭೆ

Parents meeting at Govt Karnataka Public School

ಬೆಳಗಾವಿ 26: ನಗರದ ರಾಮತೀರ್ಥ ನಗರದಲ್ಲಿರುವ ಪಿ.ಎಮ್‌. ಶ್ರೀ  ಸರ್ಕಾರಿ ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ ಶನಿವಾರದಂದು ಹಮ್ಮಿಕೊಂಡ ಪಾಲಕರ ಸಭೆ  ಜರುಗಿತು.  

ಈ ಸಭೆಯಲ್ಲಿ ಭಾಗವಹಿಸಿದ ಶಾಲೆಯ ಮುಖ್ಯ ಗುರುಗಳಾದ ಶ್ರೀಮತಿ ಎನ್‌. ಆರ್‌. ಮೆಳವಂಕಿ ಮಾತನಾಡಿ ಮಕ್ಕಳ ಕೈಯಲ್ಲಿ ಮೊಬೈಲ್ ಬದಲು ಪುಸ್ತಕ ಕೊಡಿ. ಜೊತೆಗೆ ಅಪರಿಚಿತರ ಜೊತೆ ದ್ವಿಚಕ್ರ ವಾಹನದಲ್ಲಿ ಸಂಚರಿಸುವ ಬಗ್ಗೆ ಮಕ್ಕಳಿಗೆ ತಿಳಿಹೇಳಿ. ಮಕ್ಕಳ ಸರಿ ತಪ್ಪುಗಳ ಬಗ್ಗೆ ಕಾಳಜಿವಹಿಸುವುದು ಪಾಲಕರ ಆದ್ಯ ಕರ್ತವ್ಯ ಎಂದರು.  

ಮಕ್ಕಳಿಗೆ ಎಬಿಸಿ ಕಾರ್ಡ್‌ ಕಡ್ಡಾಯವಾಗಿದೆ ಅದರ ಮಹತ್ವ ಮುಂದಿನ ಶೈಕ್ಷಣಿಕ ಕ್ಷೇತ್ರದಲ್ಲಿ ಅವಶ್ಯವಾಗಿದೆ ಎಂದು ಕಾರ್ಡ ಬಗ್ಗೆ ಮಾಹಿತಿ ನಿಡಿದರು. 

ಈ ಸಂದರ್ಭದಲ್ಲಿ ಮುಖ್ಯ ಗುರುಗಳು, ಸಿಬ್ಬಂದಿ ವರ್ಗ, ಎಸಡಿಎಂಸಿ ಅಧ್ಯಕ್ಷರು, ಉಪಾಧ್ಯಕ್ಷರು, ಎಲ್ಲ ಸದಸ್ಯರು ಹಾಗೂ ಪಾಲಕರು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಎಂ.ಎಸ್ ವಾಲಿ ಕಾರ್ಯಕ್ರಮ   ನಿರೂಪಿಸಿದರು.