ಬದುಕಿನ ಯಶಸ್ಸಿಗೆ ಮೊದಲ ಅಡಿಪಾಯವೇ ತಂದೆ-ತಾಯಿ
Parents are the first foundation for success in life
ಲೋಕದರ್ಶನ ವರದಿ
ಧಾರವಾಡ 20: ಬದುಕಿನ ಯಶಸ್ಸಿಗೆ ಮೊದಲ ಅಡಿಪಾಯವೇ ತಂದೆ-ತಾಯಿ. ಜೀವನದಲ್ಲಿ ತಂದೆ-ತಾಯಿ ಹಾಗೂ ಗುರುವಿನ ಆಶೀರ್ವಾದದೊಂದಿಗೆ ದೇವರ ಕೃಪೆ ಇದ್ದಾಗ ಮಾತ್ರ ನಮ್ಮ ಪ್ರತಿ ಕಾರ್ಯಗಳು ಯಶಸ್ವಿಯಾಗುತ್ತವೆ. ಜ್ಞಾನ ಎನ್ನುವುದು ಸರ್ವವ್ಯಾಪಿ, ಅದನ್ನು ಪಡೆದಷ್ಟು, ಬದುಕಿನಲ್ಲಿ ಯಶಸ್ಸು ದೊರಕುತ್ತದೆ. ಶಿಸ್ತು, ನಿರಂತರ ಅಭ್ಯಾಸ, ಪರಿಶ್ರಮ, ಪ್ರೋತ್ಸಾಹದೊಂದಿಗೆ ಆತ್ಮವಿಶ್ವಾಸವನ್ನು ಬೆಳಸಿಕೊಂಡು ವಿದ್ಯಾರ್ಥಿಗಳು ತಮ್ಮ ಜೀವನದ ಗುರಿಯನ್ನು ಸಾಧಿಸಬೇಕು ಎಂದು ಜನಪದ ಗಾಯಕಿ, ಖ್ಯಾತ ನಿರೂಪಕಿ ಶ್ರೀಮತಿ. ದಿವ್ಯಾ ಆಲೂರ ತಿಳಿಸಿದರು.
ನಗರದ ಜೆ.ಎಸ್.ಎಸ್. ಬನಶಂಕರಿ ಕಲಾ, ವಾಣಿಜ್ಯ ಮತ್ತು ಶಾಂತಿಕುಮಾರ ಗುಬ್ಬಿ ವಿಜ್ಞಾನ ಮಹಾವಿದ್ಯಾಲಯದ 2025-2026ನೇ ಶೈಕ್ಷಣಿಕ ಸಾಲಿನ ವಾರ್ಷಿಕ ಸ್ನೇಹ ಸಮ್ಮೇಳನದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿ, ಸಾಮಾಜಿಕ ಜಾಲತಾಣಗಳಿಂದ ಅಂತರ ಕಾಯ್ದುಕೊಂಡು ಜೀವನಕ್ಕೆ ಪೂರಕವಾದ ವಿಷಯಗಳ ಅಧ್ಯಯನ, ಸಂಶೋಧನೆ, ಪಠ್ಯ ಹಾಗೂ ಪಠ್ಯೇತರ ಚಟುವಟಿಕೆಗಳಲ್ಲಿ ಕ್ರಿಯಾಶೀಲರಾಗಿ ವ್ಯಕ್ತಿತ್ವ ನಿರ್ಮಾಣ ಮಾಡಿಕೊಳ್ಳಿ ಎಂದು ಸಲಹೆ ನೀಡಿದರು.
ಶ್ರದ್ಧೆ ಇದ್ದರೆ ಮಾತ್ರ ಕಾರ್ಯದಲ್ಲಿ ಕ್ಷಮತೆ ಇರಲು ಸಾಧ್ಯ, ಅಲ್ಲದೇ ಗುರು-ಶಿಷ್ಯರ ಸಂಬಂಧದ ಕುರಿತು ನೀತಿ ಕಥೆಗಳ ಉದಾಹರಣೆಗಳ ಮೂಲಕ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಭರವಸೆಯನ್ನು ತುಂಬಿದರು. ಗಂಡು ಹೆಣ್ಣು ವಿಭಿನ್ನವಾದ ಮುಖಗಳು, ಸಂಸ್ಕೃತಿ ಮತ್ತು ಸಂಸ್ಕಾರಗಳು ಓದಿನೊಟ್ಟಿಗೆ ಬೆಳೆಸಿಕೊಂಡಾಗ ಮಾತ್ರ ಸರ್ವತೋಮುಖ ಬೆಳವಣಿಗೆ ಸಾಧ್ಯವೆಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಜೆ.ಎಸ್.ಎಸ್. ಸಂಸ್ಥೆಯ ಕಾರ್ಯದರ್ಶಿಗಳಾದ ಡಾ. ಅಜಿತಪ್ರಸಾದ ಅವರು ಕಾರ್ಯಕ್ರಮವನ್ನು ಉದ್ಧೇಶಿಸಿ, ಕಾಲೇಜು ನಡೆದು ಬಂದ ದಾರಿ ಮತ್ತು ಹುಕ್ಕೇರಿಕರ ಮಾಸ್ತರ ಅವರಿಂದ ಜನತಾ ಶಿಕ್ಷಣ ಸಮಿತಿ 1944ರಲ್ಲಿ ಸ್ಥಾಪಿಸಲ್ಪಟ್ಟಿತು. ಕನ್ನಡದ ಕಣ್ವ, ಬಿ.ಎಂ. ಶ್ರೀಕಂಠಯ್ಯ ಅವರು ಪ್ರಾಚಾರ್ಯರಾಗಿ, ಕನ್ನಡ ಮತ್ತು ಇಂಗ್ಲೀಷ್ ಸಾಹಿತ್ಯಕ್ಕೆ ನೀಡಿದ ಭಾಷಾಂತರದ ಕೊಡುಗೆಗಳ ಬಗ್ಗೆ ತಿಳಿಸಿದರು. ಉತ್ತರ ಕರ್ನಾಟಕದ ಶ್ರೇಷ್ಠ ಶಿಕ್ಷಣ ಸಂಸ್ಥೆಯಾಗಿ, 25 ಅಂಗ ಸಂಸ್ಥೆಗಳಲ್ಲಿ 22000 ಕ್ಕೂ ಅಧಿಕ ವಿದ್ಯಾರ್ಥಿಗಳು ಅಧ್ಯಯನ ಮಾಡುತ್ತಿರುವುದು ಹಾಗೂ 210 ಬಾರಿ ಉದ್ಯೋಗ ಮೇಳಗಳನ್ನು ನಡೆಸಿರುವುದು ಹೆಮ್ಮೆಯ ಸಂಗತಿ ಎಂದರು.
ಕಾಲೇಜಿನ ಪ್ರಾಚಾರ್ಯರಾದ ಪ್ರೊ. ವೆಂಕಟೇಶ ಮುತಾಲಿಕ ಅವರು ಅತಿಥಿಗಳನ್ನು ಸ್ವಾಗತಿಸಿದರು. ಜನತಾ ಶಿಕ್ಷಣ ಸಮಿತಿಯ ಆಡಳಿತಾಧಿಕಾರಿಗಳಾದ ಶ್ರೀ ಅರಿಹಂತ ಪ್ರಸಾದ, ಜೆ.ಎಸ್.ಎಸ್. ಎಂ.ಸಿ.ಎ. ಕಾಲೇಜಿನ ನಿರ್ದೇಶಕರಾದ ಡಾ. ಸೂರಜ ಜೈನ, ಉಪಪ್ರಾಚಾರ್ಯರಾದ ಶ್ರೀಮತಿ ಆವಂತಿಕಾ ರೊಟ್ಟಿ ಹಾಗೂ ಡಾ. (ಶ್ರೀಮತಿ) ನಳಿನಿ ಕುಲಕರ್ಣಿ, ಕ್ರೀಡಾ ವಿಭಾಗದ ಮುಖ್ಯಸ್ಥರಾದ ಡಾ. ಜಿನ್ನಪ್ಪ ಕುಂದಗೋಳ, ಐ.ಕ್ಯೂ.ಎ.ಸಿ. ಸಂಯೋಜಕರಾದ ಡಾ. ಶೌಕತ ಅಲಿ ಮೇಗಲಮನಿ, ವಿದ್ಯಾರ್ಥಿ ಕಾರ್ಯದರ್ಶಿ ಕುಮಾರಿ. ಅರ್ಿತಾ ಪೊತದಾರ ವೇದಿಕೆಯ ಮೇಲೆ ಉಪಸ್ಥಿತರಿದ್ದರು.
ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಪ್ರಾಧ್ಯಾಪಕರಿಗೆ, ವಿಶ್ವವಿದ್ಯಾಲಯದಿಂದ ರಾ್ಯಂಕ್ ಪಡೆದ ವಿದ್ಯಾರ್ಥಿಗಳಿಗೆ, ಕ್ರೀಡಾಪಟುಗಳಿಗೆ, ಲಲಿತಕಲಾ ಸಂಘದ ಸಾಧಕರಿಗೆ ಮತ್ತು ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿ ಕಾಲೇಜಿಗೆ ಕೀರ್ತಿ ತಂದ ವಿದ್ಯಾರ್ಥಿಗಳಿಗೆ ಇದೇ ಸಂದರ್ಭದಲ್ಲಿ ಸನ್ಮಾನಿಸಲಾಯಿತು.
ಮಹಾವಿದ್ಯಾಲಯದ ಲಲಿತಕಲಾ ವಿಭಾಗದ ವಿದ್ಯಾರ್ಥಿಗಳು ಪ್ರಾರ್ಥಿಸಿದರು. ಕು. ಸೂರಜ್, ಕು. ರಕ್ಷಿತಾ ಪರಿಚಯಿಸಿದರು. ಕು. ಅರ್ಿತಾ ವಂದಿಸಿದರು. ಕು. ವರ್ಷಾ, ಕು. ದೀಪಾ ನಿರೂಪಿಸಿದರು. ಎಲ್ಲಾ ಬೋಧಕ ಮತ್ತು ಬೋಧಕೇತರ ಸಿಬ್ಬಂದಿಯವರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ನೀಲಣ್ಣವರ ಪರ ಮಹಾರಾಷ್ಟ್ರದ ಹೂಡಿಕೆದಾರನ ಬ್ಯಾಟಿಂಗ್: ಪೊಲೀಸರ ವಿರುದ್ದ ಆಕ್ರೋಶದ ಅಡಿಯೊ ವೈರಲ್
ಒಳಚರಂಡಿಗೆ ನುಗ್ಗುತ್ತಿದೆ ಮಳೆಯ ನೀರು : ಗಲ್ಲಿಯಲ್ಲಾ ಗಬ್ಬು ವಾಸನೆ, ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಜನರ ಹಿಡಿಶಾಪ
ಭಾರಿ ಮಳೆ, ಗಾಳಿಯಿಂದ ಹಾರಿಹೋದ ಸರ್ಕಾರಿ ಶಾಲೆಗಳ ಮೇಲ್ಚಾವಣಿ : ಮರ ಕಂಬಗಳು ಧರೆಗೆ
ಅಗಲಿದ ಅನಾಥನಿಗೆ ಅಗ್ನಿಸ್ಪರ್ಶ ಮಾಡಿ ಆಪತ್ಭಾಂದವನಾದ ವಿಜಯ ಮೋರೆ: ಅಂತ್ಯಕ್ರಿಯೆಗೆ ಮಾರ್ಕೆಟ್ ಪೊಲೀಸರ ಸಾಥ್
ದ್ವಿಚಕ್ರವಾಹನ ಕಳ್ಳರ ಬಂಧನ : 6.10 ಲಕ್ಷ ಮೌಲ್ಯದ 14 ವಾಹನಗಳ ವಶಕ್ಕೆ ಎಸ್ ಪಿ ರಾಮರಾಜನ್
ಸಾವಿರಾರು ಕೋಟಿ ವಂಚನೆ, ವರ್ಗಾವಣೆ ಆರೋಪ: ಶಿವಾನಂದ ನೀಲಣ್ಣವರ ಬಂಧನ 