ಕೊಪ್ಪಳ 25: ಮಕ್ಕಳು ದೇಶದ ಸಂಪತ್ತು ಅವರ ಆರೋಗ್ಯ ಕಾಪಾಡುವುದು ಇಲಾಖೆಗಳ ಹಾಗೂ ಪೋಷಕರ ಜವಾಬ್ದಾರಿಯಾಗಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ರಾಜಕುಮಾರ ಎಸ್ ಯರಗಲ್ ಅವರು ಹೇಳಿದರು.
ಕೊಪ್ಪಳ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಸಕರ್ಾರಿ ಮಹಿಳಾ ಪ್ರಥಮ ದಜರ್ೆ ಕಾಲೇಜು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ತಾಲ್ಲೂಕ ಆರೋಗ್ಯಾಧಿಕಾರಿಗಳ ಕಾಯರ್ಾಲಯ, ರೆಡ್ ಕ್ರಾಸ್ ಸಂಸ್ಥೆ ಇವರ ಸಂಯುಕ್ತ ಆಶ್ರಯದಲ್ಲಿ ನಗರದ ಮಹಿಳಾ ಪ್ರಥಮ ದಜರ್ೆ ಕಾಲೇಜಿನಲ್ಲಿ ಬುಧವಾರದಂದು (ಸೆ.25) ಆಯೋಜಿಸಲಾಗಿದ್ದ ರಾಷ್ಟ್ರೀಯ ಜಂತು ಹುಳು ನಿವಾರಣಾ ಕಾರ್ಯಕ್ರಮ ಹಾಗೂ ಹಿಮೋಗ್ಲೋಬಿನ್ ತಪಾಸಣೆ ಶಿಬಿರ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಅಲ್ಬೆಂಡಾಝೋಲ್ ಮಾತ್ರೆಯನ್ನು ತೆಗೆದುಕೊಳ್ಳುವುದರಿಂದ ಮಕ್ಕಳಲ್ಲಿ ಮೂರು ರೀತಿಯ ಜಂತು ಹುಳುಗಳು ನಾಶವಾಗುತ್ತವೆ. ಇದರಿಂದ ಮಕ್ಕಳಿಗೆ ವಿದ್ಯಾಭ್ಯಾಸ ಮಾಡಲು ಅನುಕೂಲವಾಗುತ್ತದೆ. ಪ್ರತಿಯೊಬ್ಬರು ಈ ಮಾತ್ರೆಯನ್ನು ತಪ್ಪದೇ ತೆಗೆದುಕೊಳ್ಳಬೇಕು. ಇದರಿಂದ ಯಾವುದೇ ಅಡ್ಡ ಪರಿಣಾಮ ಉಂಟಾಗುವುದಿಲ್ಲ. ಎಲ್ಲರೂ ರಕ್ತಹೀನತೆಯ ಬಗ್ಗೆ ತಿಳಿದುಕೊಂಡು ಅದರ ದುಷ್ಪರಿಣಾಮ ಕುರಿತು ಇತರರಿಗೂ ಜಾಗೃತಿ ಮೂಡಿಸಿ. ಜಂತು ರಹಿತ ಮಕ್ಕಳು ಆರೋಗ್ಯವಂತ ಮಕ್ಕಳು. ಆದ್ದರಿಂದ ಪ್ರತಿಯೊಂದು ಶಾಲೆಯ ವಿದ್ಯಾಥರ್ಿಗಳು ಜಂತು ನಿವಾರಕ ಮಾತ್ರೆಯನ್ನು ತೆಗೆದುಕೊಳ್ಳುವಂತೆ ತಿಳಿಸಿದರು.
ಜಿಲ್ಲಾ ಆರ್.ಸಿ.ಹೆಚ್ ಅಧಿಕಾರಿ ಡಾ. ಲಿಂಗರಾಜ ಟಿ ರವರು ಮಾತನಾಡಿ, ವರ್ಷದಲ್ಲಿ ಎರಡು ಬಾರಿ ಜಂತು ನಿವಾರಕ ಮಾತ್ರೆಯಾದ ''ಅಲ್ಬೆಂಡಾಝೋಲ್' ಮಾತ್ರೆಯನ್ನು ಜಿಲ್ಲೆಯಲ್ಲಿ 1 ರಿಂದ 19 ವರ್ಷದೊಳಗಿನ ಎಲ್ಲಾ ಮಕ್ಕಳಿಗೂ ಅಂಗನವಾಡಿ ಕೇಂದ್ರ, ಶಾಲೆ, ಪಿ.ಯು.ಸಿ ಕಾಲೇಜುಗಳಲ್ಲಿ ಈ ಮಾತ್ರೆಯನ್ನು ಉಚಿತವಾಗಿ ನೀಡಲಾಗುತ್ತದೆ. ಮಕ್ಕಳಲ್ಲಿ ಸಾಮಾನ್ಯವಾಗಿ ಕಂಡು ಬರುವ ರಕ್ತಹೀನತೆ, ಅಪೌಷ್ಠಿಕತೆ, ಹಸಿವು ಆಗದೇ ಇರುವುದು, ನಿಶ್ಯಕ್ತಿ, ಹೊಟ್ಟೆನೋವು, ವಾಂತಿ, ಅತಿಸಾರ, ತೂಕ ಕಡಿಮೆಯಾಗುವುದು ಇಂತಹ ಲಕ್ಷಣಗಳುಳ್ಳ ಮಕ್ಕಳು ಜಂತುಬಾಧೆಯಿಂದ ಬಳಲುತ್ತಿರುತ್ತಾರೆ. ರಕ್ತ ಹೀನತೆ ತಡೆಗಟ್ಟಲು ಈ ಮಾತ್ರೆಯನ್ನು ನೀಡಲಾಗುತ್ತದೆ. ಇದರ ಜೊತೆಗೆ ಸೆಪ್ಟಂಬರ್ ತಿಂಗಳನ್ನು ''ಪೋಷಣಾ ಅಭಿಯಾನ ಮಾಸಾಚಾರಣೆ'' ಎಂದು ಘೋಷಿಸಲಾಗಿದ್ದು, ಈ ಕಾರ್ಯಕ್ರಮವನ್ನು ಈಗಾಗಲೇ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಹಕಾರದಿಂದ ನೇರವೇರಿಸಲಾಗುತ್ತಿದೆ. ಪೌಷ್ಠಿಕ ಆಹಾರದಿಂದ ಬಹಳಷ್ಟು ಖಾಯಿಲೆಗಳನ್ನು ಗಭರ್ಿಣಿಯರಲ್ಲಿ ಮತ್ತು ಹದಿ-ಹರೆಯದವರಲ್ಲಿ, ಮಕ್ಕಳಲ್ಲಿ ತಡೆಗಟ್ಟಬಹುದು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಕರ್ಾರಿ ಮಹಿಳಾ ಪ್ರಥಮ ದಜರ್ೆ ಕಾಲೇಜು ಪ್ರಾಂಶುಪಾಲ ಡಾ. ಗಣಪತಿ ಕೆ ಲಮಾಣಿ ರವರು ವಹಿಸಿದ್ದರು. ಜಿಲ್ಲಾ ಕುಷ್ಠರೋಗ ನಿಮರ್ೂಲನಾಧಿಕಾರಿ ಡಾ. ಎಸ್.ಕೆ ದೇಸಾಯಿ, ಜಿಲ್ಲಾ ಉಪ ಆರೋಗ್ಯ ಶಿಕ್ಷಣಾಧಿಕಾರಿ ಶಿವಾನಂದ ಪೂಜಾರ, ಜಿಲ್ಲಾ ಕುಟುಂಬ ಕಲ್ಯಾಣ ಅಧಿಕಾರಿ ಡಾ. ಜಂಬಯ್ಯ, ಜಿಲ್ಲಾ ಕ್ಷಯರೋಗ ನಿಯಂತ್ರಣಾಧಿಕಾರಿಗಳಾದ ಡಾ. ಮಹೇಶ ಎಂ.ಜಿ. ಹಾಗೂ ಡಾ. ಪ್ರಕಾಶ, ಕಾಲೇಜಿನ ಉಪನ್ಯಾಸಕ ಪ್ರದೀಪ್ ಕುಮಾರ, ಡಾ. ಹುಲಿಗೆಮ್ಮ, ಐಸಿಡಿಎಸ್ ಮೇಲ್ವಿಚಾರಕಿ ಬಸಮ್ಮ, ಆರೋಗ್ಯ ಇಲಾಖೆಯ ವೈದ್ಯಾಧಿಕಾರಿಗಳು, ಹಿರಿಯ ಹಾಗೂ ಕಿರಿಯ ಆರೋಗ್ಯ ಸಹಾಯಕರು, ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿಗಳು, ರೆಡ್ಕ್ರಾಸ್ ಸಂಸ್ಥೆಯ ಮೇಲ್ವಿಚಾರಕರು, ಆಶಾ ಮೇಲ್ವಿಚಾರಕರು, ಇಲಾಖೆಯ ಸಿಬ್ಬಂದಿಗಳು ಮತ್ತು ಕಾಲೇಜಿನ ವಿದ್ಯಾಥರ್ಿನಿಯರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.