ಲೋಕದರ್ಶನ ವರದಿ
ಕೊಪ್ಪಳ 09: ನಗರದ ಬಹದ್ದೂರಬಂಡಿ ರಸ್ತೆ ನಿಮರ್ಿತಿ ಕೇಂದ್ರದ ಹತ್ತಿರ ಹಜರತ್ ಬೋರೆಶಾವಲಿ ದಗರ್ಾದ ಬಳಿ ಇರುವ ಮಿಲ್ಲತ್ ಶಿಕ್ಷಣ ಹಾಗೂ ಕಲ್ಯಾಣ ಸಂಸ್ಥೆಯ ಮಿಲ್ಲತ್ ಪಬ್ಲಿಕ್ ಶಾಲೆಯ ಆವರಣದಲ್ಲಿ ಶನಿವಾರ ನಡೆದ ಪಾಲಕರ ಕ್ರೀಡಾಕೂಟಕ್ಕೆ ಪಾಲಕರ ಪ್ರತಿನಿಧಿ ಮೌಲಾಹುಸೇನ್ ಮಂಗಳೂರು ಅವರು ಚಾಲನೆ ನೀಡಿದರು.
ಬಳಿಕ ಮಾತನಾಡಿ ಪಾಲಕರ ಕ್ರೀಡಾಕೂಟ ಏರ್ಪಡಿಸಿದ ಮಿಲ್ಲತ್ ಶಾಲೆಯ ಆಡಳಿತ ಮಂಡಳಿಯ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು. ನಂತರ ಅವರು ಸಹ ಕ್ರೀಡಾಕೂಟದಲ್ಲಿ ಕ್ರೀಡಾಪಟುಗಳಾಗಿ ಭಾಗವಹಿಸಿ ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದರು. ಅಧ್ಯಕ್ಷತೆಯನ್ನು ಸಂಸ್ಥೆಯ ಮುಖ್ಯ ಸಲಹೆಗಾರ ಎಂ. ಸಾದಿಕ್ ಅಲಿ ವಹಿಸಿದ್ದರು. ನಿರ್ದೇಶಕರಾದ ಅಬ್ದುಲ್ ಅಜೀಜ್ ಮಾನ್ವಿಕರ್, ಮುಖ್ಯ ಶಿಕ್ಷಕ ಮೊಹ್ಮದ್ ಅಜೀಜ್ ರೇವಡಿ, ಹಿರಿಯ ಶಿಕ್ಷಕಿ ಶಂಶಾದ್ ಬೇಗಂ ಖಾಜಿ, ಪಾಲಕರ ಮಹಿಳಾ ಪ್ರತಿನಿಧಿ ಫರ್ಹತ್ ಖಾನಂ ಅಲ್ಲದೇ ಪಾಲಕರ ಪ್ರತಿನಿಧಿಗಳು, ಶಿಕ್ಷಕರು ಪಾಲ್ಗೊಂಡಿದ್ದರು.