ಸರಕಾರಿ ಶಾಲಾ ಆವರಣದಲ್ಲಿ ಪೋಷಕ, ಶಿಕ್ಷಕರ ಮಹಾಸಭೆ
Parent-teacher meeting on government school premises
ಯರಗಟ್ಟಿ, 14 : ಪಟ್ಟಣದ ಸರಕಾರಿ ಮಾದರಿ ಕನ್ನಡ ಪ್ರಾಥಮಿಕ ಶಾಲಾ ಆವರಣದಲ್ಲಿ ಪೋಷಕ ಶಿಕ್ಷಕರ ಮಹಾಸಭೆಯನ್ನು ತಹಶೀಲ್ದಾರ ಎಮ್ ವ್ಹಿ ಗುಂಡಪ್ಪಗೋಳ ಅವರು ಸಸಿಗೆ ನೀರು ಹಾಕುವ ಮೂಲಕ ಉದ್ಘಾಟಿಸಿದರು.
ನಂತರ ಮಾಜಿ ಪ್ರಧಾನಿ ಪಂಡಿತ ಜವಾಹರಲಾಲ್ ನೆಹರು ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಪುಷ್ಪಾರ್ಚನೆ ಮಾಡುವ ಮೂಲಕ ಮಕ್ಕಳ ದಿನಾಚರಣೆ ಆಚರಿಸಲಾಯಿತು. ತಹಶೀಲ್ದಾರ ಎಮ್ ವ್ಹಿ ಗುಂಡಪ್ಪಗೋಳ ಮಾತನಾಡಿ ಸರಕಾರ ಮಕ್ಕಳಿಗಾಗಿ ಅನೇಕ ಸೌಲಭ್ಯಗಳನ್ನು ಒದಗಿಸಿದೆಮಕ್ಕಳಿಗೆ ಉಚಿತ ಪಠ್ಯ ಪುಸ್ತಕ, ಸಮವಸ್ತ್ರ, ಶೂ ಭಾಗ್ಯ, ಅಕ್ಷರ ದಾಸೋಹ ಸೇರಿದಂತೆ ಅನೇಕ ಸೌಲಭ್ಯವನ್ನು ಸರಕಾರಿ ಶಾಲೆಗಳಲ್ಲಿ ಕಲ್ಪಿಸಿದೆ ಎಂದು ಹೇಳಿದರು.
ಸಭೆಯನ್ನು ಉದ್ದೇಶಿಸಿ ಮಾತನಾಡಿದ ಎಂ. ಎಂ. ಚಿಜಲದ ಅವರು ವಿದ್ಯಾರ್ಥಿಗಳ ಪೋಷಕರನ್ನು ಶಿಕ್ಷಣ ಪ್ರಕ್ರಿಯೆಯಲ್ಲಿ ತೊಡಗಿಸುವುದು, ಸರ್ಕಾರಿ ಶಾಲೆ, ಕಾಲೇಜುಗಳ ಬಗ್ಗೆ ಭರವಸೆ ಮೂಡಿಸುವುದು, ಸರ್ಕಾರಿ ಕಾರ್ಯಕ್ರಮಗಳ ಬಗ್ಗೆ ಮಾಹಿತಿ ಹಂಚಿಕೆ, ಪೋಷಕರೊಂದಿಗೆ ಮಕ್ಕಳ ಪ್ರಗತಿಯ ಬಗ್ಗೆ ಚರ್ಚೆ ಮಾಡಿ ಮಾಹಿತಿ ಪಡೆದರು.ಈ ಕಾರ್ಯಕ್ರಮದಲ್ಲಿ ಒಳಗೊಂಡಿರುವ ವಿಷಯಗಳು. ಮಕ್ಕಳ ಪ್ರಗತಿ, ಹಾಜರಾತಿ, ಪರೀಕ್ಷೆ ಸಿದ್ಧತೆ, ವಿವಿಧ ಕಾಯ್ದೆಗಳ ಬಗ್ಗೆ ಮಾಹಿತಿಯನ್ನು ಪೋಷಕರ ಜೊತೆ ಹಂಚಿಕೊಳ್ಳಲಾಯಿತು.ಸಾಮಾಜಿಕ ಮತ್ತು ಆರ್ಥಿಕ ಸಮೀಕ್ಷೆಯ ವೇಳೆ ಆಗಿರುವ ರಜಾ ದಿನಗಳನ್ನು ಸರಿದೂಗಿಸಿಕೊಳ್ಳಲು ಪ್ರತಿದಿನ ಬೆಳಿಗ್ಗೆ ಹಾಗೂ ಸಂಜೆ ಕಲಿಕಾ ಅವಧಿ ವಿಸ್ತರಣೆ ಮಾಡುವಂತೆ ಸರ್ಕಾರದಿಂದ ಆದೇಶ ಬಂದಿದೆ. ಸ್ಥಳೀಯವಾಗಿ ಮಕ್ಕಳ ಸುರಕ್ಷತೆಗೆ ಆದ್ಯತೆ ನೀಡಿ ಬೆಳಿಗ್ಗೆ ಅಥವಾ ಸಂಜೆ ಒಂದು ತಾಸು ಹೆಚ್ಚುವರಿ ತರಗತಿ ನಡೆಸಲು ಸರಕಾರ ಸೂಚಿಸಿದೆ. ಹೀಗಾಗಿ ಡಿಸೆಂಬರ್ ಒಳಗಾಗಿ ವಿದ್ಯಾರ್ಥಿಗಳ ಪಠ್ಯಕ್ರಮ ಪೂರ್ಣಗೊಳಿಸಿ ಪುನರ್ ಮನನ ನಡೆಸಲಾಗುತ್ತದೆ ಎಂದು ಎಂ. ಎಂ. ಚಿಜಲದ ಹೇಳಿದರು.
ಪ. ಪಂ. ಮುಖ್ಯಾಧಿಕಾರಿ ಮಹೇಶ ಭಜಂತ್ರಿ, ಪ. ಪಂ. ಸದಸ್ಯ ಸಲಿಂಬೇಗ ಜಮಾದಾರ, ಡಾ. ವಿಶ್ವನಾಥ ತಾವಂಶಿ, ಶಿಕ್ಷಣ ಸಂಯೋಜಕರಾದ ಎಂ. ಬಿ. ಕಡಕೋಳ, ಅರ್ಜನ ಕಾಮಣ್ಣವರ, ಎಸ್ ಡಿ ಎಮ್ ಸದಸ್ಯರಾದ ಪ್ರಮೋದ ಬಡಿಗೇರ, ಗದಿಗೆಪ್ಪ ಕಡಕೋಳ, ಶಾಲಾ ಮುಖ್ಯೋಪಾಧ್ಯಾಯ ಎ. ಎ. ಮಕ್ತುಮನ್ನವರ, ಶಿಕ್ಷಕರಾದ ಎಸ್. ಬಿ. ಮಿಕಲಿ, ಎಂ. ಎಂ. ಚಿಜಲದ, ಬಾಲಕಿಯರ ವಸತಿ ನಿಲಯ ಪಾಲಕರಾದ ಆಶಾ ಪರೀಟ, ಸಮೂಹ ಸಂಪನ್ಮೂಲ ವ್ಯಕ್ತಿಗಳಾದ ವಸಂತ ಬಡಿಗೇರ ಪಾಲಕ ಪೋಷಕರಾದ ರಾಜೇಶ್ವರಿ ಕರಿಗೋಣ್ಣವರ, ರೇಣುಕಾ ಯಂಕಣಿ ಕಾವೇರಿ ಬಡಿಗೇರ, ಹೇಮಾ ಉಗ್ರಾಣ ಸವಿತಾ ಮಾಸ್ತಿ, ಸೈಯದಸಾಬ ಮುಖೇರಿ, ಬಸವ್ವ ಅಡಿಕಾರ, ತುಕಾರಾಮರ ದಂಡಿನ, ಬಸವರಾಜ ಮಾನೋಜಿ, ಶಂಕರ ಕಂಬಾರ, ಮುಂತಾದವರು ಹಾಜರಿದ್ದು ಮಕ್ಕಳ ಪ್ರಗತಿಯ ಕುರಿತು ಸಮಾಲೋಚನೆ ನಡೆಸಿದರು ಕಾರ್ಯಕ್ರಮದ ನಂತರ ರುಚಿರುಚಿಯಾದ ಭೋಜನಕೂಟವನ್ನು ಏರಿ್ಡಸಲಾಗಿತ್ತು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 