ಆಂಗ್ಲ ಮಾಧ್ಯಮ ಶಾಲೆಯಲ್ಲಿ ಪಾಲಕರ ಅಭಿಶಿಕ್ಷಣ ಕಾರ್ಯಕ್ರಮ

ಆಂಗ್ಲ ಮಾಧ್ಯಮ ಶಾಲೆಯಲ್ಲಿ ಪಾಲಕರ ಅಭಿಶಿಕ್ಷಣ ಕಾರ್ಯಕ್ರಮ  Parent education program at an English medium school

ಧಾರವಾಡ 28:  ಜನತಾ ಶಿಕ್ಷಣ ಸಮಿತಿಯ ಮಂಜುನಾಥೇಶ್ವರ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಬೆಂಗಳೊರಿನ ರಾಷ್ಟ್ರೋತ್ಹಾನ ಪರಿಷತ್ತಿನ ಸಹಯೋಗದೊಂದಿಗೆ ಪಾಲಕರ ಅಭಿಶಿಕ್ಷಣ ಕಾರ್ಯಕ್ರಮವನ್ನು  ದಿನಾಂಕ 28.06.2025 ರಂದು  ಸನ್ನಿಧಿ ಕಲಾಕ್ಷೇತ್ರದಲ್ಲಿ ಆಯೋಜಿಸಲಾಗಿತ್ತು.

ಈ ಸಮಾರಂಭಕ್ಕೆ ಧಾರವಾಡದ  ರಾಷ್ಟ್ರೋತ್ಹಾನ ವಿದ್ಯಾ ಕೇಂದ್ರದ ಸಂಸ್ಕೃತ ಅಧ್ಯಾಪಕರಾದ ವಿದ್ವಾನ್ ವಿನಾಯಕ ಭಟ್ಟ ಶೇಡಿಮನೆ ಅವರು ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು. ಐ.ಟಿ .ಐ ಕಾಲೇಜಿನ ಪ್ರಾಚಾರ್ಯರಾದ ಮಹಾವೀರ ಉಪಾಧ್ಯೆ ಅವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು. ಶಾಲೆಯ ಪ್ರಾಚಾರ್ಯರಾದ ಶ್ರೀಮತಿ ರೇಣು. ವಿ.  ಪಾಟೀಲ್,   ಶಾಲೆಯ ಸಹ ಸಂಯೋಜಕರಾದ ನಿರ್ಮಲಾ ಪಾಟೀಲ್, ಕಮಲಾಕ್ಷಿ ಸಣ್ಣಕ್ಕಿ ಹಾಗೂ ಪ್ರಿಯಾಂಕಾ ದೇಸಾಯಿ ಅವರು ಉಪಸ್ಥಿತರಿದ್ದರು.  

ಅತಿಥಿಗಳು ತಮ್ಮ ಪ್ರಾಸ್ತಾವಿಕ ಭಾಷಣದಲ್ಲಿ ಮಕ್ಕಳ ಶೈಕ್ಷಣಿಕ ಪ್ರಗತಿಯಲ್ಲಿ ಶಿಕ್ಷಕರ ಪಾತ್ರ ಎಷ್ಟು ಮುಖ್ಯವೋ ಹಾಗೆ ಪಾಲಕರ ಪಾತ್ರವೂ ಅಷ್ಟೇ ಮುಖ್ಯ ಹಾಗಾಗಿ ‘ಮನೆಯೇ ಮೊದಲ ಪಾಠಶಾಲೆ’ ಎಂದು ಹೇಳುತ್ತೇವೆ. ಆದ್ದರಿಂದ ಮನೆಯಲ್ಲಿ ಪಾಲಕರು ಮಕ್ಕಳಿಗಾಗಿ ಆರೋಗ್ಯಕರ ವಾತಾವರಣವನ್ನು ನಿರ್ಮಾಣ ಮಾಡಬೇಕು. ತಂದೆ ತಾಯಂದಿರು ಮಕ್ಕಳ ಮುಂದೆ ಧನಾತ್ಮಕ ವಿಚಾರಗಳನ್ನು ಮಾತ್ರ ಮಾತನಾಡಬೇಕು ಎಂದು ಹೇಳಿದರು. ಮಕ್ಕಳ ಸಮಗ್ರ ವಿಕಾಸಕ್ಕಾಗಿ ನಾವು ನೀವುಗಳು ಏನು ಮಾಡಬೇಕು? ಏನು ಮಾಡಬಾರದು ಅನ್ನುವುದಕ್ಕೆ ಹಲವಾರು ಅಂಶಗಳನ್ನು ತಿಳಿಸಿಕೊಟ್ಟರು. ಮಕ್ಕಳ ವ್ಯಕ್ತಿತ್ವ ನಿರ್ಮಾಣದ ಸಂಸ್ಕಾರ ಕೇಂದ್ರ ಕುಟುಂಬ ಅನ್ನುವುದನ್ನು ಹಾಗೂ ಅದರ ಮಹತ್ವವನ್ನು ಅತ್ಯಂತ ಅರ್ಥಗರ್ಭಿತವಾಗಿ ತಿಳಿಸಿಕೊಟ್ಟರು.  ಮಕ್ಕಳ ಜೊತೆ ಹೆಚ್ಚು ಹೆಚ್ಚು ಸಮಯವನ್ನು ಕಳೆದು ಅವರನ್ನು ಸ್ನೇಹಿತರಂತೆ ಕಾಣಬೇಕು ಎಂದು ಹೇಳಿದರು ಹಾಗೆಯೇ ಮುಖ್ಯವಾಗಿ ಮಕ್ಕಳ ಮುಂದೆ ಪಾಲಕರು ಹೆಚ್ಚು ಹೊತ್ತು ಮೊಬೈಲ್ ಬಳಸಬಾರದು ಮಕ್ಕಳಿಗೆ ಮೊಬೈಲನ್ನು ನೀಡಲೇಬಾರದು. ಮಕ್ಕಳಿಗೆ ಮನೆಯಲ್ಲಿ ದೈಹಿಕವಾಗಿ ಶ್ರಮವಾಗುವಂತಹ ಕೆಲಸಗಳನ್ನು ನೀಡಬೇಕು ಎಂದು ತಿಳಿಸಿಕೊಟ್ಟರು.ಹೀಗೆ ಹತ್ತು  ಹಲವಾರು ವಿಷಯಗಳನ್ನು ತಿಳಿಸಿಕೊಟ್ಟು ವಿದ್ಯಾರ್ಥಿಗಳು ಪ್ರಗತಿಯ ಪಥದಲ್ಲಿ ಸಾಗುವಂತೆ ಮಾಡಲು ಪಾಲಕರಿಗೆ ಮಾರ್ಗದರ್ಶನ ನೀಡಿದರು.