ಪಾಂಡುರಂಗ ವಿಠ್ಠಲನ ದಿಂಡಿ ಉತ್ಸವ

ಪಾಂಡುರಂಗ ವಿಠ್ಠಲನ ದಿಂಡಿ ಉತ್ಸವ  Panduranga Vitthala's Dindi Festival

ಲೋಕದರ್ಶನ ವರದಿ 

ಉಗರಗೋಳ 05: ಶ್ರದ್ಧೆಹಿಭಕ್ತಿಯಿಂದ ಪ್ರಾರ್ಥಿಸಿ, ಪೂಜೆ ಸಲ್ಲಿಸಿದರೆ ಪಂಢರಪುರದ ವಿಠ್ಠಲ ಭಕ್ತರ ಕೈಬಿಡುವುದಿಲ್ಲ ಎಂದು ಶಾಸಕ ವಿಶ್ವಾಸ ವೈದ್ಯ ಹೇಳಿದರು. ಸವದತ್ತಿ ತಾಲೂಕಿನ ಚುಳಕಿ ಗ್ರಾಮದಲ್ಲಿ ಮಂಗಳವಾರ ಸಂಜೆ ಹಮ್ಮಿಕೊಂಡಿದ್ದ ಪಾಂಡುರಂಗಹಿವಿಠ್ಠಲನ ದಿಂಡಿ ಉತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. 

ಆಷಾಢ ಏಕಾದಶಿ ದಿನ ಮಹಾರಾಷ್ಟ್ರದ ಪಂಢರಪುರದಡಲ್ಲಿ ನಡೆಯುವ ಜಾತ್ರೆಯಲ್ಲಿ ಲಕ್ಷಲಕ್ಷ ಭಕ್ತರು ಪಾಲ್ಗೊಳ್ಳುತ್ತಾರೆ. 250ರಿಂದ 300 ಕಿ.ಮೀ ದೂರದಿಂದ ಪಾದಯಾತ್ರೆ ಮಾಡುತ್ತ ಅಲ್ಲಿಗೆ ಬಂದು ಸೇರುತ್ತಾರೆ. ಪಂಢರಪುರದ ವಿಠ್ಠಲನ ಬಗ್ಗೆ ಎಷ್ಟೇ ಗುಣಗಾನ ಮಾಡಿದರೂ ಕಡಿಮೆ ಎಂದು ಬಣ್ಣಿಸಿದರು. 

ನಾನೂ ಸಹ ಪಂಢರಪುರ ವಿಠ್ಠಲನ ಪರಮಭಕ್ತ. ಜಾತಿ ಭೇದವಿಲ್ಲದೆ ಸರ್ವಧರ್ಮೀಯರು ದರ್ಶನ ಪಡೆಯುವಂಥ ಭಾವೈಕ್ಯದ ಮತ್ತು ಭಕ್ತಿಯ ತಾಣ ಅದಾಗಿದೆ ಎಂದರು. ಚುಳಕಿಗೆ ಬೇಕಿರುವ ಮೂಲಸೌಕರ್ಯ ಕಲ್ಪಿಸುತ್ತಲೇ ಬಂದಿದ್ದೇನೆ. ಮುಂದಿನ ದಿನಗಳಲ್ಲೂ ಗ್ರಾಮಸ್ಥರ ಬೇಡಿಕೆ ಈಡೇರಿಸುವೆ ಎಂದು ಭರವಸೆ ಕೊಟ್ಟರು. 

ಸುರೇಶ ಬಡಗಿಗೌಡ್ರ ಮಾತನಾಡಿ ಚುಳಕಿ ಗ್ರಾಮದಲ್ಲಿ ಸಂತರು ಅಧಿಕ ಸಂಖ್ಯೆಯಲ್ಲಿದ್ದಾರೆ. ಊರಿನ ವಿಠ್ಠಲನ ದೇವಸ್ಥಾನದಲ್ಲಿ ನಿರಂತರವಾಗಿ ಧಾರ್ಮಿಕ ಕಾರ್ಯ ಕೈಗೊಳ್ಳುತ್ತ ಬಂದಿದ್ದಾರೆ. ವಿಠ್ಠಲನ ಸ್ಮರಣೆಯಿಂದ ಬದುಕಿನಲ್ಲಿ ಸಂತೃಪ್ತಿ ಸಿಕ್ಕಿದೆ ಎಂದರು 

ರಮೇಶ ಲಾಂಡೆ, ಶ್ರೀಧರ ಲಾಂಡೆ, ವೆಂಕಪ್ಪ ಚಿಕ್ಕುಂಬಿ, ಲಕ್ಷ್ಮಣ ಹನಶಿ, ಹನಮರಡ್ಡಿ ಭೀಮರಡ್ಡಿ, ಕಲ್ಲಪ್ಪ ಕಲಕುಟ್ರಿ, ಎಸ್ ಜಿ ಸೋಪ್ಪಡ್ಲ, ಫಕೀರ​‍್ಪ ತಳವಾರ, ಹುಚ್ಚಪ್ಪ ಹರಳಕಟ್ಟಿ, ಪರಸಪ್ಪ ಮಾಗುಂಡ, ಕಲ್ಮೇಶ ಮಾಳನ್ನವರ ಮತ್ತು ಸಂತ, ಮಹಾಂತರು ಹಾಗೂ ಗ್ರಾಮಸ್ಥರು ಇದ್ದರು. ಎಲ್ ಬಿ ಹರ್ಲಾಪೂರ ಸ್ವಾಗತಿಸಿದರು, ಶಿವನಗೌಡ ಮುದಿಗೌಡ್ರ ನಿರೂಪಿಸಿ, ಎಲ್ ಪಿ ಬಾಲರಡ್ಡಿ ವಂದಿಸಿದರು.