ಕುರಿಗಾರರಿಗೆ ಸರಕಾರ ಸೌಲಭ್ಯಗಳನ್ನು ಒದಗಿಸಲು ಪಂಡಿತ್ ರಾವ್ ಚಿದ್ರಿ ಆಗ್ರಹ

ಕುರಿಗಾರರಿಗೆ ಸರಕಾರ ಸೌಲಭ್ಯಗಳನ್ನು ಒದಗಿಸಲು ಪಂಡಿತ್ ರಾವ್ ಚಿದ್ರಿ ಆಗ್ರಹ Pandit Rao Chidri demands that the government provide facilities to sheep farmers

ಕೊಪ್ಪಳ  20: ಕುರಿಗಾರರಿಗೆ ಸರಕಾರ ಸೌಲಭ್ಯಗಳನ್ನು ಒದಗಿಸಬೇಕೆಂದು ರಾಜ್ಯ ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷ ಪಂಡಿತ್ ರಾವ್ ಚಿದ್ರಿ ಆಗ್ರಹಿಸಿದರು.

ಅವರು ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿ  ಉದ್ದೇಶಿಸಿ ಮಾತನಾಡಿ ಕುರಿಗಾರರು ಬಹಳಷ್ಟು ಸಂಕಷ್ಟದಲ್ಲಿದ್ದು, ಅವರಿಗೆ ಸರಿಯಾದ ರಕ್ಷಣೆ ಇಲ್ಲ, ಸರಕಾರದ ಸೌಲಭ್ಯಗಳು ನೀಡಿ ಅವರ ಅಭಿವೃದ್ಧಿಗೆ ಶ್ರಮಿಸಬೇಕು ಎಂದ ಅವರು ಅವರಿಗೆ ಸರಿಯಾದ ಜಾಗೃತಿ ಮೂಡಿಸಲು ಆಗಾಗೆ ಕಾರ್ಯಾಗಾರಗಳನ್ನು, ಸರಿಯಾದ ತರಬೇತಿಯನ್ನು ನೀಡಬೇಕು, ಸೊಸೈಟಿ ಮೂಲಕ ಅವರಿಗೆ ಸಾಲ ಸೌಲಭ್ಯಗಳನ್ನು ನೀಡಬೇಕು, ಕುರಿ ನಿಗಮದ ಮೂಲಕ ಅಲ್ಲದೆ ಬೇರೆ ಬೇರೆ ರೀತಿಯ ಸಾಲ ಸೌಲಭ್ಯಗಳು ಸಿಗುತ್ತಿದ್ದು ಅದನ್ನು ಸದುಪಯೋಗ ಪಡಿಸಿಕೊಂಡು ಕುರಿಗಾರರು ತಮ್ಮ ಬದುಕನ್ನು ಹಸನ ಮಾಡಿಕೊಳ್ಳಬೇಕು. ಎಂದರು.ಕುರಿಗಾರರ ರಕ್ಷಣೆಗಾಗಿ ಪೋಲಿಸ್ ಇಲಾಖೆ ಬಂದೂಕಿಗಾಗಿ ಲೈಸೆನ್ಸ್‌ ನೀಡುತ್ತಿದ್ದು, ಈಗಾಗಲೇ ಬೇರೆ ಬೇರೆ ಜಿಲ್ಲೆಗಳಲ್ಲಿ ಕುರಿಗಾರರು ಲೈಸೆನ್ಸ್‌ ಗಾಗಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಪಟ್ಟಿ ನೀಡಿದ್ದು, ಕೊಪ್ಪಳ ಜಿಲ್ಲೆಯಲ್ಲಿ ಸಹ ಪಟ್ಟಿ ನೀಡಲಿ ಎಂದರು.

ಸುದ್ದಿಗೋಷ್ಠಿಯಲ್ಲಿ ಬಾಳು ಮಾಮ ಕುರಿಗಾಯಿ ಸಂಗೋಪನ ಸೇವಾ ಧಾರ್ಮಿಕ ಟ್ರಸ್ಟಿನ ಮುಖಂಡರಾದ ಮೊಹಮ್ಮದ್ ರಫಿ, ಮಲ್ಲಿಕಾರ್ಜುನ್ ಪುರಾಣಿಕ ಮಠ, ಮುಖಂಡರಾದ ರವಿಶಂಕರ್, ಛತ್ರ​‍್ಪ ಚಲವಾದಿ ಉಪಸ್ಥಿತರಿದ್ದರು.