ಪಂಚಮಸಾಲಿ ವಕೀಲರ ಪರಿಷತ್ ರಾಜ್ಯಮಟ್ಟದ ಕಾರ್ಯಕಾರಿಣಿ ಚಿಂತನಾ ಸಭೆ
Panchamasali Bar Association State Level Executive Brainstorming Meeting
ವಿಜಯಪುರ 11 : ಮುಂಬರುವ ಜಾತಿ ಜನಗಣತಿಯಲ್ಲಿ ಪಂಚಮಸಾಲಿ ಸಮಾಜದವರು ಯಾವುದನ್ನು ಬರೆಯಿಸಬೇಕು ಹಾಗೂ 2ಏ . ಓ ಬಿ ಸಿ ಮಿಸಲಾತಿ. ಕುರಿತು ಲಿಂಗಾಯತ. ಪಂಚಮಸಾಲಿ ವಕೀಲರ ಪರಿಷತ್ ರಾಜ್ಯಮಟ್ಟದ ಕಾರ್ಯಕಾರಿಣಿ ಚಿಂತನಾ ಸಭೆಯನ್ನು ಇದೆ ರವಿವಾರ ಜುಲೈ 13 ರಂದು ವಿಜಯಪುರ ಸಿದ್ದೇಶ್ವರ ದೇವಾಲಯ ಆವರಣ ನೂತನ ಶಿವಾನುಭವ ಮಂಟಪದಲ್ಲಿ ಹಮ್ಮಿಕೊಳ್ಳಲಾಗಿದೆ. ಕಾರಣ ಪಂಚಮಸಾಲಿ ಸಮಾಜ ಮಲೆ ಗೌಡ. ದೀಕ್ಷಾಲಿಂಗಾಯತರು. ವಕೀಲ.ಬಾಂಧವರು.ಕಾನೂನು ತಜ್ಞರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಚಿಂತನಾ ಸಭೆಯಲ್ಲಿ ಬಾಗವಹಿಸಿ ಯಶಸ್ವಿಗೊಳಿಸಬೇಕೆಂದು ಕರೆ ನೀಡಿದರು.
ವಿಜಯಪುರ ಸಿದ್ದೇಶ್ವರ ದೇವಾಲಯ ಆವರಣದ ಡಾ.ಫ್.ಗು.ಹಳಕಟ್ಟಿ ಸಭಾ ಭವನದಲ್ಲಿಗುರುವಾರ ದಿನಾಂಕ 10-07-2025 ರಂದು ಬೆಳಿಗ್ಗೆ 11 ಘಂಟೆಗೆ ಲಿಂಗಾಯತ ಪಂಚಮಸಾಲಿ ವಕೀಲರ ಪರಿಷತ್ ಜಿಲ್ಲಾ ಘಟಕ ವಿಜಯಪುರ ವತಿಯಿಂದ ಏರಿ್ಡಸಿದ್ದ ಮಾಧ್ಯಮ ಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು ಇದೀಗ ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರಗಳು ಜಾತಿ ಜನಗಣತಿಗೆ. ಮುಂದಾಗಿದ್ದು ಸಿದ್ಧತೆ ಸಕಲ ಸಿದ್ಧತೆ ಮಾಡಿಕೊಂಡಿವೆ.ಜನ ಗಣತಿಗೆ ಸರಕಾರಿ ಸಿಬ್ಬಂದಿ ಮನೆ ಬಾಗಿಲಿಗೆ ಬಂದಾಗ ನಿಖರ ಮಾಹಿತಿ ಕೊಡಬೇಕಾಗುತ್ತದೆ. ಕಾರಣ ನಾವು ಪಂಚಮಸಾಲಿ ಸಾಮಾಜ ಬಾಂಧವರಿಗೆ ಸ್ಪಷ್ಟ ಸಂದೇಶ ಕೊಡಬೇಕಾಗುತ್ತದೆ. ಈ ಕುರಿತು ವಕೀಲರು. ಕಾನೂನು ತಜ್ಞರ ಅಭಿಪ್ರಾಯ ಪಡೆದು ಮಕ್ಕಳ ಶಿಕ್ಷಣ.ಉದ್ಯೋಗ ಪಡೆಯುವಾಗ ನೀಡಲಾತಿಗೂ ಅನುಕೂಲವಾಗುವ ಸಾಮಾಜಿಕ.ಕಾನೂನಾತ್ಮಕವಾಗಿ ಅನ್ವಯವಾಗುವ ಹಾಗೇ ತೀರ್ಮಾನಕ್ಕೆ ಬರಬೇಕಾದ ಅವಶ್ಯವಿದೆ. ಬೆಳಗಾವಿ ಬೆಂಗಳೂರು ಹುಬ್ಬಳ್ಳಿಯಲ್ಲಿ ವಕೀಲರ ಪರಿಷತ್ತಿನ ಸಭೆಗಳು ಯಶಸ್ವಿಯಾಗಿದ್ದು ಈಗ ಐತಿಹಾಸಿಕ ನಗರ ವಿಜಯಪುರದಲ್ಲಿ ಮೊದಲ ಬಾರಿಗೆ ನಡೆಯುವ ರಾಜ್ಯ ಕಾರ್ಯಕಾರಿಣಿ ಚಿಂತನಾ ಸಭೆಗೆ ಸಮಾಜದ ವಕೀಲ ಪರಿಷತ್ ಪದಾಧಿಕರಿಗಳು ಕಾನೂನು ತಜ್ಞರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಸಲಹೆ ಸೂಚನೆ ಮಾರ್ಗದರ್ಶನ ನೀಡಿ ಸಮಾಜಕ್ಕೆ ಸ್ಪಷ್ಟ ಸಂದೇಶ ನೀಡಬೇಕೆಂದು ತಿಳಿಸಿದರು.
ಜಿಲ್ಲಾ ವಕೀಲರ ಸಂಘದ ನಿಕಟ ಪೂರ್ವ ಅಧ್ಯಕ್ಷ ಹಾಗೂ ಪಂಚಮಸಾಲಿ ವಕೀಲರ ಪರಿಷತ್ತಿನ ಪದಾಧಿಕಾರಿಗಳಾದ ಖ್ಯಾತ ನ್ಯಾಯವಾದಿ ಜಿ.ಬಿ.ಕೋಳೂರು ಮಾತನಾಡಿ ಕಳೆದ ವರ್ಷ ಡಿಸೆಂಬರ್ 10 ರಂದು ಬೆಳಗಾವಿ ಸುವರ್ಣ ವಿಧಾನಸೌಧದ ಎದುರು ಪಂಚಮಸಾಲಿ ಸಮಾಜದ 2ಏ ಮಿಸಲಾತಿ ಆಗ್ರಹಿಸಿ ನಡೆದ ಹೋರಾಟದ ಸಂದರ್ಭದಲ್ಲಿ ರಾಜ್ಯ ಸರ್ಕಾರ.ರಾಜ್ಯದ ಮೂಲೆ ಮೂಲೆಗಳಿಂದ ಆಗಮಿಸಿದ್ದ ಪಂಚಮಸಾಲಿ ಸಮಾಜದ ಶ್ರೀಗಳ ನೇತೃತ್ವದಲ್ಲಿ ಶಾಂತಿಯುತವಾಗಿ ನಡೆಯುತ್ತಿದ್ದ ಹೋರಾಟ ದ ಸಂಧರ್ಭದಲ್ಲಿ ರೈತರು ಕೂಲಿಕಾರ್ಮಿಕರು, ಹಿರಿಯರು.ಯುವಕರು,ಮಹಿಳೆಯರು ಮುಂತಾದವರನ್ನು ಲೆಕ್ಕಿಸದೆ ಅಮಾನುಷವಾಗಿ ಪೊಲೀಸರ ಮೂಲಕ ಲಾಠಿ ಚಾರ್ಜ್ ಮಾಡಿಸಿ ರಕ್ತಸಿಕ್ತ ವಾಗಿ ದೌರ್ಜನ್ಯ ಎಸಗಿದ್ದನ್ನು ನಮ್ಮ ಸಾಮಾಜ ಇನ್ನೂ ಮರೆತಿಲ್ಲ. ಇದೊಂದು ಐತಿಹಾಸಿಕ ರಕ್ತ ಕ್ರಾಂತಿ ಎಂಬುದಾಗಿ ದಾಖಲಾಗಿದೆ.ಪ್ರತಿಯೊಬ್ಬ ಸ್ವಾಭಿಮಾನಿ ಪಂಚಮಸಾಲಿ ವ್ಯಕ್ತಿಯ ಹೃದಯದಲ್ಲಿ ಗಾಯವಾಗಿ ಅಚ್ಚೊತ್ತಿದೆ.ನಮ್ಮ ನೋವು ಮಾಯವಾಗಬೇಕಾದರೆಆಡಳಿತ ಸರ್ಕಾರ ನಮ್ಮ ಸರ್ಕಾರಕ್ಕೆ ಮೀಸಲಾತಿ ಕಲ್ಪಿಸಬೇಕು ಎಂದು ಆಗ್ರಹಿಸಿದರು. ಅಲ್ಲದೇ ಗುರು ಪೂರ್ಣಿಮೆಯ ಶುಭ ಸಂದರ್ಭದಲ್ಲಿ ಪಂಚಮಸಾಲಿ ಸಮಾಜಕ್ಕೆ ನ್ಯಾಯದೇವತೆ ಮತ್ತೊಮ್ಮೆ ಗೆಲುವು ನೀಡಿದ್ದಾಳೆ. ಸರ್ಕಾರ ಎರಡನೇ ಬಾರಿಯೂ ಹೈ ಕೋರ್ಟ್ ಗೆ ಸಲ್ಲಿಸಿದ ಮೇಲ್ಮನವಿಯನ್ನು ವಿಭಾಗೀಯ ಪೀಠ ತಿರಸ್ಕರಿಸುವ ಮೂಲಕ ಸರ್ಕಾರಕ್ಕೆ ಚಾಟಿ ಏಟು ಬೀಸಿದೆ. ಆಡಳಿತ ಸರ್ಕಾರಕ್ಕೆ ಇಂದು ತೀವ್ರ ಮುಖಭಂಗವಾಗಿದೆ. ಏಪ್ರಿಲ್ 04 ರಂದು ಹೈಕೋರ್ಟ್ ಏಕ ಸದಸ್ಯ ಪೀಠ ಪಂಚಮಸಾಲಿ ಹೋರಾಟಗಾರ ಮೇಲೆ ಎಸಗಿದ ದೌರ್ಜನ್ಯ ಕುರಿತು ನ್ಯಾಯ ಒದಗಿಸಲು ನ್ಯಾಯಾಂಗ ತನಿಖೆಗೆ ಆದೇಶ ನೀಡುವ ಕುರಿತು ಮನವಿ ಸಲ್ಲಿಸಲಾಗಿತ್ತು.ಅರ್ಜಿ ಯನ್ನು ಪುರಸ್ಕರಿಸಿ ಏಪ್ರಿಲ್ 04 ರಂದು ಹೈಕೋರ್ಟ್ ಏಕ ಸದಸ್ಯ ಪೀಠ ಅರ್ಜಿಯನ್ನು ಪುರಸ್ಕರಿಸಿ ಆದೇಶ ನೀಡಿತ್ತು. ಇದನ್ನು ಸಹಿಸದ ಸರ್ಕಾರ ಈ ಆದೇಶವನ್ನು ವಜಾಗೊಳಿಸುವಂತೆ ಹೈ ಕೋರ್ಟ್ ವಿಭಾಗೀಯ ಪೀಠಕ್ಕೇ ಮೇಲ್ಮನವಿ ಸಲ್ಲಿಸಿತ್ತು.ಇಂದು ಜುಲೈ 10 ರಂದು ವಿಚಾರಣೆ ನಡೆಸಿದ ಹೈಕೋರ್ಟ್.ಪಂಚಮಸಾಲಿ ಹೋರಾಟಗಾರರು ನ್ಯಾಯಾಂಗ ತನಿಖೆಗೆ ಆಗ್ರಹಿಸಿ ಮಾಡಿಕೊಂಡ ಮನವಿಯನ್ನೂ ಮತ್ತೊಮ್ಮೆಪುರಸ್ಕರಿಸಿ.ಸರ್ಕಾರ ಮಾಡಿದ ಮೇಲ್ಮನವಿ ವಜಾಗೊಳಿಸಿದೆ.ಮುಗ್ಧ ರೈತಾಪಿ ವರ್ಗ ಜನರು ಪಂಚಮಸಾಲಿ ಸಮಾಜ ಬಾಂಧವರು ನ್ಯಾಯಾಂಗದ ಮೇಲೆ ವಿಶ್ವಾಸ ಇರಿಸಿದ್ದು ಅದನ್ನೂ ಮಾನ್ಯ ನ್ಯಾಯಾಲಯ ನಮ್ಮ ಸಂವಿಧಾನ ಬದ್ಧ ಹಕ್ಕನ್ನು ಎತ್ತಿ ಹಿಡಿದಿದೆ. ರಾಜ್ಯದ ಇತಿಹಾಸದಲ್ಲಿ ಸಮಾಜಕ್ಕಾಗಿ ಹೋರಾ ಮೇಲೆ ಪೊಲೀಸ್ ಬಲವನ್ನು ದುರುಪಯೋಗ ಪಡಿಸಿಕೊಂಡು ಮುಗ್ದ ಪಂಚಮಸಾಲಿ ಸಮಾಜದ ಹೋರಾಟಗಾರರ ಮೇಲೆ ಅಮಾನುಷವಾಗಿ ಹಲ್ಲೆ ಮಾಡಿಸಿದ್ದ ಸರ್ಕಾರ ವಿರುಧ್ಧ ಎರಡನೇ ಬಾರಿಯೂ ನ್ಯಾಯಾಂಗ ತನಿಖೆಗೆ ಆದೇಶಿಸಿದ ಮಾನ್ಯ ರಾಜ್ಯ ಉಚ್ಚ ನ್ಯಾಯಾಲಯ ವಿಭಾಗೀಯ ಪೀಠಕ್ಕೇ ಧನ್ಯವಾದ ಅರ್ಿಸಿದರು. ಮತ್ತು ಒಂದು ತಿಂಗಳ ಅವಧಿಯಲ್ಲಿ ಹಲ್ಲೆಗೊಳಗಾದ ಅಮಾಯಕರಿಗೆ ನ್ಯಾಯ ಹಾಗೂ ತಪ್ಪಿತಸ್ಥರಿಗೆ ತಕ್ಕ ಶಿಕ್ಷೆಯಾಗಲಿ ಎಂದು ಸಮಸ್ತ ಲಿಂಗಾಯತ ಪಂಚಮಸಾಲಿ ಸಮಾಜ ಒತ್ತಾಯಿಸುತ್ತದೆ ಎಂದರು.
ಗೆಲುವಿನ ಆದೇಶ ತಿಳಿದ ತಕ್ಷಣ ಪಂಚಮಸಾಲಿ ಕೂಡಲಸಂಗಮ ಲಿಂಗಾಯತ ಪಂಚಮಸಾಲಿ ಪೀಠದ ಪ್ರಥಮ ಜಗದ್ಗುರು ಶ್ರೀ ಬಸವ ಜಯ ಮೃತ್ಯುಂಜಯ ಸ್ವಾಮೀಜಿಯವರು. ವಕೀಲರ ಪರಿಷತ್ ಪದಾಧಿಕಾರಿಗಳು.ಸಾಮಾಜ ಬಾಂಧವರ ಜೊತೆಗೇ ಶ್ರೀ ಸಿದ್ದೇಶ್ವರ ದೇವಾಲಯಕ್ಕೇ ತೆರಳಿ ವಿಶೇಷ ಪೂಜೆ ಸಲ್ಲಿಸಿ ಸಿಹಿ ವಿತರಿಸಿ.ಜಯಘೋಷ ಮೊಳಗಿಸಿ ಸಂಭ್ರಮಿಸಿದರು.ಇದೇ ವೇಳೆ ಗುರು ಪೂರ್ಣಿಮೆಯ ನಿಮಿತ್ಯ ಜಗದ್ಗುರುಗಳಿಗೆ ಗುರು ಪೂರ್ಣಿಮೆಯ ನಿಮಿತ್ಯ ಕಿತ್ತೂರು ಕರ್ನಾಟಕ ರಾಜ್ಯ ಸಂಚಾಲಕ ಶರಬಸಪ್ಪ ಗಂಗಶೆಟ್ಟಿ ಹಾಗು ಪಂಚ ಸೇನೆ ವಿಜಯಪುರ ಜಿಲ್ಲಾ ಅಧ್ಯಕ್ಷ ಸಂತೋಷ ಮುಂಜಣ್ಣಿ ಗುರುಗಳಿಗೆ ಶಾಲು ಹೊದಿಸಿ ಫಲಪುಷ್ಪ ವಿತರಿಸಿ.ಹಾರ ಹಾಕಿ ಪುಷ್ಪ ವೃಷ್ಟಿಗೈದು ಭಕ್ತಿಯ ಪರಾಕಾಷ್ಠೆ ಮೆರೆದರು.
ಸುದ್ಧಿ ಗೋಷ್ಠಿಯಲ್ಲಿ ಪಂಚಮಸಾಲಿ ಸಮಾಜದ ಜಿಲ್ಲಾ ಅಧ್ಯಕ್ಷ ಬಿ.ಎಂ. ಪಾಟೀಲ.ದೇವರ ಹಿಪ್ಪರಗಿ. ನಗರ ಘಟಕ ಅಧ್ಯಕ್ಷ ಶ್ರೀಶೈಲ ಬುಕ್ಕಾಣ್ಣಿ. ಉಪಾಧ್ಯಕ್ಷ ಸಿದ್ದು ಹಳ್ಳೂರ.ಹಿರಿಯ ನ್ಯಾಯವಾದಿ ಬಿ.ಡಿ.ಬಿರಾದಾರ.ಕುಮಟಗಿ ಮಾದ್ಯಮ ವಕ್ತಾರ ನ್ಯಾಯವಾದಿ ದಾನೇಶ ಅವಟಿ ಮುಂತಾದವರು ಉಪಸ್ಥಿತರಿದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 