ಪಲ್ಲಕ್ಕಿ ಬಸ್ ಸೇವೆ ಸ್ವಾಗತಾರ್ಹ, ಆದರೆ ಅವಳಿ ನಗರ ಸಂಚಾರ ಸೇವೆಗೆ ಬೇಕಿದೆ ಬಸ್‌ಗಳ ಸಂಚಲನ - ವಿಶ್ವನಾಥ ಶೀರಿ
Palakki bus service is welcome, but twin city transport service needs bus movement - Vishwanath Shir
ಪಲ್ಲಕ್ಕಿ ಬಸ್ ಸೇವೆ ಸ್ವಾಗತಾರ್ಹ, ಆದರೆ ಅವಳಿ ನಗರ ಸಂಚಾರ ಸೇವೆಗೆ ಬೇಕಿದೆ ಬಸ್‌ಗಳ ಸಂಚಲನ - ವಿಶ್ವನಾಥ ಶೀರಿ
ಗದಗ 14, ಇದೇ ಅಕ್ಟೋಬರ್ 17 ರಿಂದ ಸಿಲಿಕಾನ್ ಸಿಟಿ ಬೆಂಗಳೂರು ಹಾಗೂ ಮುದ್ರಣ ನಗರಿ ಮಧ್ಯೆ ಹೈಟೇಕ್ ಸೌಲಭ್ಯಗಳನ್ನು ಹೊಂದಿರುವ ಪಲ್ಲಕ್ಕಿ ಬಸ್ ಸೇವೆ ಪ್ರತಿ ನಿತ್ಯ ಪ್ರಾರಂಭವಾಗಿರುವುದು ಸ್ವಾಗತಾರ್ಹ. ಜೊತೆಗೆ ಖಾಸಗಿ ಬಸಗಳು ಮನಸ್ಸೊ ಇಚ್ಚೆ ದರ ಬದಲಾವಣೆ ಬ್ರೇಕ್ ಹಾಕಲು ಕೊಂಚ ಮಟ್ಟಿಗೆ ಸಹಕಾರಿಯಾಗಲಿದೆ.
ಆದರೇ ಗದಗ ಬೆಟಗೇರಿ ಅವಳಿ ನಗರದಲ್ಲಿ ಪ್ರಮುಖ ಸ್ಥಳವಾದ ರೈಲು ನಿಲ್ದಾಣದಿಂದ ನಗರ ಸಂಚಾರಕ್ಕೆ ಯಾವುದೇ ಬಸ್ ಸೇವೆಗಳು ಇಲ್ಲದಿರುವುದು ಖೇಧಕರ ಸಂಗತಿ. ನಸುಕಿನ ಜಾವದಿಂದ ಮುಂಜಾನೆ 10:30 ರ ವರೆಗೆ ರಾಜ್ಯ, ಅಂತಾರಾಜ್ಯಗಳಿಂದ ಅನೇಕ ರೈಲು ಗದಗ ನಿಲ್ದಾಣಕ್ಕೆ ಬರುತ್ತವೆ ಆದರೆ ಖಾಸಗಿ ವಾಹನಗಳ ಸೌಲಭ್ಯವನ್ನು ಹೊರತು ಪಡಿಸಿ ಸರ್ಕಾರದ ನಗರ ಸಾರಿಗೆ ಸೇವೆ ಇಲ್ಲದಿರುವುದು ಪ್ರಯಾಣಿಕರ ಅನುಕೂಲಕ್ಕೆ ಕಾರಣವಾಗಿದೆ. ಖಾಸಗಿ ವಾಹನಗಳ ಸೌಲಭ್ಯವಿದರು ಅದು ವಾಹನದಲ್ಲಿ ಪ್ರಯಾಣಿಸುವವ ಸಂಖ್ಯೆ ಮತ್ತು ಪ್ರಯಾಣದ ದರ ಅವರ ಇಚ್ಛೆಗೆ ಅನುಗುಣವಾಗಿ ನಡೆಯುತ್ತಿದೆ. ಇದು ಪ್ರಯಾಣಿಕರಿಗೆ ಆರ್ಥಿಕ ಹೊರೆಯಾಗಿದೆ. ಅವಳಿ ನಗರದಲ್ಲಿ ಸಂಚಾರಕ್ಕೆ ಕೆಲವೇ ಬಸ್ ಸೇವೆಗಳು ಲಭ್ಯವಿದ್ದು ಅದು ನಿರಂತರವಾಗಿ ಸಂಚರಿಸುವ ಇಲಾಖೆಯ ಸಹಕಾರ ಬೇಕಿದೆ. ರಾಜಧಾನಿ ಮಹಿಳೆಯರಿಗೆ ಸಿಗುವ ಶಕ್ತಿ ಯೋಜನೆ ಸೌಲಭ್ಯ ಸ್ಥಳೀಯ ಮಹಿಳೆಯರಿಗೆ ಸಂಪೂರ್ಣವಾಗಿ ಸಿಗದೆ ಇರುವುದು ಅಧಿಕಾರಿಗಳು ನಿಷ್ಕಾಳಜಿಗೆ ಕೈಗನ್ನಡಿಯಾಗಿದೆ. ಕೊಡಲೇ ಸಂಬಂಧಿಸಿದವರು ಈ ಬಗ್ಗೆ ಕ್ರಮ ಕೈಗೊಳ್ಳಬೇಕಾಗಿ ಹಾಗೂ ಸಾರ್ವಜನಿಕ ಅನುಕೂಲ ಮಾಡಿ ಆರ್ಥಿಕ ಹೊರೆ ತಗ್ಗಿಸಲು ನಿರಂತರಾಗಬೇಕು ಎಂದು ಅರಿವು ಫೌಂಡೇಶನ್ ಅಧ್ಯಕ್ಷರಾದ ವಿಶ್ವನಾಥ ಶೀರಿ ಪ್ರಕಟಣೆ ಮೂಲಕ ವಿನಂತಿಸಿದ್ದಾರೆ.
ಅಕ್ರಮ ಚಟುವಟಿಕೆ ಎಸಗಿದರೆ ಗಡಿಪಾರದ ಎಚ್ಚರಿಕೆ: ಪೊಲೀಸ ಠಾಣೆಯಲ್ಲಿ ರೌಡಿಶೀಟರ್ ಗಳ ಪರೇಡ್
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ 