ಪಾಕ್; 1373 ಜನರಿಗೆ ಸೋಂಕು, 11 ಸಾವು

ಇಸ್ಲಮಾಬಾದ್, ಮಾ 28,  ಪಾಕಿಸ್ತಾನದಲ್ಲಿ ಕೋವಿಡ್ -19 ಸೋಂಕಿತರ ಸಂಖ್ಯೆ 1373ಕ್ಕೇರಿಕೆಯಾಗಿದ್ದು, 11 ಮಂದಿ ಮೃತಪಟ್ಟಿದ್ದಾರೆ. ಪಾಕಿಸ್ತಾನದ ಪಂಜಾಬ್ ಪ್ರಾಂತ್ಯಕ್ಕೆ ಅತಿ ಹೆಚ್ಚು ಸೋಂಕು ತಗುಲಿದ್ದು, 490 ಸೋಂಕಿತ ಪ್ರಕರಣಗಳು ದೃಢಪಟ್ಟಿದ್ದು, ಐವರು ಸಾವನ್ನಪ್ಪಿದ್ದಾರೆ. ಇಲ್ಲಿನ ಬುಲುಚಿಸ್ತಾನದಲ್ಲಿ 131 ಪ್ರಕರಣಗಳು ಹಾಗೂ ಗಿಲ್ಗಿಟ್- ಬಲ್ಟಿಸ್ತಾನ್ ನಲ್ಲಿ 104 ಪ್ರಕರಣಗಳು ಪತ್ತೆಯಾಗಿದೆ. ರಾಜಧಾನಿ ಇಸ್ಲಮಾಬಾದ್ ನಲ್ಲಿ ಇಲ್ಲಿಯವರೆಗೆ 27 ಪ್ರಕರಣಗಳು ದೃಢಪಟ್ಟಿವೆ.