ಪಾಕ್ ಕಿಡಿಗೇಡಿ ಕೃತ್ಯ; ಕರ್ತಾರ್ ಪುರ್ ಕಾರಿಡಾರ್ ಅಧಿಕೃತ ವಿಡಿಯೋ ಗೀತೆಯಲ್ಲಿ ಮುವರು ಖಾಲಿಸ್ತಾನ್ ಭಯೋತ್ಪಾದಕರ ಚಿತ್ರ...!

ಇಸ್ಲಾಮಾಬಾದ್,  ನ 6:   ಕರ್ತಾರ್ ಪುರ್ ಕಾರಿಡಾರ್  ಕುರಿತ  ಪಾಕಿಸ್ತಾನ  ಸರ್ಕಾರ  ಬಿಡುಗಡೆಗೊಳಿಸಿರುವ  ಅಧಿಕೃತ ಗೀತೆಯಲ್ಲಿ    1984ರಲ್ಲಿ   ಭಾರತೀಯ ಸೇನೆಯಿಂದ ಹತ್ಯೆಗೀಡಾದ ಮೂವರು ಖಾಲಿಸ್ತಾನಿ  ಭಯೋತ್ಪಾದಕರ   ಚಿತ್ರಗಳು  ಒಳಗೊಂಡಿರುವುದು  ತೀವ್ರ ವಿವಾದ ಸೃಷ್ಟಿಸಿದೆ. ಪಾಕಿಸ್ತಾನ  ಸರ್ಕಾರ   ತನ್ನ   ಅಧಿಕೃತ    ಟ್ವೀಟರ್ ನಲ್ಲಿ  ಗೀತೆಯ ವಿಡಿಯೋ  ಹಂಚಿಕೊಂಡಿದ್ದು, ಪ್ರಧಾನಿ ಇಮ್ರಾನ್ ಖಾನ್ ಸಂದೇಶವನ್ನು ಒಳಗೊಂಡಿರುವ  ವಿಡಿಯೋದಲ್ಲಿ,    ಸಿಖ್   ಧರ್ಮ ಅನುಯಾಯಿಗಳು  ಕರ್ತಾರ ಪುರ್  ಗುರುದ್ವಾರ ದರ್ಬಾರ್  ಸಾಹಿಬ್   ಕುರಿತ  ಹೊಂದಿರುವ ಶ್ರದ್ಧೆ,  ಭಕ್ತಿ  ಹಾಗೂ ಗೌರವದ ಮಹತ್ವವನ್ನು ವಿವರಿಸಿದ್ದಾರೆ, ಪಾಕಿಸ್ತಾನದ ವಿವಿಧ ಪ್ರದೇಶಗಳಿಂದ ಸಿಖ್ ಯಾತ್ರಾರ್ಥಿಗಳು  ಗುರುದ್ವಾರಕ್ಕೆ ಭೇಟಿ ನೀಡುವುದನ್ನು ಅದರಲ್ಲಿ  ತೋರಿಸಲಾಗಿದೆ. ವಿಡಿಯೋದಲ್ಲಿ,  ಖಾಲಿಸ್ತಾನ್  ಭಯೋತ್ಪಾದಕರಾದ   ಜರ್ನಲ್ ಸಿಂಗ್ ಭಿಂದ್ರನ್ ವಾಲೆ,  ಅಮ್ರಿಕ್ ಸಿಂಗ್ ಖಾಲ್ಸಾ,  ಹಾಗೂ ಮೇಜರ್ ಜನರಲ್ (ವಜಾಗೊಂಡಿರುವ) ಶಾಬೇಗ್  ಸಿಂಗ್ ಅವರ  ಚಿತ್ರಗಳನ್ನು   ಗೀತೆಯಲ್ಲಿ   ತೋರಿಸುವ ಮೂಲಕ  ವಿವಾದಕ್ಕೆ ಆಸ್ಪದ ಕಲ್ಪಿಸಿದೆ.  ಖಾಲಿಸ್ತಾನ ಪರ   ನಾಯಕನಾಗಿದ್ದ   ಜರ್ನ್ಲ್ ಸಿಂಗ್ ಬಿಂದ್ರನ್ ವಾಲೆ  ಧಾರ್ಮಿಕ ಸಂಘಟನೆ  ದಮಾದಮಿ ತಕ್ಸಲ್  ಮುಖ್ಯಸ್ಥನಾಗಿದ್ದ. ಅಮ್ರಿಕ್ ಖಾಲ್ಸಾ  ಮತ್ತೊಬ್ಬ ಖಾಲಿಸ್ತಾನ ವಿದ್ಯಾರ್ಥಿ ಸಂಘಟನೆಯ ನಾಯಕನಾಗಿದ್ದು, ಈಗ ನಿಷೇಧಿತವಾಗಿರುವ  ಅಖಿಲ ಭಾರತ ಸಿಖ್ ವಿದ್ಯಾರ್ಥಿಗಳ  ಒಕ್ಕೂಟ( ಎಐಎಸ್ಎಸ್ ಡಿ) ನಾಯಕನಾಗಿದ್ದ, ಶಾಬೇಗ್   ಸಿಂಗ್  ಸೇನೆಯಿಂದ ವಜಾಗೊಂಡ ಅಧಿಕಾರಿಯಾಗಿದ್ದು,  ಆಪರೇಷನ್  ಬ್ಲೂ ಕಾರ್ಯಾಚರಣೆಯ ವೇಳೆ  ಜರ್ನ್ಲ್ ಸಿಂಗ್  ಭಿಂದ್ರನ್ ವಾಲೆಯೊಂದಿಗೆ ಇದ್ದ ವ್ಯಕ್ತಿಯಾಗಿದ್. ಈ  ಎಲ್ಲಾ ಮೂವರು  1984ರಲ್ಲಿ ಭಾರತೀಯ ಸೇನಾ  ಅಮೃತಸರದ ಸ್ವರ್ಣಮಂದಿರದಲ್ಲಿ  ನಡೆಸಿದ ಅಪರೇಷನ್ ಬ್ಲೂ ಕಾರ್ಯಾಚರಣೆಯ ವೇಳೆ  ಹತ್ಯೆ ಮಾಡಲಾಗಿತ್ತು. ಪಂಜಾಬ್  ನಲ್ಲಿ ಸಿಖ್  ಉಗ್ರವಾದವನ್ನು ಪುನರುಜ್ಜೀವನಗೊಳಿಸಲು  ಪಾಕಿಸ್ತಾನ ಹಾಗೂ ಐಎಸ್ಐ  ಕರ್ತಾರ್ ಪುರ್ ಕಾರಿಡಾರ್  ಬಳಸಿಕೊಳ್ಳುವ ಸಾಧ್ಯತೆಯಿದೆ ಎಂದು  ಪಂಜಾಬ್ ಮುಖ್ಯಮಂತ್ರಿ  ಅಮರಿಂದರ್ ಸಿಂಗ್ ಕಳೆದ ವರ್ಷ  ಹೇಳಿದ್ದನ್ನು ಇಲ್ಲಿ ಸ್ಮರಿಸಬಹುದು. ಕರ್ತಾರ್ ಪುರ್ ಕಾರಿಡಾರ್  ನವಂಬರ್ 9 ರಂದು  ಉದ್ಘಾಟನೆಗೊಳ್ಳಲಿದ್ದು,  ಭಾರತೀಯ  ಸಿಖ್ ಯಾತ್ರಾರ್ಥಿಗಳು  ವಿಸಾ ಮುಕ್ತ  ಸಂಚಾರಕ್ಕೆ  ಈ  ಮಾರ್ಗ  ಅನುವು ಮಾಡಿಕೊಡಲಿದೆ.