ಪಾಕ್ ಪ್ರಧಾನಿ, ಸೇನಾ ಮುಖ್ಯಸ್ಥ ಎಲ್ಒಸಿಗೆ ಭೇಟಿ

ಇಸ್ಲಾಮಾಬಾದ್, ಸೆ 7:   ರಕ್ಷಣಾ ದಿನ ಮತ್ತು ಹುತಾತ್ಮ ದಿನದ ಅಂಗವಾಗಿ ಪಾಕಿಸ್ತಾನ ಪ್ರಧಾನಮಂತ್ರಿ ಇಮ್ರಾನ್ ಖಾನ್ ಅವರು ಸೇನಾ ಮುಖ್ಯಸ್ಥ ಜನರಲ್ ಖಮರ್ ಜಾವೆದ್ ಬಜ್ವಾ ಅವರೊಂದಿಗೆ ನಿಯಂತ್ರಣ ರೇಖೆಗೆ ಭೇಟಿ ನೀಡಿದರು. ಪ್ರಧಾನ ಮಂತ್ರಿಯೊಂದಿಗೆ ರಕ್ಷಣಾ ಸಚಿವ ಪರ್ವ್ಜ್ ಖಟ್ಟಕ್, ವಿದೇಶಾಂಗ ಸಚಿವ ಶಾ ಮಹಮೂದ್ ಖುರೇಷಿ ಮತ್ತು ಕಾಶ್ಮೀರದ ವಿಶೇಷ ಸಮಿತಿಯ ಅಧ್ಯಕ್ಷ ಸೈಯದ್ ಫಖಾರ್ ಇಮಾಮ್ ಕೂಡ ಇದ್ದರು ಎಂದು ಅಂತರ ಸೇವೆಗಳ ಸಾರ್ವಜನಿಕ ಸಂಪರ್ಕ ಇಲಾಖೆ ಹೇಳಿಕೆಯಲ್ಲಿ ತಿಳಿಸಿದೆ. ನಿನ್ನೆ ನಡೆದ ಈ ಭೇಟಿಯ ವೇಳೆ ಪ್ರಧಾನಿಗೆ ಎಲ್ಒಸಿಯ ಪರಿಸ್ಥಿತಿಯ ಬಗ್ಗೆ ವಿವರ ನಿಡಲಾಯಿತು. ಭೇಟಿಯ ವೇಳೆ ಇಮ್ರಾನ್ ಖಾನ್ ಮತ್ತು ಸೇನಾ ಮುಖ್ಯಸ್ಥ ಗಡಿಯಲ್ಲಿದ್ದ ಸೈನಿಕರೊಂದಿಗೆ ಸಂವಾದ ನಡೆಸಿದರು. ಮಾತ್ರವಲ್ಲ ಹುತಾತ್ಮ ಯೋಧರ ಕುಟುಂಬದ ಸದಸ್ಯರನ್ನೂ ಭೇಟಿಯಾದರು. ಜಮ್ಮು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ಕಲ್ಪಿಸುವ ಸಂವಿಧಾನದ 370 ನೇ ವಿಧಿಯನ್ನು ರದ್ದುಪಡಿಸಿದ ಬಳಿಕ ಭಾರತ ಮತ್ತು ಪಾಕಿಸ್ತಾನ ನಡುವಿನ ಸಂಬಂಧ ಹದಗೆಟ್ಟಿದೆ.