ಮಕ್ಕಳ ಮನಸ್ಸನ್ನು ಹದಗೊಳಿಸಲು ಚಿತ್ರಕಲೆ ಬಹು ಮುಖ್ಯವಾದ ಕಲಾ ಪ್ರಕಾರ: ಡಾ.ರಾಜಶ್ರೀ ಗುದಗನವರ
Painting is a very important art form to shape children's minds: Dr. Rajashree Gudaganavara
ಧಾರವಾಡ 28: ಮಕ್ಕಳ ಮನಸ್ಸನ್ನು ಹದಗೊಳಿಸಲು ಚಿತ್ರಕಲೆ ಬಹು ಮುಖ್ಯವಾದ ಕಲಾ ಪ್ರಕಾರವಾಗಿದೆ.ಇಂದಿನ ಮಕ್ಕಳು ಮೊಬೈಲ್‌ನಲ್ಲಿ ಮುಳುಗುವ ಬದಲು ಸೃಜನಶೀಲರಾಗಬೇಕಿದೆ ಎಂದು ಡಾ.ರಾಜಶ್ರೀ ಗುದಗನವರ ಹೇಳಿದರು.
ಇಲ್ಲಿನ ರಜತಗಿರಿ ಬಡಾವಣೆಯ ಸಿಂಚನಾದಲ್ಲಿ ಏರಿ್ಡಸಿದ ಮಕ್ಕಳ ಚಿತ್ರಕಲೆ ಶಿಬಿರದಲ್ಲಿ ಪಾಲ್ಗೊಂಡು ಮಾತನಾಡಿ, ಪೋಷಕರು ತಮ್ಮ ಮಕ್ಕಳಿಗೆ ಇಂತಹ ಕಲೆಗೆ ಪ್ರೋತ್ಸಾಹ ನೀಡುವ ಅಗತ್ಯವಿದೆ ಎಂದು ತಿಳಿಸಿದರು.
ಶೈಲಾ ಕರಗುದರಿ ಮಾತನಾಡಿ, ನಮ್ಮ ಪಾರಂಪರಿಕ ಜ್ಞಾನವನ್ನು ಮುಂದಿನ ಪೀಳಿಗೆಗೆ ತಿಳಿಸುವ ಸಾರ್ಥಕ ಕೆಲಸದಲ್ಲಿ ಅಮೃತಾ ಜೋಶಿಯವರು ತೊಡಗಿಕೊಂಡಿರುವದು ಶ್ಲಾಘನೀಯ ಎಂದು ಹೇಳಿದರು.
ನಮ್ಮ ಪರಂಪರೆ,ಸಂಸ್ಕೃತಿ ಮತ್ತು ಶೈಲಿ ಇವೆಲ್ಲ ಮುಂದಿನ ಪೀಳಿಗೆಗೆ ತಿಳಿಸುವ ದೃಷ್ಟಿಯಿಂದ, ದಸರಾದಲ್ಲಿ ಐದು ದಿನಗಳವರೆಗೆ ಮಕ್ಕಳಿಗೆ ದೇವಿ ಚಿತ್ರ ಬಿಡಿಸಲು ಶ್ರಮಿಸಿದೆ ಎಂದು ಸಂಯೋಜಕಿ ಅಮೃತಾ ಜೋಶಿ ತಿಳಿಸಿದರು.
ಫಾಲ್ಗುಣಿ, ದಿವಾ, ಪವನ, ಶ್ರೇಯಾ ಮತ್ತು ಸ್ಪೂರ್ತಿ ಮಕ್ಕಳೆಲ್ಲ ದುರ್ಗಾ ದೇವಿಯ ಮುಖವನ್ನು ಸೃಷ್ಟಿಸುವ ಕಾರ್ಯದಲ್ಲಿ ತೊಡಗಿಕೊಂಡಿದ್ದರು.
ಪ್ರೊ.ಸುರೇಶ ಗುದಗನವರ ಅಧ್ಯಕ್ಷತೆ ವಹಿಸಿದ್ದರು.
ಪೂರ್ಣಿಮಾ ಗಂಭೀರ, ಅನುಪಮಾ ಶೆಟ್ಟಿ, ಪೂಜಾ ಕರೋಲೆ, ವರ್ಷಾ ಹಂಚಿನಮನಿ, ಶ್ರೀಕಾಂತ ಸಿ.ಕೆ. , ಗಾಳಿ, ಪಾಟೀಲ ಇತರರು ಇದ್ದರು.
ರಶ್ಮೀ ಭಾರದ್ವಾಜ್ ನಿರೂಪಿಸಿ , ವಂದಿಸಿದರು.
ಬೆಳಗಾವಿ ಬಸ್ ನಿಲ್ದಾಣದಲ್ಲಿ ಬಾಲಕನಿಂದ ಬ್ಯಾಗ್ ಎಗ್ಗರಿಸಲು ಯತ್ನ : ಮಹಿಳೆ ಪೊಲೀಸ್ ವಶಕ್ಕೆ
ಸಂಕೇಶ್ವರ ಬಳಿ ಟಿಟಿ, ಕಾರ ನಡುವೆ ಭೀಕರ್ ಅಪಘಾತ ; ಮದುವೆಗೆ ಹೊರಟಿದ್ದ ಟೆಂಪೋ ಟ್ರಾವೆಲ್ ರ ಪಲ್ಟಿ,
ಬೆಳಗಾವಿಯಲ್ಲಿ ರಾಜ್ಯಸಭೆ ಸ್ಥಾನಕ್ಕೆ ಜೋರಾದ ಲಾಬಿ : ಕಡಾಡಿ ಅಧಿಕಾರವಧಿ ಅಂತ್ಯ : ಹಲವು ಮುಖಂಡರು ಮುಂಚೂನೆಯಲ್ಲಿ
ಬೆಳಗಾವಿಯ ಹಾರ್ಡ್ ವೇರ್ ಅಂಗಡಿಯಲ್ಲಿ ಬೆಂಕಿ ಅವಘಡ : ಲಕ್ಷಾಂತರ ಹಾನಿ
ಅಕ್ರಮ ಚಟುವಟಿಕೆ ಎಸಗಿದರೆ ಗಡಿಪಾರದ ಎಚ್ಚರಿಕೆ: ಪೊಲೀಸ ಠಾಣೆಯಲ್ಲಿ ರೌಡಿಶೀಟರ್ ಗಳ ಪರೇಡ್
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ 