ಅನ್ನದಾತನಿಗೆ ಹರ್ಷ ಮೂಡಿಸಿದ ಪ್ಯಾಕೇಜ್: ಕೂಚಬಾಳ

ಲೋಕದರ್ಶನವರದಿ

ತಾಳಿಕೋಟೆ14:ರೈತಸ್ನೇಹಿ ಪ್ಯಾಕೇಜ್ ನೊಂದಿಗೆ ದೇಶದ ಬೆನ್ನೆಲುಬು ರೈತನಿಗೆ ಆಧಾರ ಸ್ಥಂಭವಾಗಿ ಅನೇಕ ಸವಲತ್ತುಗಳನ್ನು ಪ್ರಧಾನಿ ನರೇಂದ್ರ ಮೋದಿಜಿ ಅವರು ಪ್ಯಾಕೇಜ್ನಲ್ಲಿ ಒದಗಿಸಿದ್ದಾರೆಂದು ಬಿಜೆಪಿ ಜಿಲ್ಲಾ ಅಧ್ಯಕ್ಷ ಆರ್.ಎಸ್.ಪಾಟೀಲ(ಕೂಚಬಾಳ) ಅವರು ಹೇಳಿದರು.

  ಗುರುವಾರರಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು 30 ಸಾವಿರ ಕೊಟಿ ನಬಾರ್ಡನಡಿ ಹಾಗೂ 2.5ಲಕ್ಷ ಹೆಚ್ಚುವರಿ  ರೈತರಿಗೆ 1.20 ಲಕ್ಷ ಕೋಟಿ  ಹೆಚ್ಚುವರಿ ಸಾಲ ಸೌಲಭ್ಯ, 25 ಸಾವಿರ ಕೋಟಿ ಕಿಸಾನ ಕ್ರೇಡಿಟ್ ಕಾರ್ಡ ಹೊಂದಿದವರಿಗೆ ಸಾಲ ಸೌಲಭ್ಯ, 400 ಕ್ಕೂ ಹೆಚ್ಚು ಬ್ಯಾಂಕಗಳಲ್ಲಿ ಪಿಎಂ ಕಿಸಾನ್ ಸಮ್ಮಾನ್ ಯೋಜನೆಯಡಿ ಬೆಳೆಖರಿದಿಗೆ ಸಹಾಯಧನ ಹಾಗೂ ಮೀನುಗಾರಿಕೆ ಹೈನುಗಾರಿಕೆಗೂ ಕಿಸಾನ ಕ್ರೇಡಿಟ್ ಕಾರ್ಡ ವಿಸ್ತರಣೆ ಕೊರೋನಾ ಮಹಾಮಾರಿಯಿಂದ ತತ್ತರಿಸಿದ ಜನರಿಗೆ ಹಸಿವು ಇಂಗಿಸುವ ನಿಟ್ಟಿನಲ್ಲಿ ಒನ್ ನೇಷನ್-ಒನ್ ರೇಷನ್ ಕಾರ್ಡನೊಂದಿಗೆ 23 ರಾಜ್ಯದ 63 ಕೋಟಿ ಜನರಿಗೆ ಹೊಸದಾಗಿ ರೇಷನ್  ಕಾರ್ಡ ವಿತರಿಸಿದೆ, ಕಡುಬಡವ ವಲಸೆಕಾಮರ್ಿಕರಿಗೂ 3 ತಿಂಗಳ ಉಚಿತ ರೇಷನ್ ಹಾಗೂ ಬಾಡಿಗೆರಹಿತ ವಸತಿ ಸೌಲಭ್ಯಕ್ಕೆ ಅರ್ಹಗೊಳಿಸಿದೆ, 25 ಲಕ್ಷ ಮಧ್ಯಮವರ್ಗದ ಜನರಿಗೇ ಮನೆಕಟ್ಟಲು ಸಬ್ಸಿಡಿ ಸಾಲಸೌಲಭ್ಯ, ಹಾಗೂ 50 ಲಕ್ಷ  ಬೀದಿಬದಿ ವ್ಯಾಪಾರಿಗಳ ಜೀವನ ಸುಧಾರಿಸಲು 50ಸಾವಿರ ಕೋಟಿ ವಿಶೇಷ ಸಾಲದಡಿ ತಲಾ 10000 ಸಾಲ ನೀಡಿಕೆ, ಮುದ್ರಾ ಶೀಶು ಸಾಲ, ಯೋಜನೆಯಡಿ  ಸಾಲ ಸಬ್ಸಿಡಿ ಯೋಜನೆ 2%ಬಡ್ಡಿಕಡಿತದಡಿ ಮರುಪಾವತಿಗೆ ಕಂತು ವಿಸ್ತರಣೆ, ಉದ್ಯೋಗ ಸೃಷ್ಟಿಗಾಗಿ ಬುಡಕಟ್ಟು ಆದಿವಾಸಿಗಳಿಗೆ  ಅರಣ್ಯದಲ್ಲಿ  ಉದ್ಯೋಗ ಸೃಷ್ಟಿಗೆ 6000 ಕೊಟಿ ಹೀಗೆ ಸಾಲು,ಸಾಲುಗಳ ಯೋಜನೆಗಳಡಿ ಎಲ್ಲವರ್ಗಕ್ಕೂ ಸ್ನೇಹಿಯಾಗಿ ಇಂತಹ ಆಥರ್ಿಕ ಸಂಕಷ್ಟದಲ್ಲೂ,ಕೋರೋನಾದ ಭೀಕರತೆಯ ಮಧ್ಯದಲ್ಲೂ  ಇಂತಹ ಪ್ಯಾಕೇಜ್ ಘೋಷಿಸಿರುವುದು ಸ್ವಾಗತಾರ್ಹವಾಗಿದೆ ಎಂದು ಭಾಜಪಾ ಜಿಲ್ಲಾಧ್ಯಕ್ಷರಾದ ಶ್ರೀಆರ್.ಎಸ್.ಪಾಟೀಲ(ಕೂಚಬಾಳ) ಅವರು ಹೇಳಿದ್ದಾರೆ.