ಗ್ರಾಮೀಣ ವಿದ್ಯಾರ್ಥಿಗೆ ಒಲಿದ ಪಿಎಸ್‌ಐ ಹುದ್ದೆ
PSI post awarded to rural student
ಗ್ರಾಮೀಣ ವಿದ್ಯಾರ್ಥಿಗೆ ಒಲಿದ ಪಿಎಸ್‌ಐ ಹುದ್ದೆ
ಹೂವಿನಹಡಗಲಿ :25- ಪಿಎಸ್‌ಐ ಪರೀಕ್ಷೆಯಲ್ಲಿ ಫಲಿತಾಂಶ ಪ್ರಕಟಗೊಂಡಿದ್ದು ತಾಲೂಕಿನ ಅಡವಿಮಲ್ಲನಕೇರಿ ಗ್ರಾಮದ ದಿ. ಹುರಿಳಿಹಾಳ್ ವೀರ್ಪ ಹಾಗೂ ವಿಶಾಲಾಕ್ಷಮ್ಮ ಅವರ ಮಗ ವಿನಾಯಕ ಹುರುಳಿಹಾಳ್ ಅವರು ಕಲ್ಯಾಣ ಕರ್ನಾಟಕ ವಿಭಾಗಕ್ಕೆ 16ನೇ ರಾಂಕ್ ಪಡೆದು ಪಿಎಸ್‌ಐ ಹುದ್ದೆಗೆ ನೇಮಕವಾಗಿದ್ದು ಅವರ ಸಾಧನೆಗೆ ಗ್ರಾಮಸ್ಥರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ ವಿನಾಯಕ ಪ್ರಾಥಮಿಕ ಶಿಕ್ಷಣವನ್ನು ಇಟಗಿಯ ಮುರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಪೂರ್ಣಗೊಳಿಸಿ ನಂತರ ಮೂಡಬಿದರೆಯಲ್ಲಿ ಪಿಯುಸಿ ಹಂತ ಮುಗಿಸಿದ್ದಾರೆ ಪದವಿ ಶಿಕ್ಷಣವನ್ನು ಹೊಸಪೇಟೆಯ ವಿಎನಸಿ ಕಾಲೇಜ್, ಉನ್ನತ ಪದವಿಯನ್ನ ಶಿವಮೊಗ್ಗದಲ್ಲಿ ಮುಗಿಸಿದ್ದಾರೆ. ಓದುವ ವಯಸ್ಸಿನಲ್ಲಿ ತಂದೆಯನ್ನು ಕಳೆದುಕೊಂಡು ತುಂಬಾ ದುಃಖಿತನಾದರೂ ಎಡಬಿಡದೆ ನಿರಂತರವಾಗಿ ಶ್ರಮವಹಿಸಿ ಶಿಕ್ಷಣದ ಕಡೆಗೆ ಗಮನ ಹರಿಸಿ ಜೀವನದಲ್ಲಿ ಸಾಧಿಸಬೇಕೆಂಬ ಛಲದಿಂದ ಸ್ಪರ್ಧಾತ್ಮಕ ಪರೀಕ್ಷೆ ಎದುರಿಸಿ ಪಿಎಸ್‌ಐ ಹುದ್ದೆಯನ್ನು ಅಲಂಕರಿಸಿದ್ದಾರೆ ಚಿಕ್ಕಪ್ಪ ದೊಡ್ಡಪ್ಪ ಸಹಕಾರದೊಂದಿಗೆ ಹೆಚ್ಚಿನ ಶಿಕ್ಷಣವನ್ನು ಧಾರವಾಡದಲ್ಲಿ ಮತ್ತು ಕೆಲವು ಕಾಲ ಬೆಂಗಳೂರಿನ ತಮ್ಮ ಮಾವನಾದ ಬಸವರಾಜ ಮನೆಯಲ್ಲಿ ಅಭ್ಯಾಸ ಮಾಡಿ ಪಿಎಸ್‌ಎ ಹುದ್ದೆ ಅಲಂಕರಿಸಿದ್ದಾರೆ. ಉನ್ನತ ಉದ್ಯೋಗ ಪಡೆಯಲು ಬಡತನವೆಂಬ ಅಸ್ತ್ರ ಅಡ್ಡಿಯಾದರು ತಂದೆ ತಾಯಿ ಗುರುಗಳ ಆಶೀರ್ವಾದೊಂದಿಗೆ ಛಲ ಬಿಡದೆ ಓದಿ ಈ ಸಾಧನೆ ಗೈದಿದ್ದಾರೆ ವಿದ್ಯಾರ್ಥಿಯ ಈ ಸಾಧನೆ ಅಡವಿಮಲ್ಲನಕೇರಿ ಗ್ರಾಮದ ಸರ್ವ ನಾಗರಿಕರು ಸ್ನೇಹಿತರು ಬಂಧು ಬಳಗದವರು ಹಾಗೂ ತಾಲೂಕಿನ ಎಲ್ಲಾ ಬಾಂಧವರು ಇದು ಹೆಮ್ಮೆಯ ಸಂಗತಿ ಎಂದು ಸಿಹಿ ಅಂಚಿ ಸಂಭ್ರಮಿಸಿ ಶುಭಾಶಯಗಳನ್ನು ಕೋರಿದ್ದಾರೆ.
ಅಕ್ರಮ ಚಟುವಟಿಕೆ ಎಸಗಿದರೆ ಗಡಿಪಾರದ ಎಚ್ಚರಿಕೆ: ಪೊಲೀಸ ಠಾಣೆಯಲ್ಲಿ ರೌಡಿಶೀಟರ್ ಗಳ ಪರೇಡ್
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ 