ಪ.ಪಂ ಇ-ಸ್ವತ್ತು ನೀಡಲು ಕಾಲಹರಣ: ಕರವೇ ಕಾರ್ಯಕರ್ತರ ಪ್ರತಿಭಟನೆಯ ಎಚ್ಚರಿಕೆ
PP is wasting time to issue e-assets: Karave activists warn of protest
ದೇವರಹಿಪ್ಪರಗಿ 01: ಪ.ಪಂ ವ್ಯಾಪ್ತಿಯ ಕೆಲ ವಾರ್ಡ ನಿವಾಸಿಗಳಿಗೆ ಕಂಪ್ಯೂಟರ್ ಉತಾರಿ ನೀಡಲು ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಕಾಲಹರಣ ಮಾಡುತ್ತಿದ್ದಾರೆ. ಕೂಡಲೇ ಸಾರ್ವಜನಿಕರಿಗೆ ಕಂಪ್ಯೂಟರ್ ಉತಾರಿ (ಇ-ಸ್ವತ್ತು) ನೀಡಬೇಕು ಇಲ್ಲದಿದ್ದರೆ ಕರ್ನಾಟಕ ರಕ್ಷಣಾ ವೇದಿಕೆ (ಪ್ರವೀಣ್ ಶೆಟ್ಟಿ ಬಣ) ವತಿಯಿಂದ ಪಟ್ಟಣದ ನಿವಾಸಿಗಳ ಜೊತೆಗೂಡಿ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಬೇಕಾಗುತ್ತದೆ ಎಂದು ತಹಶೀಲ್ದಾರ್ ಪ್ರಕಾಶ ಸಿಂದಗಿ ಅವರಿಗೆ ಮನವಿ ಪತ್ರ ಸಲ್ಲಿಸಿದರು.ನಂತರ ಸುದ್ದಿಗಾರರ ಜೊತೆ ಮಾತನಾಡಿದ ಕರವೇ ತಾಲೂಕು ಘಟಕದ ಅಧ್ಯಕ್ಷರಾದ ರಹೀಮಾನ್ ಕನಕಲ್ ಅವರು, ಪ.ಪಂ ವ್ಯಾಪ್ತಿಯ ಕೆಲ ವಾರ್ಡುಗಳ ನಿವಾಸಿಗಳಿಗೆ ಕಂಪ್ಯೂಟರ್ ಉತಾರಿ(ಸ್ವತ್ತು) ನೀಡಲು ಅಧಿಕಾರಿಗಳಿಗೆ ತಿಳಿಸಬೇಕು. ಉತಾರಿಗಳಲ್ಲಿ ಸರ್ಕಾರಿ ಜಾಗ ಹೆಸರು ಬರುತ್ತಿದೆ ತಾಂತ್ರಿಕ ಸಮಸ್ಯೆ ಇದೆ ಎಂದು ಕಾಲಹರಣ ಮಾಡುತ್ತಿದ್ದಾರೆ.
ಮುಖ್ಯಾಧಿಕಾರಿಗಳಿಗೆ ಸಾರ್ವಜನಿಕರ ಸಮಸ್ಯೆಗಳ ಕುರಿತು ತಿಳಿಸಿ ಸರಿಪಡಿಸಲು ವಾರದ ಗಡುವು ನೀಡಲಾಗಿದೆ. ಸುಮಾರು 30ಕ್ಕೂ ಹೆಚ್ಚು ವರ್ಷಗಳ ಕಾಲ ಮನೆ ಕಟ್ಟಿಸಿ ಸಾವಿರಾರು ಕುಟುಂಬಗಳು ವಾ.ನಂ-05/08/12/16ಹಾಗೂ 17ನೆ ವಾರ್ಡ ನಿವಾಸಿಗಳು ವಾಸವಾಗಿದ್ದಾರೆ. ಸರ್ಕಾರದ ಸಹಾಯ ಸೌಲತ್ತುಗಳು ಪಡೆಯಲು ಕಂಪ್ಯೂಟರ್ ಉತಾರಿ (ಇ-ಸ್ವತ್ತು) ಬೇಕಾಗುತ್ತದೆ. ಶೀಘ್ರದಲ್ಲಿ ಸಮಸ್ಯೆಯನ್ನು ಪರಿಹರಿಸಿ ಸಾರ್ವಜನಿಕರಿಗೆ ನ್ಯಾಯ ಒದಗಿಸಬೇಕು ಇಲ್ಲದಿದ್ದರೆ ಬರುವಂತ ದಿನಗಳಲ್ಲಿ ಪಟ್ಟಣ ಪಂಚಾಯಿತಿ ಮುಂದೆ ಸಾರ್ವಜನಿಕ ರಾಜ್ಯದ ಕರವೇಯಿಂದ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಬೇಕಾಗುತ್ತದೆ ಎಂದು ಹೇಳಿದರು.ಇದೇ ಸಂದರ್ಭದಲ್ಲಿ ಕರವೇ ಉಪಾಧ್ಯಕ್ಷ ನಾಗೇಶ ಕಮತಗಿ,ಪ್ರ.ಕಾ ಅಶೋಕ ಗೊಲ್ಲರ, ಮುಖಂಡರುಗಳಾದ ಹುಸೇನ ಗೌಂಡಿ, ಶೇಕಸಾಬ ಹವಾಲ್ದಾರ, ಹಸನಸಾಬ ಹರನಾಳ, ದೀಲೀಪ ದೊಡ್ಡಮನಿ, ಪ್ರಕಾಶ ಮಣೂರ, ಮೈಬೂಬ್ ದಪೇದಾರ, ಭೀಮನಗೌಡ ನಾಗರಾಳ ಸೇರಿದಂತೆ ಹಲವಾರು ಜನ ಮುಖಂಡರು ಉಪಸ್ಥಿತರಿದ್ದರು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 