'ಪಿಎಂಜಿ ದಿಶಾ' ಡಿಜಿಟಲ್ ಸಾಕ್ಷರತಾ ಅಭಿಯಾನ

ಲೋಕದರ್ಶನ ವರದಿ

ಬೈಲಹೊಂಗಲ: ತಾಲೂಕಿನ ಬೂದಿಹಾಳದ ಸರಕಾರಿ ಪ್ರೌಢಶಾಲೆಯಲ್ಲಿ ಪ್ರಧಾನ ಮಂತ್ರಿ ಗ್ರಾಮೀಣ ಡಿಜಿಟಲ್ ಸಾಕ್ಷರತಾ ಅಭಿಯಾನ ಕಾರ್ಯಕ್ರಮದ ಉದ್ಘಾಟನೆ ಮಾಡಲಾಯಿತು. 

   ಅಧ್ಯಕ್ಷತೆ ವಹಿಸಿದ್ದ ಮುಖ್ಯಶಿಕ್ಷಕ ಎನ್.ಆರ್ ಠಕ್ಕಾಯಿ ಮಾತನಾಡಿ ಇಂದು ಡಿಜಿಟಲ್ ಸಾಕ್ಷರತೆಯಿಂದ ಅನೇಕ ಪ್ರಯೋಜನಗಳಿದ್ದು ಮನೆಯಲ್ಲಿದ್ದುಕೊಂಡೇ ಸುಲಭವಾಗಿ ಸಾಕಷ್ಟು ಸೇವಾ ಸೌಲಭ್ಯಗಳನ್ನು ಪಡೆಯಬಹುದಾಗಿದೆ ಎಂದು ಅಭಿಪ್ರಾಯಪಟ್ಟರು. 

   ತರಬೇತುದಾರ ಮುಷ್ತಾಕಲಿ ಮುಲ್ಲಾ ಮಾತನಾಡಿ ಗ್ರಾಮೀಣ ವಿದ್ಯಾರ್ಥಿ ಗಳಿಗಾಗಿ ಇದೊಂದು ಉತ್ತಮ ಯೋಜನೆಯಾಗಿದ್ದು 14 ವರ್ಷ ತುಂಬಿದ ಎಲ್ಲ ವಿದ್ಯಾರ್ಥಿಗಳಿಗೆ  ಉಚಿತ 20 ಗಂಟೆಗಳ ತರಬೇತಿಯನ್ನು ನೀಡುವುದಲ್ಲದೇ ಕೊನೆಯಲ್ಲಿ ಆನ್ಲೈನ್ ಪರೀಕ್ಷೆ ನಡೆಸಿ ಉತ್ತೀರ್ಣರಾದವರಿಗೆ ಪ್ರಮಾಣಪತ್ರ ಕೊಡಲಾಗುತ್ತದೆ ಎಂದು ಹೇಳಿದರು.

     ಕಾರ್ಯಕ್ರಮದಲ್ಲಿ ಶಿಕ್ಷಕ ಎ.ಎಚ್ ಪಾಟೀಲ, ಆರ್. ಸಿ ಸೊರಟೂರ, ಎಸ್.ಬಿ ಭಜಂತ್ರಿ ಹಾಗೂ ವಿದ್ಯಾಥರ್ಿಗಳು ಹಾಜರಿದ್ದರು. ಪಿ.ಎಸ್ ಗುರುನಗೌಡರ ನಿರೂಪಿಸಿದರು. ಐ.ಎಸ್ ಮುದಗಲ್ ವಂದಿಸಿದರು