ಕಾಶ್ಮೀರಿ ಪಂಡಿತ್ ನಿಯೋಗದಿಂದ ಪ್ರಧಾನಿ ಮೋದಿ ಭೇಟಿ: ಜ-ಕಾಶ್ಮೀರಕ್ಕೆ ನೀಡಿದ್ದ ವಿಶೇಷ ಸ್ಥಾನಮಾನ ರದ್ದು ನಿರ್ಧಾರಕ್ಕೆ ಬೆಂಬಲ

ಹೂಸ್ಟನ್, ಅಮೆರಿಕ, ಸೆ 22   ಪ್ರಧಾನಿ ನರೇಂದ್ರ ಮೋದಿ ಅಮೆರಿಕಕ್ಕೆ ಬಂದಿಳಿದ ಕೆಲವೇ ಕ್ಷಣಗಳಲ್ಲಿ ಕಾಶ್ಮೀರಿ ಪಂಡಿತ ಸಮುದಾಯದ ನಿಯೋಗವೊಂದು ಅವರನ್ನು ಭೇಟಿಯಾಯಿತು. 

 ಜಮ್ಮು-ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ಕಲ್ಪಿಸಿದ್ದ ಸಂವಿಧಾನದ 370 ನೇ ವಿಧಿಯನ್ನು ರದ್ದುಗೊಳಿಸಿದ ಕೇಂದ್ರದ ನಿರ್ಧಾರಕ್ಕೆ ಕಾಶ್ಮೀರಿ ಪಂಡಿತರು ಬೆಂಬಲ ಘೋಷಿಸಿದರು. 

ಹೂಸ್ಟನ್ನಲ್ಲಿ ಕಾಶ್ಮೀರಿ ಪಂಡಿತ ಸಮುದಾಯದ ನಿಯೋಗವು ಪ್ರಧಾನಿಯನ್ನು ಭೇಟಿ ಮಾಡಿತು. ಭಾರತದ ಪ್ರಗತಿಗೆ ಮತ್ತು ಪ್ರತಿಯೊಬ್ಬ ಭಾರತೀಯರ ಸಬಲೀಕರಣಕ್ಕಾಗಿ ಅವರು ಕೈಗೊಳ್ಳುತ್ತಿರುವ ಕ್ರಮಗಳನ್ನು ಅವರು ಬೆಂಬಲಿಸಿದ್ದಾರೆ ಎಂದು ಪ್ರಧಾನಿ ಕಚೇರಿ ಟ್ವೀಟ್ನಲ್ಲಿ ತಿಳಿಸಿದೆ. 

ಜಮ್ಮು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ಕಲ್ಪಿಸಿದ್ದ 370 ನೇ ವಿಧಿಯನ್ನು ರದ್ದುಗೊಳಿಸಿದ ಮತ್ತು ಜಮ್ಮು ಮತ್ತು ಕಾಶ್ಮೀರ ಮತ್ತು ಲಡಾಖ್ ಎಂಬ ಎರಡು ಕೇಂದ್ರಾಡಳಿತ ಪ್ರದೇಶವಾಗಿ ವಿಭಜಿಸಿದ ಆಗಸ್ಟ್ ಐದರ ನಂತರ ಇದೇ ಮೊದಲ ಬಾರಿಗೆ ಪ್ರಧಾನಿ ಅಮೆರಿಕಕ್ಕೆ ಭೇಟಿ ನೀಡಿದ್ದಾರೆ. 

ಪ್ರಧಾನಿ ಮೋದಿಯವರು ತಮ್ಮ ಏಳು ದಿನಗಳ ಅಮೆರಿಕ ಪ್ರವಾಸದ ಮೊದಲ ದಿನವೇ ದಾವೂದಿ ಬೊಹ್ರಾ ಸಮುದಾಯ ಮತ್ತು ಸಿಖ್ ಸಮುದಾಯದ ಪ್ರತಿನಿಧಿಗಳು ಅವರನ್ನು ಸನ್ಮಾನಿಸಿದರು. 

ದಾವೂದಿ ಬೊಹ್ರಾ ಸಮುದಾಯದ ನಿಯೋಗ ಕೂಡ ಪ್ರಧಾನಿ ಅವರನ್ನು ಭೇಟಿ ಮಾಡಿತು, ಈ ವೇಳೆ ಕಳೆದ ವರ್ಷ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಳ್ಳಲು ಮೋದಿಯವರು ಇಂದೋರ್ಗೆ ಭೇಟಿ ನೀಡಿದ್ದನ್ನು ಬೊಹ್ರಾ ಸಮುದಾಯ ಸ್ಮರಿಸಿಕೊಂಡಿತು. 

ದಾವೂದಿ ಬೊಹ್ರಾ ಸಮುದಾಯವು ಹೂಸ್ಟನ್ನಲ್ಲಿ ನರೇಂದ್ರ ಮೋದಿಯವರನ್ನು ಸನ್ಮಾನಿಸಿತು. ತಮ್ಮ ಸಮುದಾಯದ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಳ್ಳಲು ಮೋದಿಯವರು ಕಳೆದ ವರ್ಷ ಇಂದೋರ್ಗೆ ಭೇಟಿ ನೀಡಿದ್ದನ್ನು ಅವರು ನೆನಪಿಸಿಕೊಂಡರು. ಪ್ರಧಾನಿ ಮೋದಿಯವರು ಸೈಯದ್ನಾ ಸಾಹಿಬ್ ಅವರೊಂದಿಗಿನ ಒಡನಾಟವನ್ನು ನೆನಪಿಸಿಕೊಂಡರು ಎಂದು ಪ್ರಧಾನಿ ಕಚೇರಿ ಹೇಳಿದೆ. 

ದಾವೂದಿ ಬೋಹ್ರಾ, ಶಿಯಾ ಇಸ್ಲಾಂನ ಇಸ್ಮಾಯಿಲಿ ಶಾಖೆಯೊಳಗಿನ ಒಂದು ಪಂಥವಾಗಿದ್ದು ಗುಜರಾತ್ನಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ವಾಸಿಸುತ್ತಿದ್ದಾರೆ. 

ದಾವೂದಿ ಬೊಹ್ರಾಸ್ನ ಹೆಚ್ಚಿನ ಜನಸಂಖ್ಯೆಯು ಪಾಕಿಸ್ತಾನ, ಯೆಮೆನ್, ಪೂರ್ವ ಆಫ್ರಿಕಾ ಮತ್ತು ಮಧ್ಯಪ್ರಾಚ್ಯದಲ್ಲೂ ವಾಸಿಸುತ್ತಿದೆ. 

ಯುರೋಪ್, ಉತ್ತರ ಅಮೆರಿಕಾ, ಆಗ್ನೇಯ ಏಷ್ಯಾ ಮತ್ತು ಆಸ್ಟ್ರೇಲಿಯಾದಲ್ಲಿ ಗಮನಾರ್ಹ ಸಂಖ್ಯೆಯ ಬೋಹ್ರಾ ಜನರು ವಾಸಿಸುತ್ತಿದ್ದಾರೆ. 

ಹೂಸ್ಟನ್ನಲ್ಲಿರುವ ಸಿಖ್ ಸಮುದಾಯದವರು ಪ್ರಧಾನ ಮಂತ್ರಿಯನ್ನು ಸ್ವಾಗತಿಸಿದರು. ಕೇಂದ್ರ ಸರ್ಕಾರವು ತೆಗೆದುಕೊಂಡ ಕೆಲವು ಮಹತ್ವದ ನಿರ್ಧಾರಗಳನ್ನು ಸಿಖ್ಖರು ಶ್ಲಾಘಿಸಿದರು. 

ಪ್ರಧಾನಿ ನರೇಂದ್ರ ಮೋದಿ, ಸಮುದಾಯದ ಸದಸ್ಯರೊಂದಿಗೆ ಸಂವಹನ ನಡೆಸಿದರು, ಈ ಸಂದರ್ಭದಲ್ಲಿ ಅವರು ಕೇಂದ್ರ ಸರ್ಕಾರವು ತೆಗೆದುಕೊಂಡ ಕೆಲವು ಮಹತ್ವಪೂರ್ಣ ನಿರ್ಧಾರಗಳನ್ನು ಅಭಿನಂದಿಸಿದರು ಎಂದು ಪಿಎಂಒ ಸಾಮಾಜಿಕ ಜಾಲತಾಣದಲ್ಲಿ ತಿಳಿಸಿದೆ. 

ಇದು ಹೂಸ್ಟನ್ನಲ್ಲಿ ಪ್ರಕಾಶಮಾನವಾದ ಮಧ್ಯಾಹ್ನವಾಗಿದೆ. ಈ ಕ್ರಿಯಾತ್ಮಕ ಮತ್ತು ಶಕ್ತಿಯುತ ನಗರದಲ್ಲಿ ವ್ಯಾಪಕವಾದ ಕಾರ್ಯಕ್ರಮಗಳನ್ನು ಎದುರು ನೋಡುತ್ತಿದ್ದೇನೆ ಎಂದು ಮೋದಿ ಇಲ್ಲಿಗೆ ಬಂದ ನಂತರ ತಮ್ಮ ಮೊದಲ ಟ್ವೀಟ್ನಲ್ಲಿ ತಿಳಿಸಿದ್ದಾರೆ. 

ಪ್ರಧಾನಿ ಮೋದಿಯವರ ಹೂಸ್ಟನ್ನಲ್ಲಿ ಇಂಧನ ವಲಯದ ಸಿಇಒಗಳೊಂದಿಗೆ ಸಭೆ ನಡೆಸಿದರು. ಮಾತ್ರವಲ್ಲ  

ಟೆಲ್ಲುರಿಯನ್ ಮತ್ತು ಪೆಟ್ರೋನೆಟ್ ಎಲ್ಎನ್ಜಿ ಲಿಮಿಟೆಡ್ ಇಂಡಿಯಾ (ಪಿಎಲ್ಎಲ್) ಜೊತೆ ಡ್ರಿಫ್ಟ್ ವುಡ್ನಲ್ಲಿ ಈಕ್ವಿಟಿ ಹೂಡಿಕೆಯ ಮೂಲಕ 5 ಮಿಲಿಯನ್ ಟನ್ಗಳಷ್ಟು ಎಲ್ಎನ್ಜಿ ಒಪ್ಪಂದಕ್ಕೆ ಸಹಿ ಹಾಕಿದರು. 

ಮೋದಿ ಸೆಪ್ಟೆಂಬರ್ 27 ರವರೆಗೆ ಅಮೆರಿಕದಲ್ಲಿರುತ್ತಾರೆ, ಅವರ ಪ್ರವಾಸದ ಕೊನೆಯ ದಿನದಂದು ಅವರು ವಿಶ್ವಸಂಸ್ಥೆಯ ಸಾಮಾನ್ಯ ಸಭೆಯನ್ನುದ್ದೇಶಿಸಿ ಮಾತನಾಡಲಿದ್ದಾರೆ. 

ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರೊಂದಿಗೆ ಭಾನುವಾರ ನಡೆಯಲಿರುವ 'ಹೌಡಿ ಮೋದಿ' ಕಾರ್ಯಕ್ರಮದಲ್ಲಿ ಅವರು ಬಹುನಿರೀಕ್ಷಿತ ಭಾಷಣ ಮಾಡಲಿದ್ದಾರೆ. 50 ಸಾವಿರಕ್ಕೂ ಹೆಚ್ಚು ಭಾರತೀಯ ಅಮೆರಿಕನ್ನರು ಇದರಲ್ಲಿ ಭಾಗವಹಿಸಲಿದ್ದಾರೆ. 

 50,000 ಕ್ಕೂ ಹೆಚ್ಚು ಭಾರತೀಯ-ಅಮೆರಿಕನ್ನರು ಭಾಗವಹಿಸುತ್ತಿರುವುದರಿಂದ ಇದು ದಾಖಲೆಯ ಕಾರ್ಯಕ್ರಮ ಎಂಬ ಹೆಗ್ಗಳಿಕೆಗೆ ಪಾತ್ರವಾಗಲಿದೆ. 

ಸೋಮವಾರ, ವಿಶ್ವಸಂಸ್ಥೆಯಲ್ಲಿ ನಡೆಯಲಿರುವ  ಹವಾಮಾನ ಕ್ರಿಯಾ ಶೃಂಗಸಭೆಯಲ್ಲಿ ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಅವರೊಂದಿಗೆ ಪ್ರಧಾನಿ ಮೋದಿ ಭಾಗವಹಿಸಲಿದ್ದಾರೆ.