ಪ್ರಧಾನಿ ಮೋದಿ, ಇಮ್ರಾನ್ ಖಾನ್ ಇಬ್ಬರೂ ಒಂದೇ: ರಮಾನಾಥ ರೈ

ಮಂಗಳೂರು, ಸೆ 8    ಪ್ರಧಾನಿ ನರೇಂದ್ರ ಮೋದಿ ಮತ್ತು ಪಾಕಿಸ್ತಾನ ಪ್ರಧಾನಿ ಇಮ್ರಾನ್ಖಾನ್ ಇಬ್ಬರೂ ಒಂದೇ ಆಗಿದ್ದು, ಒಂದು ತಾಯಿಯ ಮಕ್ಕಳ ರೀತಿಯಲ್ಲಿದ್ದಾರೆ ಎಂದು ಮಾಜಿ ಸಚಿವ ರಮಾನಾಥ ರೈ ವ್ಯಂಗ್ಯವಾಡಿದ್ದಾರೆ.  ನಗರದ ಕಾಂಗ್ರೆಸ್ ಕಚೇರಿಯಲ್ಲಿ ಭಾನುವಾರ ಸುದ್ದಿಗೋಷ್ಠಿಯ ಮಾತನಾಡಿದ ಅವರು,  ಪಾಕಿಸ್ತಾನದಲ್ಲಿ ಚುನಾವಣೆ ಗೆಲ್ಲಲು ಇಮ್ರಾನ್ ಖಾನ್ ಭಾರತವನ್ನು ಟೀಕೆ ಮಾಡುತ್ತಾರೆ. ಅದೇ ರೀತಿ ಭಾರತದಲ್ಲಿ ಚುನಾವಣೆ ಗೆಲ್ಲಲು ಪ್ರಧಾನಿ ಮೋದಿ ಪಾಕಿಸ್ತಾನದ ವಿರುದ್ಧ ಪ್ರಚೋದನಾಕಾರಿ ಹೇಳಿಕೆಗಳನ್ನು ನೀಡುತ್ತಾರೆ ಎಂದು ದೂರಿದರು.  ರಾಜ್ಯ ಭೀಕರ ಪ್ರವಾಹ ಪರಿಸ್ಥಿತಿ ಎದುರಿಸಿದ್ದರೂ ಪ್ರಧಾನಿ ನರೇಂದ್ರ ಮೋದಿ ಯಾವುದೇ ಪ್ರದೇಶಕ್ಕೆ ಭೇಟಿ ನೀಡಿಲ್ಲ. ಆದರೆ, ಪ್ರಚಾರದಲ್ಲಿ ತೊಡಗಿಸಿಕೊಳ್ಳಲು ಮಾತ್ರ ಅವರಿಗೆ ಸಮಯವಿದೆ ಎಂದು ರಮಾನಾಥ್ ರೈ ಟೀಕಿಸಿದ್ದಾರೆ.